ಬ್ರೇಕಿಂಗ್ ನ್ಯೂಸ್
09-01-22 09:44 pm Mangalore Correspondent ನ್ಯೂಸ್ View
ಮಂಗಳೂರು, ಜ.9 : ಐಸಿಸ್ ಉಗ್ರವಾದಿ ಗುಂಪಿನ ಸಂಪರ್ಕದಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿರುವ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಬಗೆಗಿನ ಆಘಾತಕಾರಿ ವರದಿಗಳು ಹೊರಬೀಳುತ್ತಿದ್ದಂತೆ ಸಾರ್ವಜನಿಕರಲ್ಲಿ ಅನುಮಾನ, ತೀವ್ರ ಆತಂಕವನ್ನು ಹುಟ್ಟುಹಾಕಿಸಿದೆ. ಒಬ್ಬ ಮತಾಂತರಗೊಂಡ ಹೆಣ್ಣು ಹೀಗೂ ಇರಬಹುದೇ ಅನ್ನುವ ಶಂಕೆಯ ಜೊತೆಗೆ, ಇಸ್ಲಾಮಿಗೆ ಪರಿವರ್ತನೆಗೊಂಡ ಮಾತ್ರಕ್ಕೆ ಈ ರೀತಿಯಲ್ಲೂ ವೈರುಧ್ಯದಿಂದ ವರ್ತಿಸಲು ಸಾಧ್ಯವೇ ಅನ್ನುವ ಅಚ್ಚರಿಯಿಂದ ಜನಸಾಮಾನ್ಯರು ಚರ್ಚೆಯಲ್ಲಿ ತೊಡಗಿದ್ದಾರೆ.
ಯಾಕಂದ್ರೆ, ದೀಪ್ತಿ ಮಾರ್ಲ ಉಳ್ಳಾಲದಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡು ಮರಿಯಂ ಆದಬಳಿಕ ಒಬ್ಬ ಮುಸ್ಲಿಂ ಮಹಿಳೆ ಮಾತ್ರ ಅನ್ನುವಷ್ಟಕ್ಕೆ ಉಳಿದಿಲ್ಲ. ದಂತ ವೈದ್ಯಕೀಯ ಓದಿದ್ದ ದೀಪ್ತಿ ತನ್ನ ಇಂಗ್ಲಿಷ್ ಪಾಂಡಿತ್ಯದಿಂದ ಇಡೀ ಜನಮಾನಸವೇ ಅಚ್ಚರಿ ಪಡುವಷ್ಟು ಬೆಳೆದಿದ್ದಾಳೆ. ಐಸಿಸ್ ಉಗ್ರರ ಆನ್ಲೈನ್ ಇಂಗ್ಲಿಷ್ ಮ್ಯಾಗಜಿನ್ ಪರವಾಗಿ ಕೆಲಸ ಆರಂಭಿಸಿ, ಈಗ ಇಡೀ ದೇಶವೇ ಗಮನ ಸೆಳೆಯುವಷ್ಟು ಕುಖ್ಯಾತಿ ಪಡೆದಿದ್ದಾಳೆ. ಆದರೆ, ದೇಶದ್ರೋಹಿ ಚಟುವಟಿಕೆಯಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದಾಳೆ ಅನ್ನುವುದು ಆತಂಕ ತರುವ ವಿಚಾರ. ಅಷ್ಟೇ ಅಲ್ಲ, ಹಿಂದು ಸಂಘಟನೆಗಳು ಆತಂಕದಿಂದ ಹೇಳುವ ಲವ್ ಜಿಹಾದಿ ಅನ್ನುವುದರ ಸ್ಥೂಲ ರೂಪವನ್ನು ಹಿಂದುಗಳತ್ತ ಉಲ್ಟಾ ಮಾಡಿ ಬಾಣ ಹೂಡಿದ್ದಾಳೆ.
ಆಕೆಯ ನಿಗೂಢ ಜಾಲಕ್ಕೆ ಹತ್ತಕ್ಕೂ ಹೆಚ್ಚು ಹಿಂದು ಯುವಕರು ಬಿದ್ದಿದ್ದಾರೆ ಅನ್ನುವ ಅಚ್ಚರಿಯ ಮಾಹಿತಿಯನ್ನೂ ಎನ್ಐಎ ಅಧಿಕಾರಿಗಳು ಹೊರಗೆಡವಿದ್ದಾರೆ. ಜಾಲತಾಣದಲ್ಲಿ ಲೈಂಗಿಕ ಆಸೆ ತೋರಿಸಿ, ಹಣದ ಆಮಿಷವೊಡ್ಡಿ ಹನಿಟ್ರ್ಯಾಪ್ ಬಲೆಗೆ ಹಾಕಿ ಯುವಕರನ್ನು ಸೆಳೆದಿದ್ದಾಳೆ. ಅಷ್ಟೇ ಅಲ್ಲಾ, ಹಿಂದು ಯುವಕರನ್ನು ಮುಸ್ಲಿಂ ಆಗಿ ಮತಾಂತರವೂ ಮಾಡಿದ್ದಾಳೆ ಅನ್ನೋ ಅಚ್ಚರಿ ಮಾಹಿತಿಯೂ ಹೊರಬಿದ್ದಿದೆ. ಇಲ್ಲಿ ಆತಂಕದ ವಿಚಾರ ಏನಂದ್ರೆ, ಒಬ್ಬಾಕೆ ಹಿಂದು ಧರ್ಮದಿಂದ ಇಸ್ಲಾಮಿಗೆ ಮತಾಂತರಗೊಂಡ ಮಾತ್ರಕ್ಕೆ ಇಷ್ಟರ ಮಟ್ಟಿಗೆ ಬದಲಾಗಿದ್ದಾಳೆ ಅನ್ನುವುದಷ್ಟೇ.
ಈವರೆಗೂ ಕೇರಳ, ಕರ್ನಾಟಕದ ಕರಾವಳಿಯಲ್ಲಿ ಉಗ್ರವಾದಿ ಚಟುವಟಿಕೆ ಬೆಂಬಲಿಸಿ ಪೊಲೀಸರ ಬಲೆಗೆ ಬಿದ್ದ ಹಲವು ಮಹಿಳೆಯರಿದ್ದಾರೆ. ಆದರೆ, ಈ ಪೈಕಿ ಹೆಚ್ಚಿನವರು ಹಿಂದು ಅಥವಾ ಕ್ರಿಸ್ತಿಯನ್ ಧರ್ಮದಿಂದ ಇಸ್ಲಾಮಿಗೆ ಮತಾಂತರಗೊಂಡಿದ್ದ ಯುವತಿಯರೇ. ಹಾಗಿದ್ದರೂ, ಉಗ್ರವಾದಿ ಗುಂಪಿನ ಪರವಾಗಿ ಹನಿಟ್ರ್ಯಾಪ್ ಮೂಲಕ ಯುವಕರನ್ನು ಬಲೆಗೆ ಬೀಳಿಸಿ ಮತಾಂತರಿಸುವ ಕೃತ್ಯ ಇದೇ ಮೊದಲ ಬಾರಿ ಬೆಳಕಿಗೆ ಬಂದಿರುವುದು. ಪ್ರೀತಿಯ ನೆಪದಲ್ಲಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮದುವೆಯಾಗಿ ಮತಾಂತರಿಸುವುದು, ಆನಂತರ ಅವರನ್ನು ಬೇರೆ ಕೃತ್ಯಗಳಿಗೆ ತೊಡಗಿಸುವುದು ಅಥವಾ ಅವರನ್ನು ಬೀದಿಪಾಲು ಮಾಡುವಂಥ ಲವ್ ಕಂ ಜಿಹಾದಿ ಕೃತ್ಯಗಳು ಹಲವು ಬಾರಿ ಬೆಳಕಿಗೆ ಬಂದಿದ್ದರೂ, ಹಿಂದು ಯುವಕರನ್ನೇ ಯಾಮಾರಿಸಿ ಬಲೆಗೆ ಕೆಡವಿ ಮುಸ್ಲಿಂ ಆಗಿಸುವ ಕೃತ್ಯ ಹೊರಬಂದಿದ್ದು ಇದೇ ಮೊದಲು.
ಇಂಥ ಕೃತ್ಯಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ತೊಡಗಿಸಿಕೊಂಡಿದ್ದ ಉದಾಹರಣೆ ಕರಾವಳಿಯಲ್ಲಿ ಕಂಡುಬಂದಿಲ್ಲ. ಆದರೆ ಮುಸ್ಲಿಂ ಆಗಿ ಪರಿವರ್ತನೆಗೊಂಡ ಹಿಂದು ಹುಡುಗಿಯೊಬ್ಬಳು ಖಟ್ಟರ್ ಮುಸ್ಲಿಮ್ ಆಗಿ ಬದಲಾಗಿದ್ದಲ್ಲದೆ, ತನ್ನನ್ನೇ ಜೈವಿಕ ಬಾಂಬ್ ಆಗಿ ಪರಿವರ್ತಿಸಿಕೊಂಡಿದ್ದು ಆಘಾತಕಾರಿ.
ಆಕೆಗೂ ನಮ್ಮ ಕುಟುಂಬಕಕ್ಕೂ ಸಂಬಂಧ ಇಲ್ಲ !
ಈ ನಡುವೆ, ದೀಪ್ತಿ ಮಾರ್ಲ ಅವರ ಜೈವಿಕ ಹೆತ್ತವರಾದ ಕೊಡಗಿನ ಕುಶಾಲನಗರದಲ್ಲಿ ನೆಲೆಸಿರುವ ಬಂಟ ಕುಟುಂಬ ಆಕೆಗೂ ತಮಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಎನ್ಐಎ ಅಧಿಕಾರಿಗಳು ಬಂಧಿಸಿದ ಬಳಿಕ ನಮ್ಮ ಎಲ್ಲ ರೀತಿಯ ಸಂಬಂಧಗಳೂ ಕಡಿದುಕೊಂಡಿವೆ. ಆಕೆ ಯಾವ ಕೃತ್ಯ ಎಸಗಿದ್ದಾಳೋ, ಅದಕ್ಕೆ ಆಕೆಯೇ ಹೊಣೆ. ಆಕೆಯ ಮದುವೆ, ಈ ಹಿಂದಿನ ಚಟುವಟಿಕೆಗಳು, ಭವಿಷ್ಯ ಎಲ್ಲದಕ್ಕೂ ಆಕೆಯೇ ಜವಾಬ್ದಾರಿ. ಏನೆಲ್ಲಾ ಮಾಡಿದ್ದಾಳೋ ಎಲ್ಲವೂ ಆಕೆಯೊಬ್ಬಳದ್ದೇ ಆಯ್ಕೆ. ಆಕೆಯ ಕೃತ್ಯಕ್ಕಾಗಿ ಕೇಳಿಬರುತ್ತಿರುವ ನಿಂದನೆಗಳಿಗೆ ನಾವು ಹೊಣೆಯಲ್ಲ. ಆಕೆ ಅಥವಾ ಆಕೆಯ ಗಂಡ, ಮಕ್ಕಳಿಗೆ ನಮ್ಮ ಆಸ್ತಿಯಲ್ಲಿ ಯಾವುದೇ ಪಾಲು ಇರುವುದಿಲ್ಲ ಎಂದು ಕೊಡಗಿನ ಕುಶಾಲನಗರದಲ್ಲಿ ನೆಲೆಸಿರುವ ದೀಪ್ತಿ ಮಾರ್ಲ ಹೆತ್ತವರಾದ ಮುಂಡಾಡಿಗುತ್ತು ಸದಾನಂದ ಮಾರ್ಲ, ಬಿ.ಕೆ.ಧನಲಕ್ಷ್ಮಿ ಮಾರ್ಲ, ಮುಂಡಾಡಿಗುತ್ತು ದರ್ಶನ್ ಮಾರ್ಲ ಸಂಬಂಧಿತರ ಗಮನಕ್ಕೆಂದು ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ.
Breaking: ಉಳ್ಳಾಲದ ಮಾಜಿ ಶಾಸಕ, ದಿ. ಬಿ.ಎಂ.ಇದಿನಬ್ಬ ಕುಟುಂಬಸ್ಥರ ಮನೆಗೆ ಎನ್ಐಎ ದಾಳಿ ; ಐಸಿಸ್ ಸಂಪರ್ಕ ಶಂಕೆ !
ಐಸಿಸ್ ನೆಟ್ವರ್ಕ್ ಮಾಸ್ಟರ್ ಮೈಂಡ್ ಆಗಿದ್ದ ಹಿಂದು ಯುವತಿ ; ಎನ್ಐಎ ಅಧಿಕಾರಿಗಳ ವಶಕ್ಕೆ ?
ಉಳ್ಳಾಲದಲ್ಲಿ ಮತ್ತೊಬ್ಬ ಐಸಿಸ್ ಶಂಕಿತ ಉಗ್ರ ಮಹಿಳೆ ಬಂಧನ ; ದೀಪ್ತಿ ಮರಿಯಂ ಬಂಧಿಸಿದ ದೆಹಲಿ ಎನ್ಐಎ ಅಧಿಕಾರಿಗಳು !!
ಐಸಿಸ್ ನೆಟ್ವರ್ಕ್ ಶಂಕೆ ; ಉಳ್ಳಾಲದಲ್ಲಿ ಬಂಧಿತ ಮಹಿಳೆ ದೆಹಲಿ ಎನ್ಐಎ ಕಸ್ಟಡಿಗೆ
Mangalore Deepthi Marla parents issue circular stating we dont have any connection with her after arrest by NIA. The National Investigation Agency (NIA) on Monday arrested BM Basha's daughter-in-law Deepthi Marla alias Mariam for suspected ISIS links. Basha is son of former Ullal MLA late BM Idinabba, who was a Congress leader and was elected as an MLA for three times in the Karnataka state assembly from Ullal constituency. Mariam is the wife of Anas Abdul Rahiman, who is the son of Basha. The arrest was made during the raid on Basha's house.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 02:13 pm
HK News Desk
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm