ಬ್ರೇಕಿಂಗ್ ನ್ಯೂಸ್
26-12-20 02:09 pm Source: FILMIBEAT Manjunatha C ಸಿನಿಮಾ
ಆಘಾತಕಾರಿ ಘಟನೆಯಲ್ಲಿ ಮಲಯಾಳಂ ನ ಜನಪ್ರಿಯ ನಟ ಅನಿಲ್ ನೆಡುಮಂಗದ್, ಚಿತ್ರೀಕರಣದ ವೇಳೆ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. 'ಅಯ್ಯಪ್ಪನುಂ ಕೋಶಿಯುಂ' ಸೇರಿ ಹಲವಾರು ಜನಪ್ರಿಯ ಮಲಯಾಳಂ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದ ಅನಿಲ್ ನೆಡುಮಂಗದ್, ಇಂದು (ಡಿಸೆಂಬರ್ 25) ಮಲನ್‌ಕರ ಡ್ಯಾಂನಲ್ಲಿ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮಲನ್‌ಕರ್ ಡ್ಯಾಂ ಬಳಿ ಮಲಯಾಳಂ ಸಿನಿಮಾ 'ಪೀಸ್' ನ ಚಿತ್ರೀಕರಣ ನಡೆಯುತ್ತಿತ್ತು. ಅನಿಲ್ ನೆಡುಮಂಗದ್ ಸಿನಿಮಾದಲ್ಲಿ ಪಾತ್ರವಹಿಸಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಅನಿಲ್ ಹಾಗೂ ಕೆಲವರು ಸ್ನಾನ ಮಾಡಲೆಂದು ಮಲನ್‌ಕರ ಡ್ಯಾಂ ಗೆ ಹೋಗಿದ್ದರು, ಈ ವೇಳೆ ಅನಿಲ್ ನೀರಲ್ಲಿ ಮುಳುಗಿದ್ದಾರೆ.

ಸಂಜೆ ಆರು ಗಂಟೆಗೆ ದೊರೆತಿದೆ ಮೃತದೇಹ
'ಅನಿಲ್ ಗೆಳೆಯರು ಹೇಳಿರುವಂತೆ, ಮಧ್ಯಾಹ್ನದ ವೇಳೆಗೆ ಎಲ್ಲರೂ ಸ್ನಾನ ಮಾಡಲು ಹೋದೆವು, ಕೆಲವು ಹೊತ್ತಿನ ಬಳಿಕ ಅನಿಲ್ ಅಲ್ಲೆಲ್ಲೂ ನಮಗೆ ಕಾಣಲಿಲ್ಲ, ಅನಿಲ್ ನೀರಲ್ಲಿ ಮುಳುಗಿರಬಹುದು ಎಂದು ಕೊಂಡು ಎಲ್ಲರೂ ಸೇರಿ ಹುಡುಕಾಡಲು ಆರಂಭಿಸಿದೆವು, ಕೊನೆಗೆ ರಕ್ಷಣಾ ತಂಡದ ನೆರವು ಪಡೆದು ಹುಡುಕಿದಾಗ, ಸಂಜೆ 6 ಗಂಟೆ ವೇಳೆಗೆ ಅನಿಲ್ ಮೃತದೇಹ ಸಿಕ್ಕಿತು' ಎಂದಿದ್ದಾರೆ.

ತೀವ್ರ ಸಂತಾಪ ವ್ಯಕ್ತಪಡಿಸಿದ ಪೃಥ್ವಿರಾಜ್ ಸುಕುಮಾರ್
ಪ್ರತಿಭಾವಂತ ನಟ ಅನಿಲ್ ಸಾವಿಗೆ ಮಲಯಾಳಂ ಸಿನಿಮಾರಂಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅಯ್ಯಪ್ಪನುಂ ಕೋಶಿಯುಂ ನಲ್ಲಿ ಅನಿಲ್ ಜೊತೆ ನಟಿಸಿದ್ದ ಪೃಥ್ವಿರಾಜ್ ಟ್ವೀಟ್ ಮಾಡಿದ್ದು, 'ನನ್ನ ಬಳಿ ಹೇಳಲು ಏನೂ ಮಾತುಗಳಿಲ್ಲ. ನನಗೆ ಏನೂ ಹೇಳಲು ಆಗುತ್ತಿಲ್ಲ. ನೀನು ಶಾಂತಿಯಿಂದ ಇದ್ದೀಯ ಎಂದು ಭಾವಿಸಿದ್ದೇನೆ ಅನಿಲ್ ಅಣ್ಣ' ಎಂದಿದ್ದಾರೆ.

ಕಮ್ಮಾಟಿಪದಂ' ಸಿನಿಮಾದಲ್ಲಿ ಜೊತೆಗೆ ನಟನೆ
'ಕಮ್ಮಾಟಿಪದಂ' ಸಿನಿಮಾದಲ್ಲಿ ಅನಿಲ್ ಜೊತೆ ನಟಿಸಿದ್ದ ಸ್ಟಾರ್ ನಟ ದುಲ್ಕರ್ ಸಲ್ಮಾನ್, 'ಹೃದಯ ಹಿಂಡಿದಂತಾಗಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅನಿಲ್ ಆತ್ಮಕ್ಕೆ ಶಾಂತಿ ಸಿಗಲಿ. ಆತನ ಕುಟುಂಬದ ಪರವಾಗಿ ನನ್ನ ಪ್ರಾರ್ಥನೆಗಳಿವೆ' ಎಂದಿದ್ದಾರೆ.
This News Article is a Copy of FILMIBEAT
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
26-09-26 08:05 pm
HK News Staffer
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm