ಬ್ರೇಕಿಂಗ್ ನ್ಯೂಸ್
26-10-21 05:28 pm Headline Karnataka News Network ದೇಶ - ವಿದೇಶ
ಬೀಜಿಂಗ್, ಅ.26: ಚೀನಾದಲ್ಲಿ ಮತ್ತೆ ಕೊರೊನಾ ಸೋಂಕಿನ ಆತಂಕ ಆವರಿಸಿದೆ. 40 ಲಕ್ಷ ಜನಸಂಖ್ಯೆ ಹೊಂದಿರುವ ಲ್ಯಾನ್ ಝು ಎನ್ನುವ ನಗರದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಅತ್ಯಂತ ಅಗತ್ಯವನ್ನು ಹೊರತುಪಡಿಸಿ ಜನರು ಮನೆಯಿಂದ ಹೊರಬಾರದಂತೆ ಕಟ್ಟಪ್ಪಣೆ ವಿಧಿಸಿದೆ.
ಕಳೆದ ಬಾರಿ 2019ರಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಆವರಿಸಿದಾಗ, ಬೀಜಿಂಗ್ ಸೇರಿದಂತೆ ಚೀನಾದ ನಗರಗಳಲ್ಲಿ ಲಾಕ್ಡೌನ್ ಹೇರಲಾಗಿತ್ತು. ಒಂದು ವರ್ಷದ ನಂತರ ಸೋಂಕು ಕಡಿಮೆಯಾದ ಬಳಿಕ ಜನಜೀವನ ಸಹಜ ಸ್ಥಿತಿಗೆ ಬಂದಿತ್ತು. ಆದರೆ, ಇದೀಗ ಕೆಲವು ನಗರಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮತ್ತೆ ಲಾಕ್ಡೌನ್ ಹೇರಲು ಮುಂದಾಗಿದೆ. ಜಗತ್ತಿನ ಇತರ ರಾಷ್ಟ್ರಗಳು ಕೋವಿಡ್ ಸೋಂಕಿನ ಮಧ್ಯೆಯೇ ಜೀವಿಸಲು ಮುಂದಾಗಿದ್ದರೆ, ಚೀನಾ ತನ್ನಲ್ಲಿ ಲಾಕ್ಡೌನ್ ಹೇರಿದ್ದು ಹೊಸ ಚಿಂತೆಗೆ ಕಾರಣವಾಗಿದೆ.

ಮಂಗಳವಾರ ಚೀನಾದಲ್ಲಿ 29 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ ಆರು ಕೇಸ್ ಚೀನಾದ ಉತ್ತರ ಭಾಗದ ಗ್ಯಾನ್ಸು ಪ್ರಾಂತದ ಲ್ಯಾನ್ ಝು ನಗರ ಒಂದರಲ್ಲೇ ಪತ್ತೆಯಾಗಿದೆ. ಹೀಗಾಗಿ ಆ ನಗರವನ್ನು ಪೂರ್ತಿಯಾಗಿ ಬಂದ್ ಮಾಡಲು ಸರಕಾರ ಆದೇಶ ಮಾಡಿದೆ. ಚೀನಾದಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಕಂಡುಬಂದಿದ್ದು ಅ.17ರ ನಂತರ 198 ಪ್ರಕರಣಗಳು ಪತ್ತೆಯಾಗಿವೆ. ಲ್ಯಾನ್ ಝು ನಗರದಲ್ಲಿ 39 ಕೇಸು ಕಂಡುಬಂದಿದೆ.

ಲ್ಯಾನ್ ಝು ನಗರದಲ್ಲಿ ಬಸ್, ಟ್ಯಾಕ್ಸಿ ಓಡಾಟವನ್ನು ಸ್ಥಗಿತಗೊಳಿಸಲಾಗಿದ್ದು ಬೀಜಿಂಗ್ ಸೇರಿದಂತೆ ಇನ್ನಿತರ ನಗರಗಳಿಗೆ ಸಂಚರಿಸುವ ರೈಲುಗಳನ್ನೂ ನಿಲ್ಲಿಸಲಾಗಿದೆ. ಅಗತ್ಯ ವಸ್ತುಗಳು ಮತ್ತು ಮೆಡಿಕಲ್ ಅಂಗಡಿಯನ್ನೂ ಸೀಮಿತಗೊಳಿಸಿದ್ದು, ಜನರು ಅಗತ್ಯ ಕಾರ್ಯಗಳಿಗೆ ಮಾತ್ರ ಹೊರಬರುವಂತೆ ಸೂಚನೆ ನೀಡಲಾಗಿದೆ. ಲ್ಯಾನ್ ಝು ನಗರದಿಂದ ಸಂಪರ್ಕಿಸುವ ವಿಮಾನಗಳನ್ನೂ ಸ್ಥಗಿತಗೊಳಿಸಲಾಗಿದೆ. ಆರೋಗ್ಯ ಇಲಾಖೆ ಸೋಂಕು ಹೆಚ್ಚುವ ಬಗ್ಗೆ ಸೂಚನೆ ನೀಡಿದ್ದು ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ.
China placed a city of four million people under lockdown on Tuesday, ordering them not to leave home except in emergencies, in a bid to eradicate a Covid cluster of just a few dozen confirmed cases.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
06-10-26 11:04 pm
HK News Desk
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
07-10-26 11:12 am
HK News Staffer
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm