ಬ್ರೇಕಿಂಗ್ ನ್ಯೂಸ್
12-11-20 05:40 pm Headline Karnataka News Network ಸಿನಿಮಾ
ಮುಂಬೈ, ನವೆಂಬರ್ 12: ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಸಿಫ್ ಬಾಸ್ರಾ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
53 ವರ್ಷದ ಆಸಿಫ್ ಬಾಸ್ರಾ ಧರ್ಮಶಾಲಾದಲ್ಲಿ ಐದು ವರ್ಷಗಳಿಂದ ಫ್ಲ್ಯಾಟ್ ಒಂದನ್ನು ಬಾಡಿಗೆ ಪಡೆದು ವಾಸವಿದ್ದರು. ಆತ್ಮಹತ್ಯೆ ವಿಚಾರ ಗೊತ್ತಾಗುತ್ತಲೇ ಫಾರೆನ್ಸಿಕ್ ತಜ್ಞರು ಮತ್ತು ಪೊಲೀಸರು ಧಾವಿಸಿದ್ದಾರೆ. ಆದರೆ, ಸಾವಿಗೆ ಕಾರಣ ಏನಿರಬಹುದು ಎನ್ನೋದು ಇನ್ನೂ ಗೊತ್ತಾಗಿಲ್ಲ.
ಇತ್ತೀಚೆಗೆ ಬಾಲಿವುಡ್ ನಟ ಸುಶಾಂತ್ ಸಾವು ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಆಸಿಫ್ ಬಾಸ್ರಾ ಕೂಡ ಸುಶಾಂತ್ ಜೊತೆಗೆ ಕೈ ಪೊ ಚೆ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ರಾಣಿ ಮುಖರ್ಜಿಯ ಹಿಚ್ ಕಿ, ಹೃತಿಕ್ ರೋಶನ್ ನಟನೆಯ ಕೃಷ್ 3, ಶಾಹಿದ್ ಕಪೂರ್ ಮತ್ತು ಕರಿನಾ ಕಪೂರ್ ನಟಿಸಿದ್ದ ಜಬ್ ವೆ ಮತ್, ಅನುರಾಗ್ ಕಶ್ಯಪ್ ಅವರ ಬ್ಲಾಕ್ ಫ್ರೈಡೇ, ಸೈಫ್ ಆಲಿ ಖಾನ್ ಅವರ ಕಾಲಾಕಂದಿ ಚಿತ್ರಗಳಲ್ಲಿ ನಟಿಸಿದ್ದರು. ಟಿವಿ ಕಿರುತೆರೆ ಮತ್ತು ರಂಗಭೂಮಿಯಲ್ಲೂ ಆಸಿಫ್ ಬಾಸ್ರಾ ದೊಡ್ಡ ಹೆಸರು ಮಾಡಿದ್ದರು. ಆಂಧ್ರಪ್ರದೇಶದ ಅಮರಾವತಿಯಲ್ಲಿ ಜನಿಸಿದ್ದ ಆಸಿಫ್, 1989ರಲ್ಲಿ ಮುಂಬೈಗೆ ಪಯಣ ಬೆಳೆಸಿದ್ದರು. ಅಲ್ಲಿಂದಲೇ ರಂಗಭೂಮಿ ಕಲಾವಿದನಾಗಿ ತೊಡಗಿಸಿಕೊಂಡು ಹೆಸರು ಗಳಿಸಿದ್ದರು. ಇತ್ತೀಚಿನ ಎರಡು ದಶಕಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು.
ಆಸಿಫ್ ಬಾಸ್ರಾ ಸಾವಿನ ಬಗ್ಗೆ ಬಾಲಿವುಡ್ ದಿಗ್ಗಜರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶಾಕಿಂಗ್ ನ್ಯೂಸ್. ಲಾಕ್ಡೌನ್ ಮೊದಲು ನಾವು ಜೊತೆಯಾಗೇ ನಟಿಸಿದ್ದೆವು. ಇದನ್ನು ನಂಬಲಾಗುತ್ತಿಲ್ಲ ಎಂದು ನಟ ಮನೋಜ್ ಬಾಜಪೇಯಿ ಹೇಳಿದ್ದಾರೆ.
Film actor Asif Basra was found hanging in a private complex in Dharamshala. Forensic team is at the spot and police is investigating the matter: SSP Kangra Vimukt Ranjan. #HimachalPradesh (Picture credit: Asif Basra's website) pic.twitter.com/nxpWNLi8VU
— ANI (@ANI) November 12, 2020
Actor Asif Basra was found dead in Himachal Pradesh's Mcleodganj, the police have said. A forensic team has arrived to find out how he died, the police said, adding they are investigating whether it was death by suicide. He was 53.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm