ಬ್ರೇಕಿಂಗ್ ನ್ಯೂಸ್
02-09-21 11:00 am Headline Karnataka News Network ದೇಶ - ವಿದೇಶ
ಶ್ರೀನಗರ, ಸೆ.2: ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ನಾಯಕನಾಗಿ ಗುರುತಿಸಲ್ಪಟ್ಟಿದ್ದ ಸೈಯದ್ ಅಲಿ ಶಾ ಗಿಲಾನಿ ಬುಧವಾರ ರಾತ್ರಿ ಶ್ರೀನಗರದಲ್ಲಿರುವ ಹೈದರ್ ಪೋರಾ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಕೆಲವು ಸಮಯಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಗಿಲಾನಿ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಇರಲಿಲ್ಲ. ಅವರು ಇಬ್ಬರು ಗಂಡು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. 1929ರ ಸೆಪ್ಟಂಬರ್ 29ರಂದು ಜನಿಸಿದ್ದ ಅಲಿ ಶಾ ಗಿಲಾನಿ, ಪ್ರತ್ಯೇಕತವಾದಿ ನಾಯಕರಾಗಿಯೇ ಗುರುತಿಸಿಕೊಂಡಿದ್ದರು. ಕಾಶ್ಮೀರವನ್ನು ಪ್ರತ್ಯೇಕವಾಗಿಸುವುದು ಮತ್ತು ಸ್ವತಂತ್ರ ರಾಷ್ಟ್ರವಾಗಿಸಲು ಪ್ರಯತ್ನ ಪಟ್ಟಿದ್ದರು. ಜಮಾತ್ ಇ ಇಸ್ಲಾಮೀ ಕಾಶ್ಮೀರ್ ಎನ್ನುವ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಗಿಲಾನಿ ಬಳಿಕ ತನ್ನದೇ ಆದ ತೆಹ್ರೀಕ್ ಇ ಹುರಿಯತ್ ಎಂಬ ರಾಜಕೀಯ ಪಕ್ಷ ಹುಟ್ಟುಹಾಕಿದ್ದರು.
ಸರ್ವ ಪಕ್ಷಗಳ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷರಾಗಿದ್ದ ಅಲಿ ಶಾ ಗಿಲಾನಿ, ಕಳೆದ ಬಾರಿ ಜಮ್ಮು ಕಾಶ್ಮೀರದ ವಿಶೇಷ ಪ್ರಾತಿನಿಧ್ಯವನ್ನು ತೆಗೆದುಹಾಕಿದ ಬಳಿಕ 2020 ಜೂನ್ ನಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಸೋಪೋರ್ ವಿಧಾನಸಭಾ ಕ್ಷೇತ್ರದಲ್ಲಿ 1972, 1977 ಮತ್ತು 1987ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಗಿಲಾನಿ ಕಾಶ್ಮೀರದ ವಿಚಾರವನ್ನು ಹಿಂಸೆಗೆ ಆಸ್ಪದ ನೀಡದೇ ಬಗೆಹರಿಸುವಂತೆ ಕರೆ ನೀಡುತ್ತಿದ್ದರು. ಆದರೆ, ಉಗ್ರವಾದಿ ಸಂಘಟನೆಗಳು ಗಿಲಾನಿ ಮಾತಿಗೆ ಸಹಮತ ನೀಡಿರಲಿಲ್ಲ. ಆನಂತರ ಉಗ್ರವಾದಿ ಸಂಘಟನೆಗಳಿಗೆ ಫಂಡಿಂಗ್ ಮತ್ತು ಹಣಕಾಸು ಸಂಗ್ರಹ ಪ್ರಕರಣದಲ್ಲಿ ಗಿಲಾನಿ ಹೆಸರು ಕೇಳಿಬಂದಿತ್ತು.
ashmiri separatist leader Syed Ali Shah Geelani died at his Hyderpora residence in Srinagar at 10.35 pm on Wednesday night. He was 91 years old.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am