ಬ್ರೇಕಿಂಗ್ ನ್ಯೂಸ್
01-09-21 07:21 pm Headline Karnataka News Network ದೇಶ - ವಿದೇಶ
ಹೈದರಾಬಾದ್, ಸೆ.1: ದೇಶದ ಪಶ್ಚಿಮ ಕರಾವಳಿಯಲ್ಲಿ ನೆಲೆಸಿರುವ ರೋಮನ್ ಕ್ಯಾಥೋಲಿಕ್ ಕ್ರಿಸ್ತಿಯನ್ನರ ಮೂಲದ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿವೆ. ವಿಜ್ಞಾನಿಗಳು, ಇತಿಹಾಸಕಾರರು, ಮಾನವ ಶಾಸ್ತ್ರಜ್ಞರು ಈ ಬಗ್ಗೆ ಅಧ್ಯಯನ ನಡೆಸಿದ್ದು, ವಿಭಿನ್ನ ರೀತಿಯ ಅಭಿಪ್ರಾಯಗಳನ್ನು ನೀಡಿದ್ದಾರೆ. ಆದರೆ, ಈಗ ಗೋವಾ, ಕುಮಟಾ ಮತ್ತು ಮಂಗಳೂರು ಭಾಗದಲ್ಲಿ ನೆಲೆಸಿರುವ ರೋಮನ್ ಕ್ಯಾಥೊಲಿಕ್ ಸಮುದಾಯದ ಜನರ ಜೀನ್ಸ್ ಮೇಲೆ ಸಂಶೋಧನೆ ನಡೆಸಲಾಗಿದ್ದು, ಇವರ ಪೈಕಿ ಹೆಚ್ಚಿನವರ ಮೂಲ ಜಿಎಸ್ ಬಿ ಕೊಂಕಣಿಗಳದ್ದು ಎನ್ನುವ ಅಭಿಪ್ರಾಯ ಹೊರಬಂದಿದೆ.
ಈ ಹಿಂದೆ ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದಿದ್ದ ಯಹೂದಿಗಳೇ ಆನಂತರ ಪೋರ್ಜುಗೀಸರ ಆಡಳಿತ ಸಂದರ್ಭದಲ್ಲಿ ರೋಮನ್ ಕ್ಯಾಥೋಲಿಕ್ ಆಗಿದ್ದರು ಎನ್ನುವ ಅಭಿಪ್ರಾಯಗಳಿದ್ದವು. ಆದರೆ, ಈ ಬಗ್ಗೆ ನಿಖರ ವೈಜ್ಞಾನಿಕ ಸಂಶೋಧನೆಗಳು ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ವಂಶಾವಳಿ ಆಧರಿಸಿ ಸಂಶೋಧನೆ ನಡೆದಿದ್ದು, ಗೋವಾ, ಕುಮಟಾ ಮತ್ತು ಮಂಗಳೂರು ಭಾಗದ 110 ಮಂದಿಯ ಜೀನ್ ಸಂಗ್ರಹಿಸಿ ಅಧ್ಯಯನ ನಡೆಸಲಾಗಿತ್ತು.
ಜೆನೆಟಿಕ್ ಸಂಶೋಧನೆಯನ್ನು ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮೋಲೆಕ್ಯುಲಾರ್ ಬಯಾಲಜಿ(ಸಿಎಸ್ಐಆರ್) ಕೇಂದ್ರದ ಪ್ರಮುಖ ವಿಜ್ಞಾನಿ ಮತ್ತು ಸೆಂಟರ್ ಫಾರ್ ಡಿಎನ್ಎ ಫಿಂಗರ್ ಪ್ರಿಂಟಿಂಗ್ ಅಂಡ್ ಡಯಾಗ್ನಾಸ್ಟಿಕ್ಸ್ ವಿಭಾಗದ ಡೈರೆಕ್ಟರ್ ಆಗಿರುವ ಡಾ.ಕುಮಾರಸ್ವಾಮಿ ತಂಗರಾಜು ಹಾಗೂ ಲಕ್ನೋದ ಬೀರಬಲ್ ಸಾಹ್ನಿ ಇನ್ ಸ್ಟಿಟ್ಯೂಟ್ ಆಫ್ ಪಾಲಿಯೋ ಸೈನ್ಸಸ್ ಕೇಂದ್ರದ ಹಿರಿಯ ವಿಜ್ಞಾನಿ ಡಾ.ನೀರಜ್ ರೈ ನೇತೃತ್ವದಲ್ಲಿ ಮಾಡಲಾಗಿತ್ತು. ಇವರು ಮಾಡಿರುವ ಸಂಶೋಧನೆಯನ್ನು ಈ ಹಿಂದೆ ನಡೆಸಲಾಗಿದ್ದ ಭಾರತ ಮತ್ತು ಯುರೇಶಿಯಾ ಜನರ ಜೆನೆಟಿಕ್ ವರದಿಯ ಜೊತೆಗೆ ಹೋಲಿಸಿ ನೋಡಲಾಗಿದೆ. ಅಲ್ಲದೆ, 2500 ವರ್ಷಗಳ ಇತಿಹಾಸದಲ್ಲಿ ಭಾರತದ ಪಶ್ಚಿಮ ಕರಾವಳಿಯ ಜನರ ಬೆಳವಣಿಗೆ ಮತ್ತು ಇತಿಹಾಸದ ಜೊತೆ ಹೋಲಿಸಿ, ವಿಜ್ಞಾನಿಗಳು ನಿರ್ಧಾರಕ್ಕೆ ಬಂದಿದ್ದಾರೆ.
ಇದಲ್ಲದೆ, ಈ ಭಾಗದ ರೋಮನ್ ಕ್ಯಾಥೋಲಿಕ್ ಜನರ ವಂಶಾವಳಿಯು ಭಾರತದ ಹಿಂದಿನ ಬ್ರಾಹ್ಮಣ ಕುಟುಂಬಗಳ ಜೀನ್ಸ್ ಜೊತೆ ತಾಳೆಯಾಗುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಗೋವಾದಲ್ಲಿ ಪೋರ್ಚುಗೀಸರ ದಾಳಿ ಮತ್ತು ಆನಂತರ ಅಲ್ಲಿನ ಜಿಎಸ್ ಬಿ ಜನರನ್ನು ಮತಾಂತರಿಸಿದ ವಿಚಾರದ ಬಗ್ಗೆಯೂ ಸಂಶೋಧನೆ ನಡೆಸಲಾಗಿದೆ. ಈ ವರದಿಯನ್ನು ಹ್ಯೂಮನ್ ಜೆನೆಟಿಕ್ಸ್ ಎನ್ನುವ ಹೆಸರಲ್ಲಿ 2012ರ ಆಗಸ್ಟ್ 23ರಂದು ಪ್ರಕಟಿಸಲಾಗಿದೆ.
ನಮ್ಮ ಸಂಶೋಧನೆಯಲ್ಲಿ ರೋಮನ್ ಕ್ಯಾಥೋಲಿಕ್ ಸಮುದಾಯದ ಹೆಚ್ಚಿನ ಜನರು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ವಂಶಾವಳಿ ಜೊತೆ ಹತ್ತಿರದ ಸಂಬಂಧ ಹೊಂದಿರುವುದನ್ನು ಪತ್ತೆ ಮಾಡಿದ್ದೇವೆ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಡಾ.ಕುಮಾರಸ್ವಾಮಿ ತಂಗರಾಜು ಅಭಿಪ್ರಾಯ ಪಟ್ಟಿದ್ದಾರೆ. 40 ಶೇಕಡಕ್ಕೂ ಹೆಚ್ಚು ಜನರಲ್ಲಿ ಇವರ ಜೀನ್ಸ್ ವೈ ಕ್ರೋಮೋಸೋಮ್ಸ್ ಹೊಂದಿರುವುದನ್ನು ಪತ್ತೆ ಮಾಡಿದ್ದೇವೆ. ಈ ರೀತಿಯ ವಂಶಾವಳಿ ಉತ್ತರ ಭಾರತ, ಮಧ್ಯ ಪ್ರಾಚ್ಯ ಮತ್ತು ಯುರೋಪ್ ಭಾಗಗಳಲ್ಲಿ ಕಂಡುಬರುತ್ತವೆ. ಅದರ ಜೊತೆಗೆ, ಕೊಂಕಣ ಭಾಗದಲ್ಲಿಯೂ ಕಂಡುಬರುತ್ತವೆ ಎಂದು ಹೇಳಿದ್ದಾರೆ.
The Roman Catholics of Goa, Kumta and Mangalore regions are the remnants of very early lineages of the Gaud Saraswat Brahmin community, a multidisciplinary study involving historical, anthropological and genetic information has concluded. The study by researchers from CSIR-Centre for Cellular and Molecular Biology, Hyderabad and DST-Birbal Sahni Institute of Palaeosciences (BSIP), Lucknow has also found consequences of Portuguese inquisition in Goa on the population history of Roman Catholics. They also found some indication of Jewish component
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 03:02 pm
HK News Desk
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm