ಬ್ರೇಕಿಂಗ್ ನ್ಯೂಸ್
10-01-22 11:11 pm HK Desk news ದೇಶ - ವಿದೇಶ
ಪಾಟ್ನಾ, ಜ.9 : ಕಳೆದ ಒಂದು ವರ್ಷದಲ್ಲಿ ಕೊರೊನಾ ವಿರುದ್ಧ ಲಸಿಕೆ ನೀಡಲಾಗುತ್ತಿದೆ. ಸರಕಾರ, ಒಬ್ಬರಿಗೆ ಎರಡು ಬಾರಿ ಉಚಿತ ಲಸಿಕೆ ನೀಡುತ್ತಿದೆ. ಆದರೆ, ಇದರ ದುರ್ಲಾಭವನ್ನು ಪಡೆದ ಮುದುಕನೊಬ್ಬ ಒಂದೇ ವರ್ಷದಲ್ಲಿ ಹನ್ನೊಂದು ಬಾರಿ ಲಸಿಕೆ ಪಡೆದು ಹುಬ್ಬೇರಿಸಿದ್ದಾನೆ.
ಬಿಹಾರದ ಮಾದೇಪುರ ಜಿಲ್ಲೆಯ ಬ್ರಹ್ಮದೇವ ಮಂಡಲ ಎಂಬ 84 ವರ್ಷದ ಮುದುಕ ಈ ವಿಚಿತ್ರ ಸಾಧನೆ ಮಾಡಿದವರು. ಮಾಧೇಪುರ ಜಿಲ್ಲೆಯ ಪುರಿಣಿಯ ನಿವಾಸಿ. ಇವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 11 ಬಾರಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಪ್ರತಿ ಬಾರಿ ಲಸಿಕೆ ಹಾಕಿದಾಗ ಆರೋಗ್ಯವಾಗಿದ್ದಾರೆ ಎಂದಿದ್ದರು. ತನ್ನ ಆರೋಗ್ಯ ಸರಿ ಇಲ್ಲದಿದ್ದಾಗ ನಕಲಿ ದಾಖಲೆಗಳ ತೋರಿಸಿ ಲಸಿಕೆ ಹಾಕಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ವಿನಯ ಕೃಷ್ಣ ಪ್ರಸಾದ್, ಪುರಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಳೆದ ವರ್ಷ ಫೆಬ್ರವರಿ 13 ರಂದು ಇವರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿತ್ತು. ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 13ರಂದು ಎರಡನೇ ಡೋಸ್ ಲಸಿಕೆ ಹಾಕಲಾಗಿತ್ತು. ನಂತರ ಅವರು ಹೊಸ ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡಿದ್ದು ಮೇ 19 ರಂದು ಮೂರನೇ ಡೋಸ್ ಪಡೆದಿದ್ದರು. ಆನಂತರ ಜೂನ್ 16, ಜುಲೈ 24, ಆಗಸ್ಟ್ 31, ಸೆಪ್ಟೆಂಬರ್ 11 ಮತ್ತು ಅದೇ ತಿಂಗಳ 22 ಮತ್ತು 24 ರಂದು ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ.
ಜನವರಿ ತಿಂಗಳ ಮೊದಲ ವಾರ 12 ನೇ ಬಾರಿ ಕೋವಿಡ್ ಲಸಿಕೆ ಪಡೆಯಲು ಬಂದಾಗ ಆರೋಗ್ಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದು ಪರಿಶೀಲನೆ ನಡೆಸಿದಾಗ ಮುದುಕನ ಅಪರಾವತಾರ ತಿಳಿದುಬಂದಿದೆ.
ಬ್ರಹ್ಮದೇವ್, ಅಂಚೆ ಇಲಾಖೆಯಲ್ಲಿ ಕೆಲಸದಲ್ಲಿದ್ದು ನಿವೃತ್ತನಾಗಿದ್ದು ಆರೋಗ್ಯ ಕಾರ್ಯಕರ್ತರ ನಿರ್ಲಕ್ಷ್ಯದಿಂದಾಗಿ ಈ ರೀತಿ ಲಸಿಕೆ ಪಡೆಯುವಂತಾಗಿತ್ತು. ತನಗೆ ಆರೋಗ್ಯ ತೊಂದರೆ ಇದ್ದುದರಿಂದ ಪದೇ ಪದೇ ಲಸಿಕೆ ಪಡೆದಿದ್ದು ಸ್ವಸ್ಥನಾಗಿದ್ದೇನೆ ಎಂದು ತಿಳಿಸಿದ್ದಾರೆ.
84-year-old man, Brahamdev Mandal, a resident of the Puraini area of Madhepura district in Bihar who claims to have taken 11 doses of the coronavirus vaccine has been booked by Bihar Police.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 03:01 pm
Mangalore Correspondent
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm