ಬ್ರೇಕಿಂಗ್ ನ್ಯೂಸ್
03-09-21 02:56 pm Headline Karnataka News Network ದೇಶ - ವಿದೇಶ
ತಿರುವನಂತಪುರ, ಸೆ.3: ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಾಥೂರ್ ಗ್ರಾಮ ಪಂಚಾಯ್ತಿಗೆ ಹೋಗುವ ಗ್ರಾಮಸ್ತರು ಅಥವಾ ಫಲಾನುಭವಿಗಳು ಪಂಚಾಯ್ತಿಯ ಅಧಿಕಾರಿಗಳು , ಜನಪ್ರತಿನಿಧಿಗಳನ್ನು ಸರ್, ಮೇಡಂ ಎಂದು ಕರೆಯುವುದನ್ನು ನಿಷೇಧಿಸಲಾಗಿದೆ. ಇನ್ನು ಮುಂದೆ ಹೆಸರು ಅಥವಾ ಪದನಾಮದಿಂದ(ಹುದ್ದೆ) ಕರೆಯಬೇಕೆಂಬ ನಿಯಮವನ್ನು ಜಾರಿಗೆ ತರುವ ನಿರ್ಣಯವನ್ನು ಕೈಗೊಳ್ಳಲಾಗಿದೆ.
ವಸಾಹತುಶಾಹಿ ಕಾಲದಲ್ಲಿ ಗೌರವವದ ಹೆಸರಲ್ಲಿ ಬಳಸುತ್ತಿದ್ದ ಈ ಪದಗಳ ಬಳಕೆಯನ್ನು ನಿಷೇಧಿಸಿ ಜನಸಾಮಾನ್ಯರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಪರಸ್ಪರ ಪ್ರೀತಿ,ವಿಶ್ವಾಸದ ಬಾಂಧವ್ಯ ವೃದ್ಧಿಸುವುದಕ್ಕಾಗಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಇಂಥ ಪದಗಳ ಬಳಕೆ ನಿಷೇಧಿಸಿದ ದೇಶದ ಮೊದಲ ಗ್ರಾಮ ಪಂಚಾಯ್ತಿ ಎಂದು ಮಾಥೂರ್ ಗ್ರಾಮ ಪಂಚಾಯ್ತಿ ಇತಿಹಾಸದ ಪುಟ ಸೇರಿದೆ. ಕಾಂಗ್ರೆಸ್ ನೇತೃತ್ವದ ಈ ಗ್ರಾಮ ಪಂಚಾಯ್ತಿಯಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಸದಸ್ಯರು ಒಕ್ಕೊರಲಿನಿಂದ ಈ ಐತಿಹಾಸಿಕ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ .

ಸರ್, ಮೇಡಂ ಎಂಬ ಪದಗಳ ಬಳಕೆಯಿಂದಾಗಿ ಪಂಚಾಯ್ತಿಗೆ ಸಮಸ್ಯೆಗಳನ್ನು ಹೊತ್ತು ತರುವ ಜನರು ಮತ್ತು ಜನಪ್ರತಿನಿಧಿಗಳು,ಅಧಿಕಾರಿಗಳ ನಡುವೆ ಸಣ್ಣದೊಂದು ಅಂತರ ಸೃಷ್ಟಿಯಾಗುತ್ತಿತ್ತು. ಹಾಗಾಗಿ ಇಂಥದ್ದೊಂದು ನಿಯಮ ಕೈಗೊಂಡಿದ್ದೇವೆ ‘ ಎಂದು ಮಾಥೂರ್ ಪಂಚಾಯತ್ ಉಪಾಧ್ಯಕ್ಷ ಪಿ ಆರ್ ಪ್ರಸಾದ್ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಶ್ರೇಷ್ಠ ಎಂಬುದನ್ನು ತಿಳಿಸುವುದಕ್ಕಾಗಿ ಈಗಿರುವ ಅಪೇಕ್ಷಾ ನಮೂನೆ (ಅರ್ಜಿ ನಮೂನೆ) ಎಂಬ ಪದವನ್ನು ಪದಲಿಸಿ ಆ ಜಾಗದಲ್ಲಿ ಅವತಕ್ಷ ಪತ್ರ(ಹಕ್ಕುಗಳ ಪ್ರಮಾಣಪತ್ರ) ಎಂದು ಬದಲಾಯಿಸಲು ಮಾಥೂರ್ ಪಂಚಾಯ್ತಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ‘ಅಪೇಕ್ಷಾ’ ಎಂದರೆ ಮಲಯಾಳಂ ಭಾಷೆಯಲ್ಲಿ ವಿನಂತಿ ಎಂದರ್ಥ.
No Sir and Madam Usage in This Village Gram Panchayat Office in Kerala.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
06-10-26 11:04 pm
HK News Desk
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm