ಬ್ರೇಕಿಂಗ್ ನ್ಯೂಸ್
25-11-21 10:17 am HK news Desk ದೇಶ - ವಿದೇಶ
ಜೈಪುರ, ನ 25: ರಾಜಸ್ಥಾನ ಸಚಿವ ಸಂಪುಟದಲ್ಲಿ ಇತ್ತೀಚೆಗಷ್ಟೇ ಸ್ಥಾನ ಪಡೆದ ರಾಜೇಂದ್ರ ಸಿಂಗ್ ಗೌಡ ಅವರು ನೀಡಿರುವ ಹೇಳಿಕೆಯೊಂದು ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಜೇಂದ್ರ ಸಿಂಗ್ ಗೌಡ, ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಅವರ ಕೆನ್ನೆಯಷ್ಟು ಸೊಗಸಾದ ರಸ್ತೆಗಳನ್ನು ಮಾಡಿಸುತ್ತೇನೆಂದು ಭರವಸೆ ನೀಡಿದ್ದಾರೆ.
ರಾಜಸ್ಥಾನದ ಜಂಜುನು ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಸಚಿವರು ಈ ಭರವಸೆಯನ್ನು ನೀಡಿದ್ದಾರೆ. ಗೌಡ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯಲ್ಲಿ ಟಿಕೆಟ್ ಪಡೆದು ಜಯ ಸಾಧಿಸಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.

ಇನ್ನು ರಾಜಕಾರಣಿಗಳ ರಸ್ತೆಗಳನ್ನು ಸೆಲೆಬ್ರಿಟಿಗಳ ಕೆನ್ನಗೆ ಹೋಲಿಸಿ ಮಾತನಾಡುವುದು ಇದೇ ಮೊದಲೇನಲ್ಲ. 2015ರಲ್ಲಿ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಮಾಮಾಲಿನಿ ಕೆನ್ನೆಯಂತ ನಯವಾದ ರಸ್ತೆಗಳನ್ನು ಮಾಡಿಸುವ ಭರವಸೆ ನೀಡಿದ್ದರು.
ಮಧ್ಯಪ್ರದೇಶದ ಕಾನೂನು ಸಚಿವ ಪಿ.ಸಿ. ಶರ್ಮಾ ಕೂಡ 2019ರಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದರು. ರಾಜ್ಯದ ಗುಂಡಿಯುಕ್ತ ರಸ್ತೆಗಳು ಕನಸಿನ ಹುಡುಗಿಯ ಕೆನ್ನೆಯ ರೀತಿ ಬದಲಾಗಲಿದೆ ಎಂದು ಭರವಸೆ ನೀಡಿದ್ದರು. 2013ರಲ್ಲಿ ಉತ್ತರ ಪ್ರದೇಶದ ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಸಚಿವ ರಾಜಾರಾಮ್ ಪಾಂಡೆ ಮಾತನಾಡಿ, ಪ್ರತಾಪಗಢ ಜಿಲ್ಲೆಯಲ್ಲಿರುವ ರಸ್ತೆಗಳನ್ನು ಹೇಮಾಮಾಲಿನಿ ಮತ್ತು ಮಾಧುರಿ ದೀಕ್ಷಿತ್ ಗಲ್ಲದಂತೆ ಸೊಗಸಾಗಿ ಮಾಡಲಾಗುವುದು ಎಂದಿದ್ದರು. ಆದರೆ, ರಾಜಕಾರಣಿಗಳು ನೀಡಿದ ಭರವಸೆ ಮಾತ್ರ ಇಂದಿಗೂ ಭರವಸೆ ಆಗಿಯೇ ಉಳಿದಿವೆ.
New Rajasthan minister Rajendra Gudha visited his constituency for the first time after becoming a Cabinet minister in the latest expansion of Ashok Gehlot Cabinet. Confronted by the public over the issue of bad roads, the new minister promised roads as smooth as the cheeks of Bollywood actor Katrina Kaif. People listening to the minister clap and burst into laughter. Reports said the minister was addressing officers and first referred to Hema Malini, BJP MP.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am