ಬ್ರೇಕಿಂಗ್ ನ್ಯೂಸ್
20-06-23 12:52 pm Source: Vijayakarnataka ಸಿನಿಮಾ
ನಟ ರಾಮ್ ಚರಣ್ ತೇಜ ಹಾಗೂ ಉಪಾಸನಾ ಅವರು ಜೂನ್ 20ರಂದು ಹೆಣ್ಣು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ನಿನ್ನೆಯಷ್ಟೇ ಇವರಿಬ್ಬರು ಹೈದರಾಬಾದ್‌ನ ಅಪೋಲೊ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಗೆ ಹೋಗಿ ಕೆಲವೇ ಗಂಟೆಗಳು ಕಳೆದ ಬಳಿಕ ಈ ಗುಡ್‌ನ್ಯೂಸ್ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ಉಪಾಸನಾ-ರಾಮ್ ಚರಣ್ ತೇಜಗೆ ನಾನಾ ಪ್ರಶ್ನೆ
ಮದುವೆಯಾಗಿ 10 ವರ್ಷಗಳ ಬಳಿಕ ಈ ಜೋಡಿ ಮೊದಲ ಮಗು ನಿರೀಕ್ಷೆ ಮಾಡಿತ್ತು. ಇಷ್ಟು ವರ್ಷಗಳ ಕಾಲ ಯಾಕೆ ಉಪಾಸನಾ, ರಾಮ್ ಚರಣ್ ಮಗು ಮಾಡಿಕೊಂಡಿಲ್ಲ? ಮಕ್ಕಳನ್ನು ಹೊಂದಲು ಇಷ್ಟ ಇಲ್ಲವೇ? ಅಥವಾ ಇವರಿಬ್ಬರಿಗೆ ಮಕ್ಕಳು ಆಗೋದಿಲ್ಲವೇ ಅಂತ ಸಾಕಷ್ಟು ಪ್ರಶ್ನೆಗಳು ಉದ್ಭವವಾಗಿತ್ತು. ಆಗಲೂ ಇವರಿಬ್ಬರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಅಂಡಾಣು ಫ್ರೀಜ್ ಮಾಡಿಕೊಂಡಿದ್ದ ಉಪಾಸನಾ, ರಾಮ್ ಚರಣ್
"ನಾನು ಮತ್ತು ರಾಮ್ ಚರಣ್ ಮದುವೆಯಾದ ಆರಂಭದಲ್ಲಿಯೇ ಅಂಡಾಣು ಫ್ರೀಜ್ ಮಾಡಿ ಸಂಗ್ರಹಿಸಿಡಬೇಕು ಎಂದುಕೊಂಡು ಹಾಗೆ ಮಾಡಿದ್ದೆವು. ನಾವು ಇಷ್ಟು ವರ್ಷಗಳ ಕಾಲ ಕರಿಯರ್ ಬಗ್ಗೆ ಗಮನ ನೀಡಿದೆವು. ನಮ್ಮಿಬ್ಬರಿಗೂ ವಂಶಪಾರಂಪರ್ಯವಾಗಿ ಬಂದ ಆಸ್ತಿ ಇದೆ, ಆದರೆ ನಾವು ನಮ್ಮ ಮಗುವಿಗೆ ಏನು ಮಾಡಿದ್ದೇವೆ ಎಂಬ ಪ್ರಶ್ನೆ ಬರುತ್ತದೆ. ಈಗ ನಾವಿಬ್ಬರೂ ನಾವೇ ದುಡಿದು ಸಂಪಾದಿಸಿದ ಹಣದಲ್ಲಿ ನಮ್ಮ ಮಗುವಿನ ಆರೈಕೆ ಮಾಡಲು ಸಮರ್ಥರಾಗಿದ್ದೇವೆ, ನಮ್ಮ ಮಗುವಿಗೆ ಅತ್ಯುತ್ತಮ ಜೀವನಶೈಲಿ ಕಲ್ಪಿಸಲು ರೆಡಿ ಇದ್ದೇವೆ. ಸಮಾಜ, ಕುಟುಂಬ ಅಥವಾ ಹೊರಗಡೆಯವರು ಹೇಳಿದ ಸಮಯಕ್ಕೆ ನಾವು ಮಗು ಮಾಡಿಕೊಂಡಿಲ್ಲ. ನಮಗೆ ಯಾವಾಗ ಬೇಕೋ ಆಗ ಮಗು ಮಾಡಿಕೊಂಡಿದ್ದೇವೆ" ಎಂದು ಉಪಾಸನಾ ಹೇಳಿದ್ದರು.

ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಉಪಾಸನಾ ಭಾಗಿ
ಉಪಾಸನಾ, ರಾಮ್ ಚರಣ್ ಅವರು ಬೇಬಿಮೂನ್ ಆಚರಿಸಿಕೊಂಡಿದ್ದಾರೆ. ಇನ್ನು ಉಪಾಸನಾಗಾಗಿ ದುಬೈನಲ್ಲಿ ಅವರ ಸಹೋದರಿಯರಾದ ಅನುಷ್‌ಪಾಲಾ ಕಾಮಿನೇನಿ ಮತ್ತು ಸಿಂಧೂರಿ ರೆಡ್ಡಿ ಅದ್ದೂರಿ ಬೇಬಿಶವರ್ ಆಯೋಜಿಸಿದ್ದರು. ಪತಿಯ ಜೊತೆ ಉಪಾಸನಾ ಅವರು ಶರ್ವಾನಂದ್ ಅವರ ಆರತಕ್ಷತೆ, ವರುಣ್ ತೇಜ-ಲಾವಣ್ಯಾ ತ್ರಿಪಾಠಿ ಅವರ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು. ಗರ್ಭಿಣಿಯಾದಾಗಿನಿಂದಲೂ ಉಪಾಸನಾ ಅವರು ರಾಮ್ ಚರಣ್ ಜೊತೆ ಅನೇಕ ಸಿನಿಮಾ ಸೇರಿದಂತೆ ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದರು. RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದಾಗಲೂ ಕೂಡ ಉಪಾಸನಾ ಅವರು ರಾಮ್ ಜೊತೆ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆಗಲೇ ರಾಮ್ ಚರಣ್ "ನಮಗೆ ಮಗು ಅದೃಷ್ಟ ತಂದಿದೆ" ಎಂದಿದ್ದರು.
ರಾಮ್ ಚರಣ್ ತೇಜ, ಉಪಾಸನಾ ಮದುವೆಯಾಗಿದ್ದರು. ಇವರಿಬ್ಬರ ಮದುವೆಗೆ ಕೈಲಾಸ ಸೆಟ್ ಹಾಕಿಸಲಾಗಿತ್ತು. ಈ ಅದ್ದೂರಿ ಮದುವೆಗೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿದ್ದರು. ಭಾರತದಲ್ಲಿ ಅಪೋಲೋ ಆಸ್ಪತ್ರೆಗಳ ಸಮೂಹವನ್ನು ಹುಟ್ಟುಹಾಕಿರುವ ಡಾ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು ಉಪಾಸನಾ.
Actors Ram Charan Teja and Upasana were promoted as parents of a baby girl on June 20. The duo had gone to The Apollo Hospital in Hyderabad yesterday. The good news came a few hours after he went to the hospital. Many on social media have been wishing the couple.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm