ಬ್ರೇಕಿಂಗ್ ನ್ಯೂಸ್
14-09-21 05:15 pm Headline Karnataka News Network ದೇಶ - ವಿದೇಶ
ಮುಂಬೈ, ಸೆ.14: ಮಹಿಳೆಯರ ಮೇಲಿನ ಕಿರುಕುಳ, ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ತುರ್ತಾಗಿ ನಿರ್ವಹಿಸಲು ಮುಂಬೈ ಮಹಾನಗರದಲ್ಲಿ ನಿರ್ಭಯಾ ಸ್ಕ್ವಾಡ್ ಹೆಸರಲ್ಲಿ ಪ್ರತ್ಯೇಕ ತಂಡವೊಂದನ್ನು ಅಸ್ತಿತ್ವಕ್ಕೆ ತರಲಾಗಿದೆ. ಕಳೆದ ವಾರ ಕಾಕಿನಾಡದಲ್ಲಿ ಯುವತಿಯನ್ನು ರೇಪ್ ಮಾಡಿ, ಕೊಂದು ಹಾಕಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಮಹಿಳಾ ಅಧಿಕಾರಿಗಳೇ ಹೆಚ್ಚಿರುವ ಹೊಸ ಪೊಲೀಸ್ ತಂಡವನ್ನು ಮಹಾರಾಷ್ಟ್ರ ಸರಕಾರ ಅಸ್ತಿತ್ವಕ್ಕೆ ತಂದಿದೆ.
ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಶಾಲೆ, ಕಾಲೇಜು, ಉದ್ಯೋಗ ಎಂದು ಬೇರೆ ಬೇರೆ ಕಾರಣಕ್ಕೆ ಸಮಾಜದಲ್ಲಿ ಹೊರಗೆ ಬರುತ್ತಾರೆ. ಇವರಿಗೆ ಮೆಸೇಜ್, ಕರೆಗಳ ಮೂಲಕ ಕಿರುಕುಳ ಕೊಡುವುದು ಕೇಳಿಬರುತ್ತಿದೆ. ಇಂಥ ಪ್ರಕರಣಗಳನ್ನು ಹ್ಯಾಂಡಲ್ ಮಾಡುವ ನಿಟ್ಟಿನಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯ ಗೌರವ ರಕ್ಷಿಸುವ ಸಲುವಾಗಿ ಹೊಸ ತಂಡವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಮುಂಬೈ ಪೊಲೀಸ್ ಈ ಕುರಿತು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ನಿರ್ಭಯಾ ಸ್ಕ್ವಾಡ್ ಪ್ರತಿ ಪೊಲೀಸ್ ಠಾಣೆಯಲ್ಲಿ ಇರಬೇಕು. ಪ್ರತಿ ಠಾಣೆಯಲ್ಲಿ ಮಹಿಳೆಯರ ಮೇಲಿನ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣಗಳ ನಿಗಾ ಇರಿಸುವುದಕ್ಕಾಗಿ ಐದು ಪೆಟ್ರೋಲಿಂಗ್ ವಾಹನಗಳನ್ನು ಇರಿಸಲಾಗುತ್ತದೆ. ಅದಕ್ಕೆ ನಿರ್ಭಯಾ ಪಥಕ್ ಎನ್ನುವ ಹೆಸರಿಡಲಾಗುವುದು. ಈ ನಿರ್ಭಯಾ ತಂಡದ ಮೇಲ್ವಿಚಾರಣೆಗಾಗಿ ಎಸಿಪಿ ಅಥವಾ ಇನ್ ಸ್ಪೆಕ್ಟರ್ ದರ್ಜೆಯ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಪ್ರತಿ ತಂಡದಲ್ಲಿ ಪಿಎಸ್ಐ ಅಥವಾ ಎಎಸ್ಐ ದರ್ಜೆಯ ಮಹಿಳಾ ಅಧಿಕಾರಿ ಇರುತ್ತಾರೆ. ಜೊತೆಗೆ ಮತ್ತೊಬ್ಬ ಮಹಿಳಾ ಪೇದೆ, ಪುರುಷ ಪೇದೆ ಮತ್ತು ಚಾಲಕ ಇರುತ್ತಾರೆ. ಇದಕ್ಕಾಗಿ ಈ ತಂಡಕ್ಕೆ ನೇಮಕ ಮಾಡೋದಕ್ಕೂ ಮುನ್ನ ಎರಡು ದಿನಗಳ ಪ್ರತ್ಯೇಕ ತರಬೇತಿ ಇರಲಿದೆ.
ಇದಲ್ಲದೆ, ಮಹಿಳೆಯರ ಮೇಲಿನ ಕಿರುಕುಳ ತಪ್ಪಿಸಲು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನೆಗ್ರಾಳೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸಿಸಿಟಿವಿ ಇಲ್ಲದ ಕಡೆಗಳನ್ನು ಗುರುತಿಸಿ, ಅಲ್ಲಿ ಸಿಸಿಟಿವಿ ಅಳವಡಿಸುವುದು, ರಾತ್ರಿ ಬೆಳಕಿಲ್ಲದೆ ಕತ್ತಲು ಕಾಣಿಸುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಗಸ್ತು ಹೆಚ್ಚಿಸುವುದಕ್ಕೆ ಆಯಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
A few days after the death of a woman who was raped and savagely assaulted with a rod in Mumbai’s Sakinaka area last week, the Mumbai Police has set up 'Nirbhaya Squad' to address cases of crimes against women in the city.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 08:57 pm
HK News Desk
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
08-10-25 06:07 pm
Mangalore Correspondent
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am