ಬ್ರೇಕಿಂಗ್ ನ್ಯೂಸ್
09-01-22 10:25 pm HK Desk news ದೇಶ - ವಿದೇಶ
ಕಾಸರಗೋಡು, ಜ.9 : ಸಾವಿನ ದವಡೆಗೆ ಸಿಲುಕಿದರೂ ಸುದೀರ್ಘ 30 ಗಂಟೆ ಈಜಿ ಮೀನುಗಾರನೊಬ್ಬ ಸಾವನ್ನು ಗೆದ್ದಿದ್ದಾನೆ. ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರಕ್ಕೆ ಬಿದ್ದ ತಮಿಳುನಾಡು ಮೂಲದ ಮೀನುಗಾರ ಜೋಸೆಫ್ (58) 30 ಗಂಟೆ ಈಜಿ ದಡ ಸೇರಿ ಅಚ್ಚರಿ ಸೃಷ್ಟಿಸಿದ್ದಾರೆ.
ಡಿ. 31ರಂದು ಮಂಗಳೂರಿನಿಂದ ಹೊರಟ ಮೀನುಗಾರಿಕೆ ದೋಣಿಯಲ್ಲಿದ್ದ 8 ಮಂದಿಯಲ್ಲಿ ಜೋಸೆಫ್ ಕೂಡ ಒಬ್ಬರು. ಜ. 6ರಂದು ಮುಂಜಾನೆ 2 ಗಂಟೆಗೆ ದೋಣಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಜೋಸೆಫ್ ನಾಪತ್ತೆಯಾಗಿದ್ದರು. ಆಗ ದೋಣಿ ಸಮುದ್ರ ದಡದಿಂದ ಸುಮಾರು 36 ನಾಟಿಕಲ್ ಮೈಲ್ ದೂರದಲ್ಲಿತ್ತು. ಬೆಳಗ್ಗೆ 11 ಗಂಟೆಯ ವರೆಗೆ ಹುಡುಕಾಡಿದರೂ ಅವರ ಪತ್ತೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ದೋಣಿಯ ಮಾಲಕರಿಗೆ ಮಾಹಿತಿ ನೀಡಲಾಗಿತ್ತು. ಕರಾವಳಿ ಕಾವಲು ಪೊಲೀಸರಿಗೆ ಮತ್ತು ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದು ಹುಡುಕಾಟಕ್ಕೆ ಸಹಾಯ ಯಾಚಿಸಿದ್ದರು. ಆದರೆ ಕೇಸು ದಾಖಲಿಸಿರಲಿಲ್ಲ.
ಈ ಮಧ್ಯೆ ಜ.7ರಂದು ಮೀನುಗಾರಿಕೆಗೆ ತೆರಳಿದ್ದ ಕಾಸರಗೋಡು ಕೀಯೂರು ಕಡಪ್ಪುರದ ದಿನೇಶ್, ಸುರೇಶ್, ಸೈನನ್ ಅವರು ತಮ್ಮ ದೋಣಿಯಲ್ಲಿ ಸಾಗುತ್ತಿದ್ದಾಗ, ಸಮುದ್ರದಲ್ಲಿ ವ್ಯಕ್ತಿಯೊಬ್ಬರನ್ನು ಕಂಡಿದ್ದಾರೆ. ಕೂಡಲೇ ಅವರನ್ನು ದೋಣಿಯಲ್ಲಿ ದಡಕ್ಕೆ ಕರೆ ತಂದಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರಿನ ದೋಣಿಯಿಂದ ನಾಪತ್ತೆಯಾಗಿದ್ದ ಜೋಸೆಫ್ ಅವರೇ ಎಂಬುದು ಈಗ ತಿಳಿದುಬಂದಿದೆ.
ಅವರು ಪತ್ತೆಯಾದ ಬಗ್ಗೆ ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನೆ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Joseph (58), a fisherman from Tamil Nadu, who fell into the sea while fishing, reached the shore after swimming for 30 hours in the sea.
09-10-25 12:57 pm
Bangalore Correspondent
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
09-10-25 05:33 pm
HK News Desk
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
09-10-25 08:22 pm
Mangalore Correspondent
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
13 ವರ್ಷಗಳ ಬಳಿಕ ಮನೆ ಸೇರಿದ ಯುವಕ ; ಪಿಯುಸಿ ಪರೀಕ್ಷ...
09-10-25 01:59 pm
ರಾಜಕೀಯ ಲಾಭಕ್ಕೆ ಶಾರದೋತ್ಸವ ಘಟನೆಯನ್ನ ಬಿಜೆಪಿ ಹಿಂದ...
09-10-25 11:58 am
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
09-10-25 05:30 pm
Mangalore Correspondent
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm