ಬ್ರೇಕಿಂಗ್ ನ್ಯೂಸ್
06-10-21 06:31 pm Mangaluru Correspondent ದೇಶ - ವಿದೇಶ
ನವದೆಹಲಿ, ಅ.6: 15 ವರ್ಷಕ್ಕಿಂತ ಹೆಚ್ಚು ವಯಸ್ಸಾದ ವಾಹನಗಳನ್ನು ರಸ್ತೆಗಿಳಿಸಿದರೆ, ಎಂಟು ಪಟ್ಟು ದಂಡ ವಿಧಿಸುವ ಬಗ್ಗೆ ಕೇಂದ್ರ ಸರಕಾರ ಹೊಸ ಕಾನೂನು ತರುತ್ತಿದೆ. ಮುಂದಿನ ವರ್ಷ ಎಪ್ರಿಲ್ ತಿಂಗಳಿಂದಲೇ ಹೊಸ ಕಾನೂನು ಬರಲಿದ್ದು, ಈ ಬಗ್ಗೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದಿಂದ ಎಲ್ಲ ರಾಜ್ಯಗಳಿಗೂ ನೋಟೀಫಿಕೇಶನ್ ಹೊರಡಿಸಲಾಗಿದೆ.
ಹೊಸ ಕಾನೂನು ಪ್ರಕಾರ, 15 ವರ್ಷಗಳ ಹಿಂದಿನ ಕಾರನ್ನು ರಿನೀವಲ್ ಮಾಡಿಸಲು ನಿಗದಿತ ಶುಲ್ಕದ ಎಂಟು ಪಟ್ಟು ಮೊತ್ತವನ್ನು ಪ್ರಾಧಿಕಾರಕ್ಕೆ ಕೊಡಬೇಕಾಗುತ್ತದೆ. ಬಸ್, ಲಾರಿ ಇನ್ನಿತರ ಘನ ವಾಹನಗಳ ಮಾಲೀಕರು ಕೂಡ ಇದೇ ಮಾದರಿಯಲ್ಲಿ ತಮ್ಮ ವಾಹನಗಳ ಲೈಸನ್ಸ್ ರಿನೀವಲ್ ಮಾಡಿಸಲು ಎಂಟು ಪಟ್ಟು ದಂಡ ತೆರಬೇಕಾಗುತ್ತದೆ.
ಕಾರಿನ ಲೈಸನ್ಸ್ ನವೀಕರಣ ಶುಲ್ಕ ಈಗ 600 ರೂ. ಇದ್ದರೆ, ಅದು ಇನ್ನು 5 ಸಾವಿರ ರೂ. ಆಗಲಿದೆ. ದ್ವಿಚಕ್ರ ವಾಹನಗಳ ಪರವಾನಗಿ ನವೀಕರಣಕ್ಕೆ 300 ರೂ. ಇದ್ದುದು ಒಂದು ಸಾವಿರಕ್ಕೆ ಏರಿಕೆಯಾಗಲಿದೆ. ಬಸ್, ಲಾರಿ ಇನ್ನಿತರ ಘನ ವಾಹನಗಳ ಫಿಟ್ ನೆಸ್ ಸರ್ಟಿಫಿಕೇಟ್ ಪಡೆಯಲು 12,500 ರೂ. ತೆರಬೇಕು. ಈಗ ಘನ ವಾಹನಗಳಿಗೆ ವಾರ್ಷಿಕ ಫಿಟ್ನೆಸ್ ಶುಲ್ಕ 1500 ಇದೆ. ಕ್ಯಾಬ್ ಇನ್ನಿತರ ಬಾಡಿಗೆ ವಾಹನಗಳ ನವೀಕರಣ ಶುಲ್ಕವೂ ಸದ್ಯ 1000 ಇರುವುದು ಮುಂದಕ್ಕೆ ಏಳು ಪಟ್ಟು ಹೆಚ್ಚಲಿದೆ.
ವಿದೇಶಿ ಕಾರುಗಳ ಲೈಸನ್ಸ್ ನವೀಕರಣ ಶುಲ್ಕ ಈಗ 5000 ಇರುವುದನ್ನು ಎಂಟು ಪಟ್ಟು ಹೆಚ್ಚಿಸಲಾಗಿದ್ದು, 40 ಸಾವಿರಕ್ಕೆ ಏರಿಕೆಯಾಗಲಿದೆ. ಹಳೆಯ ವಾಹನಗಳ ಬಳಕೆ ತಗ್ಗಿಸಲು ಕೇಂದ್ರ ಸರಕಾರ ಹೊಸ ಕಾನೂನು ತಂದಿದ್ದು, ಆಮೂಲಕ ಪರಿಸರ ಮಾಲಿನ್ಯ ತಗ್ಗಲಿದೆ ಎನ್ನುವ ಲೆಕ್ಕಾಚಾರ ಇಟ್ಟುಕೊಂಡಿದೆ. ಇದಲ್ಲದೆ, ಹಳೆ ವಾಹನಗಳ ಲೈಸನ್ಸ್ ನವೀಕರಣವನ್ನು ವಿಳಂಬಗೊಳಿಸಿದಲ್ಲಿ ತಿಂಗಳಿಗೆ ಹೆಚ್ಚುವರಿಯಾಗಿ 300 ರೂ.ನಂತೆ ಮತ್ತೊಂದು ಹೊರೆಯೂ ಬೀಳಲಿದೆ.
ಆದರೆ, ಸರಕಾರದ ಹೊಸ ಮಾರ್ಗಸೂಚಿ ರಾಜಧಾನಿ ದೆಹಲಿಯ ಜನರಿಗೆ ಯಾವುದೇ ಪರಿಣಾಮ ಬೀರಲ್ಲ. ಅಲ್ಲಿ ಈಗಾಗ್ಲೇ ಹತ್ತು ವರ್ಷ ಆಗಿರುವ ಡೀಸೆಲ್ ವಾಹನಗಳು ಮತ್ತು 15 ವರ್ಷ ಕಳೆದಿರುವ ಪೆಟ್ರೋಲ್ ವಾಹನಗಳನ್ನು ನಿಷೇಧ ಮಾಡಲಾಗಿದೆ.
Starting from April next year, vehicle owners will have to shell out Rs 5,000 for renewal of registration of the cars older than 15 years, which is eight times more than what they currently pay. The road transport and highways ministry has issued a notification for the renewal of the certificate of registration of old vehicles and this new rule is part of the government's overall plan to roll out the National Automobile Scrappage Policy.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 02:31 pm
HK News Staffer
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm