ಬ್ರೇಕಿಂಗ್ ನ್ಯೂಸ್
14-12-20 11:11 am Source: FILMIBEAT ಸಿನಿಮಾ
“ದ ಡರ್ಟಿ ಪಿಕ್ಚರ್" ಸೇರಿದಂತೆ ಬಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ 33 ವರ್ಷದ ನಟಿ ಆರ್ಯ ಬ್ಯಾನರ್ಜಿ ಕಳೆದ ಶುಕ್ರವಾರ ದಕ್ಷಿಣ ಕೋಲ್ಕತಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೋಲ್ಕತ್ತಾದ ಜೋಧ್ಪುರ್ ಪಾರ್ಕ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನಿಗೂಢವಾಗಿ ಅಸಹಜ ಎನ್ನುವ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿರುವುದನ್ನು ಕಂಡು ಅನೇಕ ಊಹಾಪೋಹಗಳು ಎದ್ದಿದ್ದವು. ಹೀಗಾಗಿ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಸಾಕಷ್ಟು ಸಂದೇಹಮೂಡಿತ್ತು. ಸದ್ಯ ಮರಣೋತ್ತರ ವರದಿ ಬಹಿರಂಗವಾಗಿದ್ದು ನಿಜಾಂಶ ಹೊರಬಿದ್ದಿದೆ.
ಕಳೆದ ಶುಕ್ರವಾರ ಬೆಳಗ್ಗೆ ಮನೆಯ ಬಾಗಿಲನ್ನು ಆರ್ಯಾ ತೆರೆಯದೇ ಇದ್ದುದನ್ನು ಕಂಡ ಮನೆಗೆಲಸದ ಮಹಿಳೆ ನೆರೆಮನೆಯವರ ಬಳಿ ಹೇಳಿದಾಗ, ಸಂದೇಹಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರ್ಯಾ ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಅಪಾರ್ಟ್ಮೆಂಟ್ನ ಮೂರನೇ ಮಹಡಿಯಲ್ಲಿರುವ ಅವರ ಫ್ಲ್ಯಾಟ್ನ ಬಾಗಿಲು ಮುರಿದು ಒಳ ಪ್ರವೇಶಿಸಿದ ಪೊಲೀಸರಿಗೆ ಆರ್ಯಾ ಹೆಣವಾಗಿ ಬಿದ್ದಿರುವುದು ಕಂಡುಬಂದಿತ್ತು.

35 ವರ್ಷದ ಈ ನಟಿ, ಮೂರನೇ ಮಹಡಿಯಲ್ಲಿರುವ ಬೆಡ್ರೂಮಿನಲ್ಲಿ ಮೃತಪಟ್ಟಿದ್ದರು. ಸಾಕುನಾಯಿಯೊಂದಿಗೆ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದ ಆರ್ಯ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆಕೆಯ ಮನೆಯವರೂ ಅಲ್ಲಿಗೆ ಭೇಟಿ ನೀಡುತ್ತಿರಲಿಲ್ಲ. ಆನ್ಲೈನ್ನಲ್ಲೇ ಊಟ-ತಿಂಡಿ ಆರ್ಡರ್ ಮಾಡಿಕೊಂಡು ತಿನ್ನುತ್ತಿದ್ದರು. ಆದ್ದರಿಂದ ಸಾವು ಇನ್ನಷ್ಟು ನಿಗೂಢವಾಗಿತ್ತು.
ಅಲ್ಲದೆ ಆರ್ಯಾ ಮೃತ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಮೂಗಿನಿಂದ ತೀವ್ರ ರಕ್ತಸ್ರಾವ ಆಗಿ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಮಾಡಿದ್ದಾರೆ.
ಇದೀಗ ಆರ್ಯ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಇದು ಕೊಲೆ ಅಥವಾ ಆತ್ಮಹತ್ಯೆಯಲ್ಲ ಎಂದು ವರದಿ ಬಹಿರಂಗಪಡಿಸಿದೆ. "ಇದು ಆತ್ಮಹತ್ಯೆ ಅಥವಾ ಕೊಲೆಯಲ್ಲ. ಇವರು ಯಕೃತ್ತಿನ ಸಿರೋಸಿಸ್ನಿಂದ ಬಳಲುತ್ತಿದ್ದರು. ಅವರ ಹೊಟ್ಟೆಯಲ್ಲಿ ಆಲ್ಕೋಹಾಲ್ ಕಂಡುಬಂದಿದೆ. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ವಿಪರೀತವಾಗಿ ಆಲ್ಕೋಹಾಲ್ ಸೇವನೆ ಮಾಡಿದ್ದರಿಂದ ಸಾವು ಸಂಭವಿಸಿದೆ" ಎಂದು ಕೋಲ್ಕತಾ ಪೊಲೀಸ್ ಜಂಟಿ ಆಯುಕ್ತ ಮುರಳೀಧರ್ ಶರ್ಮಾ ಹೇಳಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಅವರ ರೂಮಿನಲ್ಲಿ ಮದ್ಯದ ಖಾಲಿಯಾಗಿದ್ದ ಬಾಟಲಿಗಳು ಪತ್ತೆಯಾಗಿವೆ. ಇವರು ಖಿನ್ನತೆಯಿಂದ ಕೂಡ ಬಳಲುತ್ತಿದ್ದರು ಎನ್ನಲಾಗಿದೆ. ಆರ್ಯಾ ಬ್ಯಾನರ್ಜಿ ಅವರ ಸಹೋದರಿ ಸಿಂಗಪೂರ್ ನಲ್ಲಿದ್ದು ಆಕೆ ಕೋಲ್ಕತ್ತಾದ ನಿವಾಸದಲ್ಲಿ ಒಂಟಿಯಾಗಿದ್ದರು.
ಪ್ರಸಿದ್ಧ ಸಿತಾರ್ ವಾದಕ ದಿವಂಗತ ಪಂಡಿತ್ ನಿಖಿಲ್ ಬಂಡೋಪಾಧ್ಯಾಯರ ಪುತ್ರಿ ಆಗಿರುವ ಆರ್ಯಾ, ಲವ್ ಸೆಕ್ಸ್ ಔರ್ ದೋಕಾ, ದ ಡರ್ಟಿ ಪಿಚ್ಚರ್ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ ಮುಂಬೈನಲ್ಲಿ ರೂಪದರ್ಶಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.
This News Article is a Copy of FILMIBEAT
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm