ಬ್ರೇಕಿಂಗ್ ನ್ಯೂಸ್
08-09-21 09:28 pm Mangaluru Correspondent ನ್ಯೂಸ್ View
ಮಂಗಳೂರು, ಸೆ.8: ನಟಿ ಕಂ ಆಂಕರ್ ಅನುಶ್ರೀ ಡ್ರಗ್ಸ್ ಪ್ರಕರಣ ಮತ್ತೆ ಸದ್ದು ಮಾಡಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಸ್ಯಾಂಡಲ್ ವುಡ್ ನಟಿಯರು ಡ್ರಗ್ಸ್ ನಂಟಿನಲ್ಲಿ ಸಿಕ್ಕಿಬಿದ್ದ ಬೆನ್ನಲ್ಲೇ ಮಂಗಳೂರಿನಲ್ಲಿ ಇಬ್ಬರು ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಕಿಶೋರ್ ಮತ್ತು ತರುಣ್ ಅದರಲ್ಲಿ ಪ್ರಮುಖರು. ಇವರಿಬ್ಬರು ಕೂಡ ಕೊರಿಯೋಗ್ರಾಫರ್ ಆಗಿದ್ದುದು ಮತ್ತು ಅವರು ಈ ಹಿಂದೆ ಝೀ ಕನ್ನಡ ವಾಹಿನಿಯಲ್ಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು ಅನ್ನೋದು ಚರ್ಚೆಯ ವಸ್ತುವಾಗಿತ್ತು. ಅದರಲ್ಲೂ, ಇವರಿಬ್ಬರಿಗೆ ಆಂಕರ್ ಅನುಶ್ರೀ ಜೊತೆಗೆ ನಂಟು ಇತ್ತು ಅನ್ನೋದು ಮಾಧ್ಯಮಗಳ ಗಮನಸೆಳೆದ ಅಂಶ. ಆನಂತರ ನಟಿ ಅನುಶ್ರೀಗೆ ಅಂಟಿಕೊಂಡ ಡ್ರಗ್ಸ್ ನಂಟು ಅನ್ನುವ ಹೆಸರಲ್ಲೇ ಸುದ್ದಿ ಹೈಪ್ ಆಗಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಅನುಶ್ರೀಯನ್ನು ಮಂಗಳೂರಿಗೆ ಕರೆಸಿ ವಿಚಾರಣೆ ನಡೆಸಿದ್ದರು. 50ಕ್ಕೂ ಹೆಚ್ಚು ಪ್ರಶ್ನಾವಳಿ ಮುಂದಿಟ್ಟು ಆಕೆಯಿಂದ ಉತ್ತರ ಪಡೆದಿದ್ದರು ಎನ್ನಲಾಗಿತ್ತು. ಕಿಶೋರ್ ಮತ್ತು ತರುಣ್ ಮಾಹಿತಿ ಆಧರಿಸಿ, ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಬೆಂಗಳೂರಿನ ಕೆಂಗೇರಿಯ ಶ್ಯಾಮ್ ಮತ್ತು ನೈಜೀರಿಯನ್ ವ್ಯಕ್ತಿಯೊಬ್ಬನನ್ನೂ ಬಂಧಿಸಿದ್ದರು. ಆನಂತರ ಒಟ್ಟು ಪ್ರಕರಣದ ಬಗ್ಗೆ ಮಂಗಳೂರಿನ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸದ್ಯಕ್ಕೆ ಪ್ರಕರಣ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದ್ದು, ಆರೋಪಿಗಳು ಪಾರಾಗುವ ಹಂತಕ್ಕೆ ತಲುಪಿದ್ದಾರೆ.
ಆದರೆ, ಕೋರ್ಟಿಗೆ ಸಲ್ಲಿಕೆಯಾದ ಒಂಬತ್ತು ತಿಂಗಳ ಬಳಿಕ ಚಾರ್ಜ್ ಶೀಟ್ ಪ್ರತಿಯಲ್ಲಿ ಅನುಶ್ರೀ ಹೆಸರಿದೆಯೆಂಬ ವಿಚಾರ ಲೀಕ್ ಆಗಿದೆ. ಆರೋಪಿಗಳಲ್ಲಿ ಪ್ರಮುಖನಾಗಿರುವ ಕಿಶೋರ್ ಅಮನ್ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತನಗೆ 2007ರಲ್ಲಿ ಅನುಶ್ರೀ ಜೊತೆಗೆ ಹತ್ತಿರದ ನಂಟು ಇತ್ತೆಂದು ನೀಡಿದ್ದ ಹೇಳಿಕೆಯೇ ಮಾಧ್ಯಮಗಳಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ಈ ಬಗ್ಗೆ ಮಂಗಳೂರಿನ ಸಿಸಿಬಿ ಪೊಲೀಸರ ಬಳಿ ಕೇಳಿದರೆ, ಕಿಶೋರ್ ನನ್ನು ವಿಚಾರಣೆ ನಡೆಸಿದ ವೇಳೆ ಆತ ತನಗೆ ಹಿಂದೆ ಅನುಶ್ರೀ ಜೊತೆಗೆ ನಂಟು ಇದ್ದ ಬಗ್ಗೆ ಹೇಳಿಕೊಂಡಿದ್ದನ್ನು ತಿಳಿಸಿದ್ದಾರೆ. ರಿಯಾಲಿಟಿ ಶೋ ವೇಳೆಯಲ್ಲಿ ಅನುಶ್ರೀಗೆ ಕೊರಿಯೋಗ್ರಾಫರ್ ಆಗಿದ್ದೆ. ಆ ವೇಳೆಗೆ, ಜೊತೆಗೇ ಇದ್ದು ಡ್ಯಾನ್ಸ್ ಕಲಿಸಿದ್ದೆ. ಆ ಸಂದರ್ಭದಲ್ಲಿ ಜೊತೆಯಾಗೇ ಡ್ರಗ್ಸ್ ಸೇವನೆಯನ್ನೂ ಮಾಡಿದ್ದೆವು ಎಂದು ಕಿಶೋರ್ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ಪೊಲೀಸರು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದರು.
13 ವರ್ಷಗಳ ಹಿಂದಿನ ವಿಚಾರ ಆಗಿದ್ದರೂ, ಆ ಬಗ್ಗೆ ಪೊಲೀಸರು ಅನುಶ್ರೀಗೆ ನೋಟೀಸ್ ನೀಡಿ ಮಂಗಳೂರಿಗೆ ಬರಹೇಳಿ ವಿಚಾರಣೆಯನ್ನೂ ನಡೆಸಿದ್ದರು. ಪಣಂಬೂರು ಎಸಿಪಿ ಕಚೇರಿಯಲ್ಲಿ ಆಗಿನ ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಮತ್ತು ಎಸಿಪಿ ಬೆಳ್ಳಿಯಪ್ಪ ಅನುಶ್ರೀ ವಿಚಾರಣೆ ನಡೆಸಿದ್ದರು. ಆದರೆ, ಇದೀಗ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಜೊತೆಗೆ ನಂಟಿರುವ ಬಗ್ಗೆ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಉಲ್ಲೇಖ ಆಗಿದ್ದರೂ, ಅನುಶ್ರೀಯನ್ನು ಪೊಲೀಸರು ರಾಜಕೀಯ ಒತ್ತಡದಿಂದ ಬಚಾವ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮತ್ತು ಚಿತ್ರ ನಿರ್ದೇಶಕ ಇಂದ್ರಜಿತ್, ಅನುಶ್ರೀಯನ್ನು ಪೊಲೀಸರು ಬಂಧಿಸದೆ ಕೈಬಿಟ್ಟಿರುವುದರ ಹಿಂದೆ ರಾಜಕಾರಣಿಗಳ ಕೈವಾಡ ಇದೆಯೆಂದು ಆರೋಪಿಸಿದ್ದಾರೆ. ಶುಗರ್ ಡ್ಯಾಡಿಯ ಕೃಪೆಯಿಂದಾಗಿ ಅನುಶ್ರೀ ಪಾರಾಗಿದ್ದಾಳೆ. ಆಕೆಯನ್ನು ಬಂಧಿಸಿ ಪೊಲೀಸರು ಇಡೀ ಪ್ರಕರಣದ ಮರು ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
13 ವರ್ಷಗಳ ಹಿಂದಿನ ವಿಚಾರಕ್ಕೆ ಬಂಧನ ಸಾಧುವೇ ?
ಈ ಬಗ್ಗೆ ಮಂಗಳೂರಿನ ಪೊಲೀಸ್ ಕಮಿಷನರ್ ಶಶಿಕುಮಾರ್ ಬಳಿ ಕೇಳಿದರೆ, ಬೇರೆಯದೇ ಉತ್ತರ ಕೊಟ್ಟಿದ್ದಾರೆ. ಯಾವುದೇ ಪ್ರಕರಣಗಳಲ್ಲಿ ಪೊಲೀಸರು ಅಗತ್ಯ ಇದ್ದರೆ ಯಾರನ್ನೂ ನೋಟೀಸ್ ನೀಡಿ ವಿಚಾರಣೆ ನಡೆಸುತ್ತಾರೆ. ಪ್ರಕರಣದಲ್ಲಿ ಸಾಕ್ಷ್ಯ ಕಂಡುಬಂದರೆ, ಬಂಧನ ಮಾಡುತ್ತಾರೆ. ಅನುಶ್ರೀ ಬಗ್ಗೆ ಒಬ್ಬ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದ ಮಾತ್ರಕ್ಕೆ ಆಕೆಯನ್ನು ಬಂಧಿಸಬೇಕು ಅಂತಿಲ್ಲ. ಅನುಶ್ರೀ ಜೊತೆಗೆ 2007ರಲ್ಲಿ ನಂಟು ಇತ್ತೆಂದು ಆರೋಪಿ ಹೇಳಿಕೆ ನೀಡಿದ್ದ. ಅಷ್ಟಕ್ಕೇ 2007ರಲ್ಲಿ ಆಗಿರುವ ಘಟನೆಯ ಬಗ್ಗೆ ಪೊಲೀಸರು ಸಾಕ್ಷ್ಯ ಹುಡುಕಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟಾದರೂ, ಪೊಲೀಸರು ಆಕೆಯನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಮೊಬೈಲ್ ಪಡೆದು ಡ್ರಗ್ ಪೆಡ್ಲರ್ ಜೊತೆ ಸಂಬಂಧ ಇದೆಯೇ ಅನ್ನುವ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ಸಾಕ್ಷ್ಯ ಸಿಗದ ಕಾರಣ ಆರೋಪ ಪಟ್ಟಿಯಿಂದ ಆಕೆ ಹೆಸರನ್ನು ಕೈಬಿಡಲಾಗಿತ್ತು ಎಂದಿದ್ದಾರೆ.
ಈ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಬಳಿ ಕೇಳಿದರೆ, ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಹೆಸರಿದ್ದ ಮಾತ್ರಕ್ಕೆ ಅನುಶ್ರೀಯನ್ನು ಬಂಧಿಸುವ ಪ್ರಶ್ನೆಯೇ ಬರುವುದಿಲ್ಲ ಎನ್ನುತ್ತಾರೆ. ಕಿಶೋರ್ ಮತ್ತು ತರುಣ್ ಅವರನ್ನು ಬಂಧನ ಮಾಡಿದ್ದು 2020ರಲ್ಲಿ. ಸಿಂಥೆಟಿಕ್ ಡ್ರಗ್ಸ್ ಸೇವನೆ ಮತ್ತು ಅದನ್ನು ಹೊಂದಿದ್ದಕ್ಕಾಗಿ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಅವರಿಗೆ ಯಾರು ಡ್ರಗ್ಸ್ ಪೂರೈಕೆ ಮಾಡಿದ್ದರು ಅನ್ನೋದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿಗಳನ್ನು ಹೆಚ್ಚುವರಿಯಾಗಿ ತನಿಖೆ ನಡೆಸಿದ ವೇಳೆ, ಆರೋಪಿ ತನ್ನ ಹಳೆಯ ವಿಚಾರಗಳನ್ನು ಹೇಳಿಕೊಂಡಿದ್ದ. 13 ವರ್ಷಗಳ ಹಿಂದೆ ಒಬ್ಬ ನಟಿಯ ಜೊತೆಗೆ ಸಂಬಂಧ ಇತ್ತೆಂದು ಹೇಳಿದ ಮಾತ್ರಕ್ಕೆ ಹೊಸ ಪ್ರಕರಣದಲ್ಲಿ ನಟಿಯನ್ನು ಸಿಲುಕಿಸಲು ಅಥವಾ ಆಕೆಯನ್ನು ಬಂಧಿಸಲು ಸಾಧ್ಯವಾಗಲ್ಲ. ಒಬ್ಬ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಆಧರಿಸಿ, ಅಗತ್ಯ ಇದ್ದರೆ ಯಾರನ್ನೂ ವಿಚಾರಣೆ ನಡೆಸಬಹುದು. ಅಗತ್ಯ ಕಂಡುಬಂದರೆ ಬಂಧನವನ್ನೂ ಮಾಡಬಹುದು. ಆದರೆ, ಅದಕ್ಕೆ ಪೂರಕವಾಗಿ ಸಾಕ್ಷ್ಯ ಬೇಕಾಗುತ್ತದೆ ಎಂದಿದ್ದಾರೆ. ಇಷ್ಟಕ್ಕೂ ಈ ಪ್ರಕರಣದಲ್ಲಿ ಅನುಶ್ರೀಯೊಂದಿಗಿನ ಹಳೆ ನಂಟಿನ ವಿಚಾರವನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸುವ ಅಗತ್ಯವೂ ಇರಲಿಲ್ಲ.
ನಿವೃತ್ತ ಅಧಿಕಾರಿಯ ಪ್ರಕಾರ, ಅನುಶ್ರೀ ನಟಿ ಮತ್ತು ಝೀ ವಾಹಿನಿಯಲ್ಲಿ ಖ್ಯಾತ ಆಂಕರ್ ಎನ್ನುವ ಕಾರಣಕ್ಕೆ ಸುದ್ದಿ ಮಾಧ್ಯಮಗಳು ಆಕೆಯನ್ನು ಟಾರ್ಗೆಟ್ ಮಾಡಿ ಸುದ್ದಿ ಮಾಡಿವೆ. ಚಾರ್ಜ್ ಶೀಟ್ ಆಧರಿಸಿ, ಒಬ್ಬ ಆರೋಪಿಯನ್ನೇ ಸಂದರ್ಶಿಸಿ ಆತನ ಬಳಿ ಹೇಳಿಕೆಯನ್ನು ಪಡೆಯುವ ಕೆಲಸ ಮಾಡಿವೆ. ಆತ ಪೊಲೀಸರ ವಿಚಾರಣೆ ವೇಳೆ ನೀಡಿದ್ದ ತನ್ನ ತಪ್ಪೊಪ್ಪಿಗೆ ಹೇಳಿಕೆಯನ್ನೇ ಅಲ್ಲಗಳೆಯುವ ಹೇಳಿಕೆ ನೀಡಿದ್ದಾನೆ. ಸಹಜವಾಗೇ ತನ್ನ ತಪ್ಪೊಪ್ಪಿಗೆಯನ್ನು ಯಾರು ಕೂಡ ಹೌದೆಂದು ಒಪ್ಪಿಕೊಳ್ಳಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಒಬ್ಬ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಆಧಾರದಲ್ಲಿ ಪೊಲೀಸರು ಪ್ರಕರಣವನ್ನು ಮರು ತನಿಖೆ ನಡೆಸುವುದಕ್ಕೂ ಸಾಧ್ಯವಾಗಲ್ಲ. ಇದೇನಿದ್ದರೂ, ಸುದ್ದಿ ಮಾಧ್ಯಮಗಳು ಹೈಪ್ ಕ್ರಿಯೇಟ್ ಮಾಡೋದಕ್ಕಷ್ಟೇ ಈ ರೀತಿ ಸುದ್ದಿ ಮಾಡಿ ಒಬ್ಬ ನಟಿಯ ತೇಜೋವಧೆ ಮಾಡುವ ಕೆಲಸ ಮಾಡಿವೆ ಅನ್ನೋದಂತೂ ಸತ್ಯ. ಇದೇ ನೆಪ ಇಟ್ಟುಕೊಂಡು ಕೆಲವರು ತಮ್ಮನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದೂ ಅಷ್ಟೇ ಸತ್ಯ.
Drugs scandal Anchor Anushree name mentioned in charge sheet Media creates hype to a 13-year-old case. It is reported that the name of popular Sandalwood TV anchor and actress, Anushree, has found a mention in the charge sheet filed relating to the drugs case. The city crime branch police who filed the charge sheet has made mention of Anushree in the charge sheet. Her name has been referred to relating to the statement made by the second accused, Kishore Aman Shetty that Anushree was not only consuming drugs but also involved with its trafficking.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 02:13 pm
HK News Desk
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm