ಬ್ರೇಕಿಂಗ್ ನ್ಯೂಸ್
01-04-22 05:49 pm HK Desk news ದೇಶ - ವಿದೇಶ
ಮುಂಬೈ, ಎ.1 : ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿ ಎಂದೇ ಗುರುತಿಸಲ್ಪಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲಲು ಯೋಜನೆ ಹಾಕಿದ್ದಾಗಿ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಮುಂಬೈನ ಎನ್ಐಎ ಕಚೇರಿಗೆ ಇಮೇಲ್ ಸಂದೇಶ ಬಂದಿದ್ದು, ವ್ಯಕ್ತಿಯೊಬ್ಬ ತನ್ನಲ್ಲಿ 20 ಕೇಜಿ ಆರ್ ಡಿಎಕ್ಸ್ ಇದ್ದು, ಅದನ್ನು ದೇಶದ 20 ನಗರಗಳಲ್ಲಿ ಇಟ್ಟಿರುವುದಾಗಿ ಹೇಳಿದ್ದಾನೆ.
ನಾನು ಪ್ರಧಾನಿ ಮೋದಿಯನ್ನು ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಮುಗಿಸಲು ಬಯಸಿದ್ದೇನೆ. ನನ್ನ ಜೀವನವನ್ನು ಆತ ಹಾಳು ಮಾಡಿದ್ದಾನೆ. ಇದಕ್ಕಾಗಿ ಭಯೋತ್ಪಾದಕರ ನೆರವು ಯಾಚಿಸಿದ್ದು, ಕಳೆದ ಫೆ.28ರಂದು ಸ್ಲೀಪರ್ ಸೆಲ್ ಏಕ್ಟಿವ್ ಮಾಡಿದ್ದೇನೆ. ನಾನು ಯಾರನ್ನೂ ಬಿಡುವುದಿಲ್ಲ. 20 ಕೇಜಿ ಆರ್ ಡಿಎಕ್ಸ್ ಇಟ್ಟು 20 ಮಿಲಿಯನ್ ಜನರನ್ನು ಕೊಂದು ಹಾಕುತ್ತೇನೆ ಎಂದು ಇಮೇಲ್ ಸಂದೇಶದಲ್ಲಿ ಬೆದರಿಕೆ ಹಾಕಿದ್ದಾನೆ.
ಜನರು ಈಗಲೇ ಸಾಯುತ್ತಿದ್ದಾರೆ, ಅವರನ್ನೆಲ್ಲ ನಾನು ಸಾಯಿಸುತ್ತೇನೆ. ನನಗೆ 20 ಕೇಜಿ ಆರ್ ಡಿಎಕ್ಸ್ ಸ್ಫೋಟಕವನ್ನು ಒದಗಿಸಿದ್ದಾರೆ. ಅದನ್ನು ದೇಶದ 20 ಪ್ರಮುಖ ನಗರಗಳಲ್ಲಿ ಇಡಲಿದ್ದು, ಅಲ್ಲಿಗೆ ಪ್ರಧಾನಿ ಭೇಟಿ ನೀಡುವ ಸಂದರ್ಭದಲ್ಲಿಯೇ ಸ್ಫೋಟಿಸುತ್ತೇನೆ. ದೇಶದ ಯಾವುದೇ ಕಡೆ ಬಾಂಬ್ ಸ್ಫೋಟ ಆಗಬಹುದು ಎಂಬುದಾಗಿ ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಆದರೆ, ಇದನ್ನು ಕಳಿಸಿದ್ದು ಯಾರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ದೇಶದ ಪ್ರಮುಖ ತನಿಖಾ ಏಜನ್ಸಿಯಾಗಿರುವ ರಾಷ್ಟ್ರೀಯ ತನಿಖಾ ದಳದ ಮುಂಬೈ ಕಚೇರಿಗೆ ಇಮೇಲ್ ಕಳಿಸಲಾಗಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.
ಅಧಿಕಾರಿಗಳು ಇ-ಮೇಲ್ ಕಳಿಸಿರುವಾತನ ಐಪಿ ಎಡ್ರಸ್ ಹುಡುಕಾಟಕ್ಕೆ ಶುರು ಮಾಡಿದ್ದು, ಬೆದರಿಕೆ ಒಡ್ಡಿದವರನ್ನು ಪತ್ತೆ ಮಾಡಲು ಮುಂದಾಗಿದ್ದಾರೆ.
The conspiracy to assassinate PM Narendra Modi has been revealed. The email has been investigated by the National Investigation Agency (NIA). A bizarre incident of threatening to kill Prime Minister Modi has come to light quoting intelligence sources. The National Investigation Agency has received a threatening e-mail.The e-mailer has said that he is committing suicide so that this conspiracy cannot be busted. Ready to kill PM Modi. They have 20 sleeper cells. Total is 20kg RDX. According to the Mail, the attack strategy has been prepared. It has been told in the mail that the person who wrote the mail has contact with many terrorists.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
10-10-25 10:37 pm
HK News Desk
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm