ಬ್ರೇಕಿಂಗ್ ನ್ಯೂಸ್
28-12-21 10:36 pm HK Desk news ದೇಶ - ವಿದೇಶ
ಭೋಪಾಲ್, ಡಿ.28 : ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಜನರನ್ನು ಕ್ರಿಸ್ತಿಯನ್ ಆಗಿ ಮತಾಂತರ ಮಾಡಿದ ಆರೋಪದಲ್ಲಿ ಕೆಥೋಲಿಕ್ ಚರ್ಚ್ ಪಾದ್ರಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡಕಟ್ಟು ಜನಾಂಗದ ಜನರು ಹೆಚ್ಚಿರುವ ಜಬುವಾ ಜಿಲ್ಲೆಯಲ್ಲಿ ಚರ್ಚ್ ಪಾದ್ರಿ ನೇತೃತ್ವದಲ್ಲಿ ಮತಾಂತರ ಕಾರ್ಯ ನಡೆಯುತ್ತಿದ್ದ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಫಾದರ್ ಜಾಮ್ ಸಿಂಗ್ ದಿಂಡೋರ್, ಪ್ಯಾಸ್ಟರ್ ಆನ್ ಸಿಂಗ್ ನಿನಾಮಾ ಮತ್ತು ಮಂಗು ಮೆಹ್ತಾಬ್ ಭೂರಿಯಾ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇವರು ಬುಡಕಟ್ಟು ಜನರಿಗೆ ಉಚಿತ ಶಿಕ್ಷಣ ಮತ್ತು ಮಿಶನರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಆಮಿಷವೊಡ್ಡಿ ಮತಾಂತರ ನಡೆಸುತ್ತಿದ್ದರು ಎಂದು ದೂರಲಾಗಿದೆ.
ಬುಡಕಟ್ಟು ಜನಾಂಗದ ತೆತಿಯಾ ಬಾರಿಯಾ ಎಂಬಾತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಫಾದರ್ ಜಾಮ್ ಸಿಂಗ್ ಡಿ.26ರಂದು ತನಗೆ ಮತ್ತು ಗ್ರಾಮದ ಇನ್ನೊಬ್ಬ ಮಹಿಳೆ ಸೂರ್ತಿ ಬಾರಿಯಾ ಎಂಬವರಿಗೆ ಕರೆ ಮಾಡಿ, ಬರಹೇಳಿದ್ದರು. ಪ್ರಾರ್ಥನಾ ಕೇಂದ್ರದಲ್ಲಿ ಕುಳ್ಳಿರಿಸಿ, ನಮ್ಮ ಮೇಲೆ ನೀರು ಚಿಮುಕಿಸಿ ಬೈಬಲ್ ಓದುವಂತೆ ಹೇಳಿದ್ದಾರೆ. ಆಮೂಲಕ ನಾವು ಮತಾಂತರ ಆಗುವಂತೆ ಹೇಳಿದ್ದಾರೆ. ಅಲ್ಲದೆ, ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಕುಟುಂಬದ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದರು. ನಾವು ಅದನ್ನು ನಿರಾಕರಿಸಿ ಪೊಲೀಸ್ ದೂರು ನೀಡಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದರು. ಪೊಲೀಸರು ಮಧ್ಯಪ್ರದೇಶ ಸರಕಾರ ಕಳೆದ ವರ್ಷ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಬಂಧಿಸಿದ್ದಾರೆ.
A Catholic church priest and a pastor were among three people arrested by the Madhya Pradesh Police on Sunday night for allegedly luring tribals from a village in the state’s Jhabua district to convert to Christianity. A first information report was filed at Kalyanpura police station based on a complaint by a man identified as Tetiya Bariya. The complainant alleged that Father Jam Singh Dindore, Pastor Ansingh Ninama and a person named Mangu Mehtab Bhuriya lured tribal villagers into Christianity by promising free education and treatment in missionary-run schools and hospitals.
09-10-25 12:57 pm
Bangalore Correspondent
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
09-10-25 12:12 pm
HK News Desk
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
09-10-25 01:59 pm
Udupi Correspondent
ರಾಜಕೀಯ ಲಾಭಕ್ಕೆ ಶಾರದೋತ್ಸವ ಘಟನೆಯನ್ನ ಬಿಜೆಪಿ ಹಿಂದ...
09-10-25 11:58 am
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am