ಬ್ರೇಕಿಂಗ್ ನ್ಯೂಸ್
30-08-21 05:22 pm Headline Karnataka News Network ದೇಶ - ವಿದೇಶ
ಕಾಬೂಲ್, ಆಗಸ್ಟ್ 30: ಯುವಕ ಮತ್ತು ಯುವತಿಯರು ಜೊತೆಯಾಗಿ ಸಹ ಶಿಕ್ಷಣ ಪಡೆಯುವುದನ್ನು ನಿಷೇಧಿಸಿರುವ ತಾಲಿಬಾನ್, ಈಗ ಪುರುಷರು ಹೆಣ್ಮಕ್ಕಳಿಗೆ ಶಿಕ್ಷಣ ನೀಡುವಂತಿಲ್ಲ ಎಂದು ಹೇಳಿದೆ.
ತಾಲಿಬಾನ್ ಆಡಳಿತ ಪಡೆದುಕೊಂಡ ನಂತರ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಅಲ್ಲಿನ ನಾಯಕರು, ಈಗ ಮತ್ತೊಂದು ರೀತಿಯ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ಹೆಣ್ಮಕ್ಕಳು ಶಿಕ್ಷಣವನ್ನೇ ಪಡೆಯುವಂತಿಲ್ಲ ಎಂದಿದ್ದರು. ಆನಂತರ, ಅಲ್ಲಿನ ಜನರು ಯುವತಿಯರಿಗೆ ನಿರ್ಬಂಧ ವಿಧಿಸುವ ನೀತಿ ಬಗ್ಗೆ ಆಕ್ರೋಶ ಮತ್ತು ವಿರೋಧ ವ್ಯಕ್ತವಾಗುತ್ತಿದ್ದಂತೆ ಎಲ್ಲ ರೀತಿಯ ಶಿಕ್ಷಣಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದು, ಪುರುಷರು ಕಲಿಸುವಂತಿಲ್ಲ ಎಂದು ಮತ್ತೊಂದು ವಾದ ಮುಂದಿಟ್ಟಿದ್ದಾರೆ.
ಈ ಹಿಂದೆ ಶಿಕ್ಷಣ ಸಚಿವನಾಗಿದ್ದ ಶೇಖ್ ಅಬ್ದುಲ್ ಹಕ್ಕಾನಿಯನ್ನೇ ತಾಲಿಬಾನಿಗಳು ಉನ್ನತ ಶಿಕ್ಷಣ ಸಚಿವನಾಗಿ ಘೋಷಣೆ ಮಾಡಿದ್ದು, ಅಧಿಕಾರ ಸಿಕ್ಕ ಮರುಕ್ಷಣವೇ ಈ ಹೇಳಿಕೆ ನೀಡಿದ್ದಾನೆ. ಅಲ್ಲದೆ, ಇಡೀ ಶಿಕ್ಷಣ ಪದ್ಧತಿ ಷರೀಯತ್ ಕಾನೂನು ಪ್ರಕಾರವೇ ನಡೆಯಲಿದೆ ಎಂದಿದ್ದಾನೆ. ಅಲ್ಲದೆ, ಇಸ್ಲಾಂ ವಿರುದ್ಧ ಇರುವ ಎಲ್ಲ ನೀತಿಗಳನ್ನು ತೆಗೆದು ಹಾಕುವುದಾಗಿ ಹೇಳಿದ್ದಾನೆ.
ಯೂನಿವರ್ಸಿಟಿಗಳಲ್ಲಿ ಸಹ ಶಿಕ್ಷಣ ಪಡೆಯಬಹುದೇ ಎನ್ನುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ, ಹೆಣ್ಮಕ್ಕಳ ಶಿಕ್ಷಣಕ್ಕೆ ಅವಕಾಶ ನೀಡಲು ತಾಲಿಬಾನಿಗಳು ಮುಂದಾಗಿದ್ದಾರೆ.
The Taliban have formally announced a ban on coeducation in Afghanistan, saying men would not be allowed to teach girl students in the country. The announcement comes a day after the group allowed Afghan women to study at university but have said that there would be a ban on mixed classes under their rule.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 05:49 pm
HK News Desk
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
08-10-25 06:07 pm
Mangalore Correspondent
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm