ಬ್ರೇಕಿಂಗ್ ನ್ಯೂಸ್
25-12-21 11:03 pm HK Desk news ದೇಶ - ವಿದೇಶ
ನವದೆಹಲಿ, ಡಿ. 25: ಭಾರತದಲ್ಲಿ ಜನವರಿ 10ರಿಂದ ವೈದ್ಯಕೀಯ ಸಿಬ್ಬಂದಿಗೆ ಹಾಗೂ ಮೊದಲ ಶ್ರೇಣಿ ಕಾರ್ಮಿಕರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಶನಿವಾರ ರಾತ್ರಿ 10 ಗಂಟೆ ಹೊತ್ತಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದಲ್ಲಿನ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-19 ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವಿಕೆ ಭೀತಿ ನಡುವೆ ಭಾರತದಲ್ಲಿ 15 ವರ್ಷದಿಂದ 18 ವರ್ಷದ ಮಕ್ಕಳಿಗೂ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುವುದು ಎಂದುಪ್ರಧಾನಿ ಮೋದಿ ಘೋಷಿಸಿದರು.
ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:
* ಕೊರೊನಾವೈರಸ್ ಹೊಸ ಓಮಿಕ್ರಾನ್ ರೂಪಾಂತರದಿಂದಾಗಿ ಪ್ರಪಂಚದ ಅನೇಕ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ಯಾರೂ ಭಯ ಪಡಬೇಡಿ, ಆದರೆ ಜಾಗರೂಕರಾಗಿರಿ ಮತ್ತು ನಿಯಮಿತವಾಗಿ ಮಾಸ್ಕ್ ಅನ್ನು ಬಳಸಿ ಮತ್ತು ಕೈಗಳನ್ನು ಸ್ವಚ್ಛಗೊಳಿಸಿ.
* ಭಾರತವು 18 ಲಕ್ಷ ಪ್ರತ್ಯೇಕ ಹಾಸಿಗೆಗಳು, 5 ಲಕ್ಷ ಆಮ್ಲಜನಕ ಬೆಂಬಲಿತ ಹಾಸಿಗೆಗಳು, 1.40 ಲಕ್ಷ ICU ಹಾಸಿಗೆಗಳು, 90,000 ಮಕ್ಕಳ ICU ಮತ್ತು ICU ಅಲ್ಲದ ಹಾಸಿಗೆಗಳನ್ನು ಹೊಂದಿದೆ. ನಮ್ಮಲ್ಲಿ 3,000ಕ್ಕೂ ಹೆಚ್ಚು ಪಿಎಸ್‌ಎ ಆಮ್ಲಜನಕ ಘಟಕಗಳಿವೆ, ರಾಷ್ಟ್ರದಾದ್ಯಂತ 4 ಲಕ್ಷ ಆಮ್ಲಜನಕ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ.
* ಕೋವಿಡ್ 19ರ ಗಂಭೀರತೆಯನ್ನು ಅರಿತು ಇಂದು ಭಾರತದಲ್ಲಿ 141 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಶೇಕಡಾ 90ಕ್ಕಿಂತ ಹೆಚ್ಚು ಅರ್ಹ ಜನರಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ.
* ಜನವರಿ 3ರಿಂದ 15 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಆರಂಭಿಸಲಾಗುವುದು.
* ತೀವ್ರ ಅಸ್ವಸ್ಥತೆಯನ್ನು ಹೊಂದಿರುವ 60 ವರ್ಷ ಮೇಲ್ಪಟ್ಟ ವೃದ್ಧರು ವೈದ್ಯರ ಶಿಫಾರಸ್ಸಿನ ಮೇಲೆ ಕೊವಿಡ್-19 ಬೂಸ್ಟರ್ ಡೋಸ್ ಅನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
12 ರಿಂದ 18 ವರ್ಷದೊಳಗಿನವರಿಗೆ ಕೊವ್ಯಾಕ್ಸಿನ್:
ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು 12 ಮೇಲ್ಪಟ್ಟವರಿಗೆ ನೀಡಲು ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರ(DCGI)ದಿಂದ ಅನುಮೋದನೆ ಪಡದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ದೇಶದಲ್ಲಿ 12 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನವರ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ಭಾರತ್ ಬಯೋಟೆಕ್ ಸಂಸ್ಥೆಯು ಈ ಮೊದಲು 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಯೋಗಗಳ ಅಂಕಿ-ಅಂಶಗಳನ್ನು ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಅರ್ಗನೈಸೆಷನ್(CDSCO)ಗೆ ಸಲ್ಲಿಸಲಾಗಿತ್ತು. ಭಾರತ್ ಬಯೋಟೆಕ್ ಸಂಸ್ಥೆಯು ಸಲ್ಲಿಸಿದ ವೈದ್ಯಕೀಯ ಪ್ರಯೋಗಗಳ ಅಂಕಿ-ಅಂಶವನ್ನು CDSCO ಪರಿಶೀಲಿಸಿದೆ. ತದನಂತರದಲ್ಲಿ ವಿಷಯ ತಜ್ಞರ ಸಮಿತಿಗೆ ಸಕಾರಾತ್ಮಕ ಶಿಫಾರಸ್ಸುಗಳನ್ನು ನೀಡಿರುವ ಬೆನ್ನಲ್ಲೇ ಅನುಮೋದನೆ ಲಭಿಸಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆಯು ತಿಳಿಸಿದೆ ಎಂದು ಎಎನ್ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.
Prime Minister Narendra Modi on Saturday announced that India’s vaccination programme will be opened to children over the age of 15 from January 3. He also said that a “precautionary dose” would be administered to healthcare workers and those over 60 years with co-morbidities from January 10.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm