ಬ್ರೇಕಿಂಗ್ ನ್ಯೂಸ್
29-11-21 11:02 am HK Desk news ದೇಶ - ವಿದೇಶ
ನವದೆಹಲಿ, ನ.29: ಜಾಗತಿಕ ಮಟ್ಟದಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಬಗ್ಗೆ ಕಳವಳ ಹೆಚ್ಚಿದ ಬೆನ್ನಲ್ಲೇ ಕೇಂದ್ರ ಸರಕಾರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಬಂಧಗಳನ್ನು ವಿಧಿಸಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಸಂಬಂಧಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಅಪಾಯ ಸೂಚಕ ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ 14 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
ಓಮಿಕ್ರಾನ್ ಅಪಾಯದಲ್ಲಿರುವ ದಕ್ಷಿಣ ಆಫ್ರಿಕಾ, ಚೀನಾ, ಯುನೈಟೆಡ್ ಕಿಂಗ್‌ಡಮ್, ಯುರೋಪಿಯನ್ ದೇಶಗಳು, ಬಾಂಗ್ಲಾದೇಶ, ಬ್ರೆಜಿಲ್, ಬೋಟ್ಸ್ವಾನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಇಸ್ರೇಲ್ ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕಠಿಣ ನಿಯಮಗಳನ್ನು ಹೇರಲಾಗಿದೆ. ಈ ದೇಶಗಳಿಂದ ಪ್ರಯಾಣ ಬೆಳೆಸುವರು ಅಲ್ಲಿಂದ ಹೊರಡುವ ಮೊದಲೇ 14 ದಿನಗಳ ಪ್ರಯಾಣದ ಇತಿಹಾಸ ಮತ್ತು 72 ಗಂಟೆಗಳ ಒಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಭಾರತದ ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕಾಗಿದೆ. ಅಲ್ಲದೆ, ಭಾರತದ ಯಾವುದೇ ವಿಮಾನ ನಿಲ್ದಾಣದಲ್ಲಿ ಬಂದರೂ ಪರೀಕ್ಷೆಗೆ ಒಳಪಡಬೇಕು. ಪರೀಕ್ಷಾ ವರದಿ ಬರುವ ತನಕ ವಿಮಾನ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕು. ವರದಿ ನೆಗೆಟಿವ್ ಆದರೂ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗಬೇಕು.
ತಪಾಸಣೆಯ ವೇಳೆಯಲ್ಲಿ ಪಾಸಿಟಿವ್ ವರದಿ ಬಂದರೆ ಅವರ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ (ಓಮಿಕ್ರಾನ್ ಪರೀಕ್ಷೆ) ಕಳುಹಿಸಲಾಗುತ್ತದೆ. ಅಲ್ಲದೇ, ಅಂಥವರನ್ನು ಏರ್ಪೋರ್ಟ್ ಆವರಣದಲ್ಲಿಯೇ ಕ್ವಾರಂಟೈನ್‌ಗೆ ಮಾಡಲಾಗುತ್ತದೆ. 5 ವರ್ಷದ ಮೇಲ್ಪಟ್ಟವರಿಗೆ ಈ ರೀತಿಯ ಕಟ್ಟುನಿಟ್ಟಿನ ನಿಮಯ ಅನ್ವಯ ಆಗಲಿದೆ. ವಿಮಾನ ನಿಲ್ದಾಣದಲ್ಲಿ ಇಳಿದು ಮತ್ತೊಂದು ವಿಮಾನ ಏರಬೇಕಿದ್ದರೂ, ಅಲ್ಲಿ ಟೆಸ್ಟಿಂಗ್ ವರದಿ ಬರದೇ ಬೇರೆ ವಿಮಾನ ಹತ್ತುವಂತಿಲ್ಲ. ಏರ್ಪೋರ್ಟ್ ಆವರಣದಲ್ಲಿ ಪ್ರಯಾಣಿಕರ ಪರೀಕ್ಷಾ ವೆಚ್ಚವನ್ನು ವಿಮಾನಯಾನ ಸಚಿವಾಲಯ ಭರಿಸಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಈ ಹೊಸ ಮಾರ್ಗಸೂಚಿ ನಿಯಮಗಳು ಡಿಸೆಂಬರ್ 1ರಿಂದ ಅನ್ವಯ ಆಗಲಿದೆ.
ಡಿಸೆಂಬರ್ 15 ರಿಂದ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಎರಡು ವರ್ಷಗಳ ನಂತರ ಪುನರಾರಂಭಿಸಲು ಕೇಂದ್ರ ಸರಕಾರ ಒಲವು ಹೊಂದಿತ್ತು. ಆದರೆ, ಈಗ ಅದರ ಬಗ್ಗೆ ಪುನರ್ ಪರಿಶೀಲನೆ ನಡೆಸುವುದಾಗಿ ಹೇಳಿದೆ. ಅಪಾಯಕಾರಿ ಅಲ್ಲದೆ, ದೇಶಗಳಿಂದ ಆಗಮಿಸುವ ಮಂದಿಯೂ ಏರ್ಪೋರ್ಟ್ ನಲ್ಲಿ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್ ಆದಲ್ಲಿ ಮಾತ್ರ ಮನೆಗೆ ಹೋಗಿ, ಹೋಮ್ ಕ್ವಾರಂಟೈನ್ ಇರಲು ಅವಕಾಶ ನೀಡಲಾಗಿದೆ.
ಹೊಸ ಮಾರ್ಗಸೂಚಿಯಲ್ಲಿ ಏನಿದೆ ?
ಎಲ್ಲಾ ಪ್ರಯಾಣಿಕರು ಆನ್‌ಲೈನ್ ಏರ್ ಸುವಿಧಾ ಪೋರ್ಟಲ್‌ನಲ್ಲಿ (https://www.newdelhiairport.in/airsuvidha/apho-registration) 14 ದಿನಗಳ ಹಿಂದಿನ ತಮ್ಮ ಪ್ರಯಾಣದ ವಿವರಗಳನ್ನು ಒಳಗೊಂಡಂತೆ ಸ್ವಯಂ ಘೋಷಣೆ ಪ್ರತಿಯನ್ನು ಸಲ್ಲಿಸಬೇಕು. ವರದಿಯನ್ನು ಅಪ್‌ಲೋಡ್ ಮಾಡಿ ಪ್ರಯಾಣವನ್ನು ಕೈಗೊಳ್ಳುವ ಮೊದಲು 72 ಗಂಟೆಗಳ ಒಳಗೆ ಈ ಪರೀಕ್ಷೆಯನ್ನು ನಡೆಸಬೇಕು.
ಪ್ರತಿ ಪ್ರಯಾಣಿಕರು ವರದಿಯ ದೃಢೀಕರಣಕ್ಕೆ ಸಂಬಂಧಿಸಿ ಘೋಷಣೆಯನ್ನು ಸಲ್ಲಿಸಬೇಕು. ಅದರಲ್ಲಿ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆಗೆ ಎದುರಿಸಬೇಕಾಗುತ್ತದೆ. ಪ್ರಯಾಣವನ್ನು ಕೈಗೊಳ್ಳುವ ಮೊದಲು ಪೋರ್ಟಲ್‌ನಲ್ಲಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳ ಮೂಲಕ ಕ್ವಾರಂಟೈನ್ ನಿಯಮಕ್ಕೆ ಬದ್ಧರಾಗಿರುವ ಭರವಸೆ ನೀಡಬೇಕು.
ಅಪಾಯಕಾರಿ ದೇಶಗಳಿಂದ ವಿಮಾನ ರದ್ದುಗೊಳಿಸಿ
ಇದೇ ವೇಳೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಓಮಿಕ್ರಾನ್ ಅಪಾಯ ಇರುವ ದೇಶಗಳಿಂದ ವಿಮಾನ ಸಂಚಾರವನ್ನು ರದ್ದುಪಡಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ನಾವು ಏನು ಕ್ರಮ ಕೈಗೊಳ್ಳಬೇಕೋ ಅವೆಲ್ಲವನ್ನೂ ಮಾಡುತ್ತೇವೆ. ಆದರೆ, ಅಂತಹ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರಿಗೆ ನಿರ್ಬಂಧ ಹೇರಿದರೆ ಒಳ್ಳೆಯದು. ಈ ಬಗ್ಗೆ ವಿಳಂಬ ತೋರಿದರೆ ಅಪಾಯ ಆಗಬಹುದು ಎಂದು ಹೇಳಿದ್ದಾರೆ.
ಅಪಾಯಕಾರಿ ಎಂಬುದು ಖಚಿತವಾಗಿಲ್ಲ
ಓಮಿಕ್ರಾನ್ ಬಗ್ಗೆ ಜಾಗತಿಕ ನೆಲೆಯಲ್ಲಿ ಕಳವಳ ಉಂಟಾದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು, ಹೊಸ ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿ ಮತ್ತು ಹೆಚ್ಚು ವೇಗವಾಗಿ ಹರಡುತ್ತದೆ ಅನ್ನುವುದಕ್ಕೆ ಯಾವುದೇ ಆಧಾರ ಲಭ್ಯವಾಗಿಲ್ಲ ಎಂದು ಹೇಳಿದೆ. ಕೋವಿಡ್ ಸೋಂಕಿಗೆ ಒಳಗಾದವರಿಗೆ ಈ ರೋಗ ಬೇಗನೆ ಹರಡುವ ಸಾಧ್ಯತೆ ಇದೆ. ಆದರೆ, ಈಗಾಗ್ಲೇ ಲಸಿಕೆ ನೀಡಿರುವುದರಿಂದ ಇದರಿಂದ ಮರಣ ಅಥವಾ ಗಂಭೀರ ಸ್ಥಿತಿಗೆ ಒಳಗಾಗುವ ಸಾಧ್ಯತೆ ಕಡಿಮೆ. ಅಲ್ಲದೇ, ಇತರೇ ರೂಪಾಂತರಿ ವೈರಸ್ ಗಳಿಗಿಂತ ಹೆಚ್ಚು ಅಪಾಯಕಾರಿ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ ಎಂದೂ ಹೇಳಿದೆ.
International passengers must submit 14 days' travel history and upload negative Covid test results, the government said on Sunday. Travellers from countries deemed "at-risk" will also undergo a mandatory 7-day home quarantine if they test negative for the virus, the Union Health Ministry said in revised travel guidelines for international passengers in view of 'Omicron' - a new variant of Covid that has been classified as a variant of concern by the World Health Organisation.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
09-10-25 12:12 pm
HK News Desk
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
09-10-25 11:58 am
Mangalore Correspondent
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am