ಬ್ರೇಕಿಂಗ್ ನ್ಯೂಸ್
17-11-21 01:04 pm Mangaluru Correspondent ದೇಶ - ವಿದೇಶ
ನವದೆಹಲಿ, ನ.17: ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್ ಸ್ಥಾಪಕ ಮತ್ತು ವಿವಾದಾತ್ಮಕ ಭಾಷಣಕಾರ ಝಾಕಿರ್ ನಾಯ್ಕ್ ಮೇಲಿನ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯ ಮತ್ತೆ 5 ವರ್ಷಗಳಿಗೆ ವಿಸ್ತರಿಸಿದೆ.
ಈ ಬಗ್ಗೆ ಗೃಹ ಸಚಿವಾಲಯದಿಂದ ಆದೇಶ ಹೊರಡಿಸಲಾಗಿದ್ದು, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹೆಸರಲ್ಲಿ ದೇಶದ ಆಂತರಿಕ ಭದ್ರತೆಗೆ ಸವಾಲಾಗಬಲ್ಲ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಅಲ್ಲದೆ, ದೇಶದ ಶಾಂತಿ, ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ತರುವ ಮತ್ತು ಜಾತ್ಯತೀತ ನೆಲೆಗಳಿಗೆ ಅಪಾಯ ಸಾಧ್ಯತೆ ಇದೆ ಅನ್ನುವ ನಿಟ್ಟಿನಲ್ಲಿ ನಿಷೇಧ ಮುಂದುವರಿಸಿದ್ದಾಗಿ ಹೇಳಿದೆ. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಉಲ್ಲೇಖಿಸಿ 2016ರಲ್ಲಿ ಹೊರಡಿಸಿದ್ದ ಆದೇಶವನ್ನು ಗೃಹ ಇಲಾಖೆ ಮತ್ತೆ ಉಲ್ಲೇಖಿಸಿದೆ.
ದೇಶದ್ರೋಹದ ಚಟುವಟಿಕೆಯಡಿ ಇಸ್ಲಾಮಿಕ್ ರೀಸರ್ಚ್ ಫೌಂಡೇಶನನ್ನು ಮೊದಲ ಬಾರಿಗೆ 2016ರ ನವೆಂಬರ್ 17 ರಂದು ಕೇಂದ್ರ ಸರಕಾರ ಐದು ವರ್ಷಗಳ ಅವಧಿಗೆ ನಿಷೇಧ ವಿಧಿಸಿತ್ತು. ಇದೇ ನವೆಂಬರ್ 17ಕ್ಕೆ ನಿಷೇಧ ಅವಧಿ ಮುಗಿಯುವುದರಿಂದ ಅದಕ್ಕೂ ಮೊದಲೇ ನ.15ರಂದು ಮತ್ತೆ ಐದು ವರ್ಷಕ್ಕೆ ಸಂಘಟನೆಯನ್ನು ನಿಷೇಧಿಸಿ ಆದೇಶ ಮಾಡಿದೆ.
ಭಾರತೀಯ ಮೂಲದ ಡಾ.ಝಾಕೀರ್ ನಾಯ್ಕ್ ವಿರುದ್ಧ ಪ್ರಚೋದನಾತ್ಮಕ ಭಾಷಣಗಳಿಂದಾಗಿ 2016ರಲ್ಲಿ ವಿವಿಧ ಕಡೆ ಪ್ರಕರಣ ದಾಖಲಾಗಿತ್ತು. ಸಮುದಾಯಳ ನಡುವೆ ಕಿಚ್ಚು ಹಚ್ಚುವ ಭಾಷಣ ಮತ್ತು ದೇಶವಿರೋಧಿ ಕೃತ್ಯದ ಚಟುವಟಿಕೆ ಹಿನ್ನೆಲೆಯಲ್ಲಿ ಕೇಸು ದಾಖಲಾದ ಬೆನ್ನಲ್ಲೇ ಝಾಕಿರ್ ನಾಯ್ಕ್ ದೇಶ ಬಿಟ್ಟು ಹೋಗಿದ್ದು ಮಲೇಶ್ಯಾದಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತಿದೆ.
The Centre on Monday extended for five years the ban imposed on the Islamic Research Foundation (IRF), headed by India-born preacher Zakir Naik, currently based in Malaysia. The Islamic Research Foundation was first declared an unlawful organisation under the Unlawful Activities (Prevention) Act, 1967 (37 of 1967) by the central government on November 17, 2016.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
07-10-26 11:12 am
HK News Staffer
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm