ಬ್ರೇಕಿಂಗ್ ನ್ಯೂಸ್
27-12-21 02:34 pm HK Desk news ದೇಶ - ವಿದೇಶ
ನವದೆಹಲಿ, ಡಿ.27 : ಅಫ್ಘಾನಿಸ್ತಾನದಲ್ಲಿ ನಿಧಾನಕ್ಕೆ ತಾಲಿಬಾನಿಗಳು ಇಸ್ಲಾಮಿಕ್ ಕ್ರೂರ ಶಾಸನವನ್ನು ಜನರ ಮೇಲೆ ಹೇರಲು ಹೊರಟಿದ್ದಾರೆ. ಇತ್ತೀಚೆಗೆ ಸರಕಾರಿ ಕರ್ತವ್ಯದಲ್ಲಿರುವ ಹೆಣ್ಮಕ್ಕಳು ಕೆಲಸ ಬಿಡುವಂತೆ ತಾಕೀತು ಮಾಡಿದ್ದ ತಾಲಿಬಾನ್ ಆಡಳಿತ, ಈಗ ಮಹಿಳೆಯರು ಒಬ್ಬಂಟಿಯಾಗಿ ದೀರ್ಘ ಪ್ರಯಾಣ ಹೋಗುವಂತಿಲ್ಲ ಎಂದು ಮತ್ತೊಂದು ಫತ್ವಾ ಹೊರಡಿಸಿದೆ.
ಮಹಿಳೆಯರು ಒಬ್ಬಂಟಿಯಾಗಿ 45 ಮೈಲ್ (72 ಕಿಮೀ) ಹೆಚ್ಚು ದೂರ ಸಾರ್ವಜನಿಕ ವಾಹನದಲ್ಲಿ ಹೋಗುವಂತಿಲ್ಲ. ಮಹಿಳೆಯರು ಹೊರಗೆ ಹೋಗುವಾಗ ಕಡ್ಡಾಯವಾಗಿ ಹತ್ತಿರದ ಸಂಬಂಧಿಕನಾಗಿರುವ ಪುರುಷ ವ್ಯಕ್ತಿಯನ್ನು ಇಟ್ಟುಕೊಳ್ಳಬೇಕು ಎಂದು ಸಾದಿಕ್ ಆಕಿರ್ ಮುಜಾಹಿರ್ ಎಂಬ ತಾಲಿಬಾನ್ ಸರಕಾರದ ವಕ್ತಾರನೊಬ್ಬ ತಿಳಿಸಿದ್ದಾನೆ.
ಇದಲ್ಲದೆ, ಜನರು ತಮ್ಮ ವಾಹನಗಳಲ್ಲಿ ತೆರಳುವಾಗ ಯಾವುದೇ ಸಂಗೀತವನ್ನೂ ಕೇಳುವಂತಿಲ್ಲ ಎಂದು ಮತ್ತೊಂದು ಫತ್ವಾ ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾರದ ಹಿಂದೆ, ಟಿವಿಗಳಲ್ಲಿ ತೋರಿಸುವ ಡ್ರಾಮಾ ಮತ್ತು ಸೋಪ್ ಜಾಹೀರಾತುಗಳಲ್ಲಿ ಮಹಿಳಾ ನಟಿಯರು ಸ್ಕಾರ್ಫ್ ಹಾಕದೇ ಭಾಗವಹಿಸಿದ್ದರೆ ಅದನ್ನು ಪ್ರಸಾರ ಮಾಡದಂತೆ ಕಟ್ಟಪ್ಪಣೆ ವಿಧಿಸಲಾಗಿತ್ತು. ಅಲ್ಲದೆ, ತಲೆ, ಮುಖ ಮುಚ್ಚಿಕೊಳ್ಳುವ ಪರ್ದಾ, ಬುರ್ಖಾ ಹಾಕದೆ ಬರುವ ಮಂದಿಯನ್ನು ಸಾರ್ವಜನಿಕ ವಾಹನಗಳಲ್ಲಿ ಹತ್ತಿಸಿಕೊಳ್ಳುವಂತಿಲ್ಲ ಎಂದೂ ಆದೇಶ ಮಾಡಲಾಗಿದೆ.
ಈ ಹಿಂದೆ 1990ರಲ್ಲಿ ತಾಲಿಬಾನ್ ಆಡಳಿತ ಇದ್ದಾಗಿನ ನಿರ್ಬಂಧಗಳನ್ನು ಮಹಿಳೆಯರ ಮೇಲೆ ಹೇರಲಾಗಿದೆ. ಹೆಣ್ಮಕ್ಕಳು ಪ್ರೌಢಶಾಲೆಯ ಬಳಿಕ ಶಿಕ್ಷಣ ಪಡೆಯುವಂತಿಲ್ಲ. ಬುರ್ಖಾ ಧರಿಸದೆ ಹೊರ ಬರುವಂತಿಲ್ಲ. ಒಂದೂರಿಂದ ಇನ್ನೊಂದು ಊರಿಗೆ ಒಬ್ಬಂಟಿಯಾಗ ಪ್ರಯಾಣ ಮಾಡುವಂತಿಲ್ಲ ಇತ್ಯಾದಿ ನಿರ್ಬಂಧಗಳನ್ನು ಹೊಸತಾಗಿ ಹೇರಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಶೋಷಣೆ ವಿಚಾರದಲ್ಲಿ ಭಾರೀ ಆಕ್ರೋಶ ಕೇಳಿಬಂದಿದೆ. ಅಫ್ಘಾನಿಸ್ತಾನದಲ್ಲಿ ಆಗಸ್ಟ್ 15ರ ನಂತರ ತಾಲಿಬಾನ್ ಆಡಳಿತ ಜಾರಿಗೆ ಬಂದಿದ್ದು, ಮಹಿಳೆಯರನ್ನು ಟಾರ್ಗೆಟ್ ಮಾಡಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ.
Afghanistan's Taliban authorities said Sunday that women seeking to travel long distances should not be offered road transport unless they are accompanied by a close male relative. The guidance issued by the ministry for the promotion of virtue and prevention of vice drew condemnation from rights activists and called on vehicle owners to refuse rides to women not wearing headscarves.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am