ಬ್ರೇಕಿಂಗ್ ನ್ಯೂಸ್
27-11-21 07:28 pm HK Desk news ದೇಶ - ವಿದೇಶ
ನವದೆಹಲಿ, ನ.27: ಹೊಸ ರೂಪಾಂತರಿ ಕೋವಿಡ್ ವೈರಸ್ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ಎಂದು ಹೆಸರಿಸಿದ್ದು, ಈಗಾಗಲೇ ಜಾಗತಿಕ ನೆಲೆಯಲ್ಲಿ ಈ ಸೋಂಕಿನ ಬಗ್ಗೆ ಕಳವಳ ವ್ಯಕ್ತವಾಗಿದೆ. ಸೌತ್ ಆಫ್ರಿಕಾದಲ್ಲಿ ಮೊದಲು ಈ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಹೀಗಾಗಿ ಜಗತ್ತಿನ ಬಹುತೇಕ ಮುಂಚೂಣಿ ದೇಶಗಳು ಸೌತ್ ಆಫ್ರಿಕಾ ಸೇರಿದಂತೆ ಆಸುಪಾಸಿನ ಆರು ದೇಶಗಳಿಂದ ಯಾರು ಕೂಡ ಬರುವಂತಿಲ್ಲ ಎಂದು ನಿರ್ಬಂಧ ಹೇರಿದೆ.
ಭಾರತದಲ್ಲಿ ಅಲ್ಲಿಂದ ಬರುವ ಪ್ರಯಾಣಿಕರಿಗೆ ಪೂರ್ತಿ ನಿರ್ಬಂಧ ಹೇರಿಲ್ಲ. ಅದರ ಬದಲಿಗೆ, ಆಯಾ ಭಾಗದಲ್ಲಿ ದೇಶವನ್ನು ಪ್ರವೇಶಿಸುವ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆ ನಡೆಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಆಯಾ ರಾಜ್ಯ ಸರಕಾರಗಳು ದಕ್ಷಿಣ ಆಫ್ರಿಕಾ ಖಂಡದ ದೇಶಗಳಿಂದ ಬರುವ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಆದೇಶ ಮಾಡಿದೆ. ಮುಂಬೈನಲ್ಲಿ ಸೌತ್ ಆಫ್ರಿಕಾದಿಂದ ಬರುವ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ಆಗಬೇಕೆಂದು ಅಲ್ಲಿನ ಸರಕಾರ ನಿರ್ಬಂಧ ಹಾಕಿದೆ.
ಈ ನಡುವೆ, ಜರ್ಮನಿ ಮತ್ತು ಜೆಕ್ ರಿಪಬ್ಲಿಕ್ ದೇಶಗಳಲ್ಲಿಯೂ ಒಮಿಕ್ರಾನ್ ರೂಪಾಂತರಿ ತಳಿ ಪತ್ತೆಯಾಗಿರುವುದನ್ನು ಅಲ್ಲಿನ ಸರಕಾರ ಹೇಳಿಕೊಂಡಿದೆ. ಸೌತ್ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಯಲ್ಲಿ ಕೋವಿಡ್ ಹೊಸ ಪ್ರಕರಣ ಕಂಡುಬಂದಿದ್ದಾಗಿ ಅಲ್ಲಿನ ಸೋಶಿಯಲ್ ಅಫೇರ್ಸ್ ಸಚಿವ ಕೈ ಕ್ಲೋಸ್ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, ಇಂಗ್ಲೆಂಡಿನ ವಿಜ್ಞಾನಿಯೊಬ್ಬರು ಈ ಹೊಸ ರೂಪಾಂತರಿ ತಳಿಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅದೇನು ದೊಡ್ಡ ಅಪಾಯಕಾರಿ ಆಗಲ್ಲ. ಕೊರೊನಾ ಲಸಿಕೆ ಅದರ ಅಪಾಯಕಾರಿ ಅಂಶವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ ಎಂದು ಮೈಕ್ರೋಬಯಾಲಜಿಸ್ಟ್ ಕೇಲಮ್ ಸೆಂಪಲ್ ಹೇಳಿದ್ದಾರೆ. ಅವರು ಇಂಗ್ಲೆಂಡ್ ಸರಕಾರಕ್ಕೆ ವೈಜ್ಞಾನಿಕ ಸಲಹೆಗಳನ್ನು ನೀಡುವ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಓಮಿಕ್ರಾನ್ ಹೆಸರು ಬಂದಿದ್ದು ಹೇಗೆ ?
ವಿಶ್ವ ಆರೋಗ್ಯ ಸಂಸ್ಥೆ ಈತನಕ ಕೋವಿಡ್ ರೂಪಾಂತರಿ ತಳಿಗಳಿಗೆ ಗ್ರೀಕ್ ಆಲ್ಫಾಬೆಟ್ ಪ್ರಕಾರ ಹೆಸರುಗಳನ್ನು ನೀಡಿತ್ತು. ಡೆಲ್ಟಾ ಅನ್ನುವುದು ಕೂಡ ಅದೇ ರೂಪದ್ದಾಗಿದ್ದು ನಾಲ್ಕನೇ ಅಕ್ಷರವಾಗಿತ್ತು. ಇದೀಗ ಗ್ರೀಕ್ ಆಲ್ಫಾಬೆಟ್ ನಲ್ಲಿ 15ನೇ ಅಕ್ಷರವಾಗಿರುವ ಆಮೆಗಾ ಎನ್ನುವುದನ್ನು ಪರಿವರ್ತಿಸಿ ಆಮಿಕ್ರಾನ್ ಎಂಬ ಹೊಸ ಹೆಸರನ್ನು ಇಟ್ಟಿದೆ. ಇದು ಯಾಕೆ ಹೀಗೆ ಅನ್ನುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯೂ ನಡೆದಿದೆ. ಟೆಲಿಗ್ರಾಫ್ ಪತ್ರಿಕೆ ನ್ಯೂ ಮತ್ತು ಕ್ಸಿ ಎನ್ನುವ ಗ್ರೀಕ್ ಪದಗಳನ್ನು ತಪ್ಪಿಸಲು ಡಬ್ಲ್ಯುಎಚ್ಓ ದೊಡ್ಡ ಜಂಪ್ ಮಾಡಿದೆ ಎಂದು ಕುಹಕ ಮಾಡಿದೆ. ನ್ಯೂ (ಹೊಸತು) ಮತ್ತು ಕ್ಸಿ (ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೆಸರು) ಪ್ರಾದೇಶಿಕ ಭಾವನೆಯನ್ನು ಸೂಚಿಸುತ್ತೆ ಅನ್ನುವ ಕಾರಣಕ್ಕೆ ಇವೆರಡನ್ನು ಬಿಟ್ಟು ಆನಂತರದನ್ನು ಆಯ್ಕೆ ಮಾಡಿದೆ ಎಂದು ಹೇಳಿದೆ. ನ್ಯೂ ಮತ್ತು ಕ್ಸಿ ಎಂಬ ಎರಡೂ ಪದಗಳು ಗ್ರೀಕ್ ಆಲ್ಫಾ ಬೆಟ್ ನಲ್ಲಿದೆ.
ಇದೀಗ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ಕೋವಿಡ್ ವೈರಸ್ ಗೆ ವಿಜ್ಞಾನಿಗಳು B.1.1.529 ಎಂದು ಹೆಸರಿಟ್ಟಿದ್ದರು. ಹೊಸ ವೈರಸ್ ಪತ್ತೆಯಾದ ಎರಡೇ ದಿನದಲ್ಲಿ ಹಾಂಗ್ ಕಾಂಗ್, ಬೋಟ್ಸ್ವಾನಾದಲ್ಲಿಯೂ ಹೊಸ ಪ್ರಕರಣ ಕಂಡುಬಂದಿತ್ತು. ಇದೀಗ ಹೊಸ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ಎಂದು ಹೆಸರಿಸಿದೆ. ಈ ಹೊಸ ಸೋಂಕಿನ ಮೊದಲ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ನ.24ರಂದು ಪತ್ತೆಯಾಗಿತ್ತು.
Karnataka Health Minister Dr K Sudhakar has called for all persons who have not yet taken the second dose of the Covid-19 vaccine to do so on account of the emergence of a fresh strain of the virus and reports of Covid cases in three educational institutions in the state this week.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
09-10-25 12:12 pm
HK News Desk
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
09-10-25 11:58 am
Mangalore Correspondent
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am