ಬ್ರೇಕಿಂಗ್ ನ್ಯೂಸ್
08-10-21 12:17 pm Mangalore Reporter ದೇಶ - ವಿದೇಶ
ವಿಜಯಪುರ, ಅ.8 : ಗುಮ್ಮಟ ನಗರಿ ವಿಜಯಪುರದಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ. ನಿನ್ನೆ ಮಧ್ಯರಾತ್ರಿ ವಿಜಯಪುರ ನಗರದಲ್ಲಿ ಭೂಕಂಪನದ ಅನುಭವ ಆಗಿದ್ದು ಜನತೆ ಬೆಚ್ಚಿಬಿದ್ದಿದ್ದಾರೆ.
ವಿಜಯಪುರ ನಗರದ ರೇಲ್ವೆ ಸ್ಟೇಷನ್ ಏರಿಯಾ, ಅಲ್ಲಾಪುರ ಓಣಿ, ಅಲ್ಲಾಪುರ ತಾಂಡಾ, ಶಿವಗಿರಿ ಬಡಾವಣೆ, ಗಣೇಶನಗರ, ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವೆಡೆ ತಡರಾತ್ರಿ 12.20ರ ವೇಳೆಗೆ ಭೂಮಿ ಕಂಪಿಸಿದೆ.
ಪದೆ ಪದೆ ಆಗುತ್ತಿರುವ ಭೂಕಂಪನದಿಂದಾಗಿ ಈ ಭಾಗದ ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಆರು ಬಾರಿ ಭೂಮಿ ಕಂಪಿಸಿತ್ತು.

ಸೆಪ್ಟೆಂಬರ್ 4ರ ಮಧ್ಯರಾತ್ರಿ ಇದೇ ರೀತಿಯ ಅನುಭವ ಆಗಿತ್ತು. ಸೆಪ್ಟೆಂಬರ್ 11ರಂದು ಮತ್ತೆ ಅಂತಹುದೇ ಘಟನೆ ನಡೆದಿತ್ತು. ಈ ವೇಳೆ ರಿಕ್ಟರ್ ಮಾಪಕದಲ್ಲಿ ಭೂಕಂಪನ 3.9ನಷ್ಟು ತೀವ್ರತೆ ದಾಖಲಾಗಿತ್ತು. ಬಳಿಕ ಅಕ್ಟೋಬರ್ 1 ಹಾಗೂ 2 ರಂದು ಮತ್ತೆ ಅಂತಹದ್ದೇ ರೀತಿಯ ಭೂಕಂಪ ಸಂಭವಿಸಿತ್ತು. ಈ ವೇಳೆ 2.5 ನಷ್ಟು ಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು.
ಉತ್ತರ ಕರ್ನಾಟಕ ವಿಜಯಪುರ, ಗುಲ್ಬರ್ಗ, ಬೀದರ್ ಭಾಗದಲ್ಲಿ ಇದೇ ರೀತಿಯ ಅನುಭವ ಕಳೆದ ಹಲವು ತಿಂಗಳಿಂದ ನಡೆಯುತ್ತಿದ್ದು ಸರಕಾರದ ಇದರ ಬಗ್ಗೆ ಅಧ್ಯಯನಕ್ಕೆ ತಂಡವನ್ನು ನೇಮಕ ಮಾಡಿದೆ. ಈ ರೀತಿಯ ಕಂಪನ ಯಾಕಾಗುತ್ತಿದೆ, ಇದರ ಪರಿಣಾಮವೇನು, ದೊಡ್ಡ ಅನಾಹುತದ ಮುನ್ಸೂಚನೆಯೇ ಎಂಬ ಬಗ್ಗೆ ಜನರಲ್ಲಿ ಭಾರೀ ಅತಂಕವಿದೆ.
the sixth earthquake observed in Karnataka’s VIjayapura district in a month’s time.The land area of Vijayapur City Railway Station, Allapur oni, Allapura Tanda, Ganeshanagar and Golagummata area were hit by a landslide at 12.20 pm.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
06-10-26 11:04 pm
HK News Desk
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
07-10-26 11:12 am
HK News Staffer
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm