ಬ್ರೇಕಿಂಗ್ ನ್ಯೂಸ್
26-03-22 08:27 pm HK Desk news ದೇಶ - ವಿದೇಶ
ಕಣ್ಣೂರು (ಕೇರಳ), ಮಾ.26: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ತಳಿಪರಂಬ ಶ್ರೀ ರಾಜರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಕಣ್ಣೂರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಬೆಳಗ್ಗೆಯೇ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಕೆಲ ಹೊತ್ತು ದೈವ ಸನ್ನಿಧಾನದಲ್ಲಿ ಸಮಯ ಕಳೆದರು. ಪ್ರಶಾಂತ ವಾತಾವರಣದಲ್ಲಿ ಇರುವ ಈ ಆಲಯ, ದೇಶದ 108 ಪ್ರಾಚೀನ ಶಿವಾಲಯಗಳಲ್ಲಿ ಒಂದು. ತ್ರೇತಾಯುಗದಲ್ಲಿ ಸಾಕ್ಷಾತ್ ಶ್ರೀರಾಮನೇ ಇಲ್ಲಿನ ಶಿವನ ರೂಪವಾದ ರಾಜರಾಜೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದ ಎಂಬ ಐತಿಹ್ಯವಿದೆ. ಇಂಥ ಪುಣ್ಯಸ್ಥಳದಲ್ಲಿ ಶಿವನ ದರುಶನ ಪಡೆದಿದ್ದು ನನ್ನ ಭಾಗ್ಯವೇ ಸರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್ ಜತೆಯಲ್ಲಿ ಇದ್ದರು. ದೇವಳದ ಆಡಳಿತ ಮಂಡಳಿಯ ಮುಖ್ಯಸ್ಥರು, ಅಧಿಕಾರಿಗಳು ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡು ದೇವಳದ ಬಗ್ಗೆ ಮಾಹಿತಿ ನೀಡಿದರು.
ದೇವರ ದರುಶನದ ನಂತರ ಮಾಜಿ ಮುಖ್ಯಮಂತ್ರಿಗಳು ದೇವಳಕ್ಕೆ ಸುತ್ತು ಪ್ರದಕ್ಷಿಣೆ ಹಾಕಿದರು. ದೇವಾಲಯದ ನಿರ್ಮಾಣ ಶೈಲಿ, ಧಾರ್ಮಿಕ ವಿಧಿ ವಿಧಾನಗಳು ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಚುನಾವಣೆಗೆ ಮುನ್ನ ಕಣ್ಣೂರು ಜಿಲ್ಲೆಯ ತಳಿಪರಂಬ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಆನಂತರ ಪ್ರತಿ ಚುನಾವಣೆಯ ಸಂದರ್ಭದಲ್ಲಿ ತಳಿಪರಂಬ ಭೇಟಿ ನೀಡುವುದನ್ನು ರೂಢಿ ಮಾಡಿಕೊಂಡಿದ್ದಾರೆ.
HD Kumaraswamy visits Kerala Rajarajeshwari Temple along with Bandeppa Manikappa Kashempur.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
10-10-25 10:37 pm
HK News Desk
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm