ಬ್ರೇಕಿಂಗ್ ನ್ಯೂಸ್
24-07-23 03:56 pm Source: News18 Kannada ಸಿನಿಮಾ
ಇತ್ತೀಚೆಗೆ ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿಗಳು ಭಾರೀ ವೈರಲ್ ಆಗುತ್ತಿದೆ. ಇದೀಗ ಸಂದರ್ಶನವೊಂದರಲ್ಲಿ ರಾಜ್ ಬಿ ಶೆಟ್ಟಿಯವರು ಗೂಗಲ್ನಲ್ಲಿ ಹೆಚ್ಚು ಏನನ್ನು ಹುಡುಕ್ತಾರೆ ಎಂದು ಹೇಳಿಕೊಂಡಿದ್ದಾರೆ.
ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದ, ರಾಜ್ ಬಿ ಶೆಟ್ಟಿ ಇಂದು ಎಲ್ಲರ ಮನೆ ಮಾತಾಗಿದ್ದಾರೆ. ಅದೇ ರೀತಿ ಇತ್ತೀಚೆಗೆ ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿಗಳು ಭಾರೀ ವೈರಲ್ ಆಗುತ್ತಿದೆ.
ಇನ್ನು ರಾಜ್ ಬಿ ಶೆಟ್ಟಿಯವರನ್ನು ಟೋಬಿ ಸಿನಿಮಾದ ಪೋಸ್ಟರ್ ರಿಲೀಸ್ ಆದ ಮೇಲೆ ಹೆಚ್ಚಿನವರು ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಅವರು ತಮ್ಮ ಲೈಫ್ಸ್ಟೈಲ್ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೆಯೇ ಟೋಬಿ ಸಿನಿಮಾದ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ರಾಜ್ ಬಿ ಶೆಟ್ಟಿಯವರು ಒಂದು ಮೊಟ್ಟೆಯ ಕಥೆ ಸಿನಿಮಾ ಮಾಡುವ ಮೂಲಕ ಹಲವಾರು ಜನರ ಮನ ಗೆದ್ದಿದ್ದರು. ಇವರ ನಿರ್ದೇಶನ, ನಟನೆಯಲ್ಲಿ ನಂತರ ಮೂಡಿ ಬಂದ ಚಿತ್ರವೆಂದರೆ ಗರುಡ ಗಮನ ವೃಷಭ ವಾಹನ. ಈ ಚಿತ್ರ ಶೆಟ್ರ ಸಿನಿಮಾ ಆಸಕ್ತಿ ಹೇಗಿದೆ ಎಂದು ತೋರಿಸಿಕೊಟ್ಟಿದೆ ಎಂದು ಹೇಳಬಹುದು.
ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಚಿತ್ರ ಇದೇ ಆಗಸ್ಟ್ 25 ರಂದು ಬಿಡುಗಡೆಯಾಗಲಿದ್ದು, ಬಿಡುಗಡೆಗೂ ಮೊದಲೇ ಅಭಿಮಾನಿಗಳು ಭಾರೀ ನಿರೀಕ್ಷೆಯಲ್ಲಿದ್ದಾರೆ. ಇದುವರೆಗೆ ಸಿನಿಮಾದ ಮೋಷನ್ ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಟ್ರೈಲರ್ ಸಹ ರಿಲೀಸ್ ಮಾಡಲಿದ್ದೇವೆ ಎಂದು ಶೆಟ್ರು ಈಗಾಗಲೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಟೋಬಿ ಚಿತ್ರದ ಮ್ಯೂಸಿಕ್ ಬಗ್ಗೆ ನಿರೂಪಕರು ಶೆಟ್ರ ಬಳಿ ಕೇಳಿದಾಗ ಮ್ಯೂಸಿಕ್ ಬಗ್ಗೆ ಇನ್ನೂ ಏನು ಹೇಳಿಕ್ಕಾಗಲ್ಲ, ಆದರೆ ಮ್ಯೂಸಿಕ್ ಡೈರೆಕ್ಟರ್ ಮಿದುನ್ ಮುಕುಂದನ್ ಬಗ್ಗೆ ನಂಬಿಕೆಯಿದೆ. ಅವರದ್ದು ನಾನು ಮೊದಲಿನಿಂದಲೂ ದೊಡ್ಡ ಅಭಿಮಾನಿ, ಆದ್ದರಿಂದ ಟೋಬಿ ಸಿನಿಮಾದ ಮ್ಯೂಸಿಕ್ ಅದ್ಭುತವಾಗಿ ಮೂಡಿಬರಲಿದೆ ಎಂದು ಹೇಳಿದ್ದಾರೆ.
ನಿರೂಪಕರು ರಾಜ್ ಬಿ ಶೆಟ್ಟಿಯವರಲ್ಲಿ ಸಿನಿಮಾದ ಜೊತೆಗೆ ಅವರ ಲೈಫ್ಸ್ಟಯಲ್ ಬಗ್ಗೆಯೂ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಶೆಟ್ರ ಬಳಿ ನಿಮ್ಮ ಫೆವರೀಟ್ ಸ್ಪೋರ್ಟ್ಸ್ ಯಾವುದು ಎಂದು ಕೇಳಿದಾಗ ವಾಲಿಬಾಲ್ ಎಂದು ಹೇಳಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ ಯಾವುದಿದ್ರೂ ಮೊಬೈಲ್, ಟಿವಿಯಲ್ಲಿ ನೋಡ್ತೇನೆ ಎಂದು ಹೇಳಿದ್ದಾರೆ.
ಐಪಿಎಲ್ನಲ್ಲಿ ರಾಜ್ಗೆ ವಿರಾಟ್ ಕೊಹ್ಲಿ ಫೆವರೀಟ್ ಪ್ಲೆಯರ್ ಅಂತೆ. ಹಾಗೆಯೇ ಬೆಳಗೆದ್ದು ಮೊದಲು ಗೂಗಲ್ನಲ್ಲಿ ಸರ್ಚ್ ಮಾಡೋದು ಇವರು ಸ್ಪೋರ್ಟ್ಸ್ ಬಗ್ಗೆ ಎಂದು ಹೇಳಿದ್ದಾರೆ.
Do you know what toby movie hero Raj B Shetty searched on google.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 03:07 pm
Mangalore Correspondent
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm