ಬ್ರೇಕಿಂಗ್ ನ್ಯೂಸ್
16-12-21 03:34 pm HK Desk news ದೇಶ - ವಿದೇಶ
ತಿರುವನಂತಪುರ, ಡಿ.16 : ವರ್ಷದ ಹಿಂದಷ್ಟೇ ಬಿಜೆಪಿ ಸೇರ್ಪಡೆಗೊಂಡು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದ ದಿಲ್ಲಿಯ ಮೆಟ್ರೋ ಮ್ಯಾನ್ ಎಂದೇ ಹೆಸರಾಗಿದ್ದ ಇ.ಶ್ರೀಧರನ್ ರಾಜಕೀಯದಿಂದ ದೂರ ಸರಿಯುವುದಾಗಿ ಹೇಳಿದ್ದಾರೆ.
ನಾನಿನ್ನು ರಾಜಕಾರಣಿಯಾಗಿ ಮುಂದುವರಿಯುವುದಿಲ್ಲ. ನಾನು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ. ನನಗೀಗ 90 ವರ್ಷ. ಈ ಪ್ರಾಯದಲ್ಲಿ ರಾಜಕೀಯ ನಡೆಸುವುದು ಅಪಾಯಕಾರಿ. ನನಗೆ ರಾಜಕೀಯದಲ್ಲಿ ಯಾವುದೇ ಸಾಧನೆ ಮಾಡುವ ಕನಸು ಕೂಡ ಉಳಿದಿಲ್ಲ. ನನಗೆ ಸಮಾಜ ಸೇವೆ ಮಾಡಲು ರಾಜಕೀಯ ಬೇಕಾಗಿಲ್ಲ. ಈಗಾಗಲೇ ಮೂರು ಟ್ರಸ್ಟ್ ನಡೆಸುತ್ತಿದ್ದು, ಅದರಲ್ಲಿಯೇ ಸಮಾಜಸೇವೆ ಮುಂದುವರಿಸುತ್ತೇವೆ ಎಂದು ಇ.ಶ್ರೀಧರನ್ ಹೇಳಿದ್ದಾರೆ.
ಕಳೆದ ಬಾರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೆಟ್ರೋ ಮ್ಯಾನ್ ಶ್ರೀಧರನ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಪಾಲಕ್ಕಾಡ್ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶ್ರೀಧರನ್, ಹಾಲಿ ಶಾಸಕರಾಗಿದ್ದ ಶಾಫಿ ಪರಂಬಿಲ್ ವಿರುದ್ಧ ತೀವ್ರ ಸ್ಪರ್ಧೆ ಒಡ್ಡಿ 3859 ಮತಗಳಿಂದ ಸೋಲು ಕಂಡಿದ್ದರು. ಬಿಜೆಪಿ ರಾಜ್ಯದಲ್ಲಿ 35 ಸೀಟುಗಳನ್ನು ಗೆಲ್ಲಲು ಪ್ಲಾನ್ ಹಾಕಿತ್ತು. ಫಲಿತಾಂಶ ಬಂದಾಗ ಒಂದು ಸ್ಥಾನ ಇದ್ದ ನೆಮ್ಮಮ್ ಕ್ಷೇತ್ರವೂ ಬಿಜೆಪಿ ಕಳಕೊಂಡಿತ್ತು. ಎಲ್ಲ ಕಡೆಯೂ ತುರುಸಿನ ಸ್ಪರ್ಧೆ ಒಡ್ಡಿದ್ದ ಬಿಜೆಪಿ ಅಲ್ಪ ಅಂತರದಿಂದ ಸೋಲು ಕಂಡಿತ್ತು.
ದೆಹಲಿ ಮೆಟ್ರೋ ಕಾಮಗಾರಿಯ ಪ್ಲಾನ್ ಮಾಡಿ, ಜನಮೆಚ್ಚುಗೆ ಪಡೆದಿದ್ದ ಕೇರಳ ಪಾಲಕ್ಕಾಡ್ ಮೂಲದ ಶ್ರೀಧರನ್ ಮೂಲತಃ ಸಿವಿಲ್ ಇಂಜಿನಿಯರ್ ಆಗಿದ್ದು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ.
Metroman E Sreedharan has quit active politics, less than a year after he joined the Bharatiya Janata Party.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 11:12 am
HK News Staffer
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm