ಬ್ರೇಕಿಂಗ್ ನ್ಯೂಸ್
09-12-21 12:07 pm HK Desk news ದೇಶ - ವಿದೇಶ
ಕಾರ್ಕಳ, ಡಿ.9 : ತಮಿಳುನಾಡಿನ ಊಟಿಯ ಬಳಿ ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿ ಮಡಿದ ಯೋಧರ ಪೈಕಿ ಕಾರ್ಕಳದ ಅಳಿಯನೊಬ್ಬ ಇದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ದುರಂತದಲ್ಲಿ ಮರಣವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಕಾರ್ಕಳ ಮೂಲದ ಸೇನೆಯಲ್ಲಿ ಕರ್ತವ್ಯದಲ್ಲಿರುವ ಯುವತಿಯನ್ನು ಮದುವೆಯಾಗಿದ್ದರು.
ಕಾರ್ಕಳ ತಾಲೂಕಿನ ಸಾಲ್ಮರದ ನಿವಾಸಿಗಳಾದ ದಿವಂಗತ ಫೆಲಿಕ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ದಂಪತಿಯ ಮಗಳು ಆಗ್ನೆಸ್ ಪ್ರಫುಲ್ಲ ಮಿನೇಜಸ್ ಸೇನೆಯಲ್ಲಿ ಕರ್ತವದಲ್ಲಿದ್ದಾರೆ. ಹಲವು ವರ್ಷಗಳಿಂದ ಇಂಡಿಯನ್ ಆರ್ಮಿಯಲ್ಲಿ ಕರ್ತವದಲ್ಲಿರುವ ಆಗ್ನೆಸ್ ಪ್ರಫುಲ್ಲ ಸದ್ಯ ಲೆಫ್ಟಿನೆಂಟ್ ಹುದ್ದೆಯಲ್ಲಿದ್ದಾರೆ.

ಕರ್ತವ್ಯದ ಮಧ್ಯೆ ಹರ್ಜಿಂದರ್ ಸಿಂಗ್ ಮತ್ತು ಆಗ್ನೆಸ್ ಪ್ರಫುಲ್ಲ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ತಂದೆ- ತಾಯಿ ನೆಲೆಸಿದ್ದ ಸಾಲ್ಮರಕ್ಕೆ ದಂಪತಿ ಹಲವು ಬಾರಿ ಭೇಟಿ ನೀಡಿದ್ದರು. ರಜೆ ಸಂದರ್ಭಗಳಲ್ಲಿ ಹರ್ಜಿಂದರ್ ಸಿಂಗ್ ಮತ್ತು ಆಗ್ನೆಸ್ ಊರಿಗೆ ಬಂದು ಹೋಗುತ್ತಿದ್ದರು ಎಂದು ಅಲ್ಲಿನ ಸಂಬಂಧಿಕರು ನೆನೆಯುತ್ತಾರೆ.
ಆಗ್ನೆಸ್ ಪ್ರಫುಲ್ಲ ಅವರ ತಾಯಿ ಮೇರಿ ಮಿನೇಜಸ್ ಈಗಲೂ ಸಾಲ್ಮರದ ಮೂಲ ಮನೆಯಲ್ಲೇ ಇದ್ದಾರೆ. ಡಿ.8ರ ಹೆಲಿಕಾಪ್ಟರ್ ದುರಂತದಲ್ಲಿ ಹರ್ಜಿಂದರ್ ಸಿಂಗ್ ಹೆಸರೂ ಇರುವುದು ತಿಳಿಯುತ್ತಿದ್ದಂತೆ, ಸಂಬಂಧಿಕರು ಮತ್ತು ಮನೆಮಂದಿ ಶೋಕಕ್ಕೆ ಒಳಗಾಗಿದ್ದಾರೆ.
Karkala has lost its son-in-law in the helicopter crash which happened in Coonoor on Wednesday December 8. Lt Col Harjinder Singh happened to be the son-in-law of Karkala origin Late Felix Menezes and Mary Menezes. Harjinder Singh had married Lt Agnes Prafulla Menezes, daughter of the late Felix and Mary Menezes of Salmara here in Karkala.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 11:12 am
HK News Staffer
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm