ಬ್ರೇಕಿಂಗ್ ನ್ಯೂಸ್
25-07-21 01:43 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಜುಲೈ 25: ಕೇರಳದಲ್ಲಿನ್ನು ಸರಕಾರಿ ನೌಕರರು ಯಾವುದೇ ಕಾರಣಕ್ಕೂ ವರದಕ್ಷಿಣೆ ಪಡೆಯುವಂತಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಹೊಸತೊಂದು ಆದೇಶ ಮಾಡಿದ್ದು, ಎಲ್ಲ ಸರಕಾರಿ ನೌಕರರು ತಾವು ವರದಕ್ಷಿಣೆ ಪಡೆಯುವುದಿಲ್ಲ ಮತ್ತು ಕೊಡುವುದೂ ಇಲ್ಲ ಎಂದು ಸರಕಾರಕ್ಕೆ ಅಫಿಡವಿಟ್ ನೀಡಬೇಕಾಗಿದೆ.
ಸರಕಾರಿ ಕೆಲಸದಲ್ಲಿರುವ ಯುವಕರು ತಮ್ಮ ಮದುವೆಯಾದ ಒಂದು ತಿಂಗಳ ಒಳಗೆ ತಾನು ಯಾವುದೇ ರೀತಿಯಲ್ಲೂ ವರದಕ್ಷಿಣೆ ಪಡೆದಿಲ್ಲ ಎಂದು ಪತ್ನಿ, ಆಕೆಯ ತಂದೆ ಮತ್ತು ತನ್ನ ತಂದೆಯ ಜೊತೆ ಸೇರಿ ಸಹಿ ಹಾಕಿದ ಪತ್ರವನ್ನು ಸರಕಾರಿ ಕಚೇರಿಯಲ್ಲಿ ದೃಢೀಕರಿಸಿ ನೀಡಬೇಕಾಗಿದೆ. ಈ ಪತ್ರವನ್ನು ಮೇಲಧಿಕಾರಿಗಳ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರವಾನೆ ಮಾಡಬೇಕು. ಅಲ್ಲದೆ, ಮದುವೆಯಾಗಿರುವ ಮಂದಿ ತಮ್ಮ ಮಕ್ಕಳ ವಿವಾಹದ ಸಂದರ್ಭದಲ್ಲಿ ವರದಕ್ಷಿಣೆ ಕೊಡುವುದಿಲ್ಲ ಎಂದೂ ದೃಢೀಕರಿಸಿ ಪತ್ರವನ್ನು ಸಲ್ಲಿಸಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡೈರೆಕ್ಟರ್ ಆಗಿರುವ ಅನುಪಮಾ ಈ ಬಗ್ಗೆ ಎಲ್ಲ ಇಲಾಖೆಗಳಿಗೂ ಸುತ್ತೋಲೆ ಕಳುಹಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಆಯಾ ಇಲಾಖಾವಾರು ಮುಖ್ಯಸ್ಥರು ವರ್ಷದಲ್ಲಿ ಎರಡು ಬಾರಿ ಅಂದರೆ, ಎಪ್ರಿಲ್ ಮತ್ತು ಅಕ್ಟೋಬರ್ ನಲ್ಲಿ ತಮ್ಮ ನೌಕರರ ಬಗ್ಗೆ ಈ ರೀತಿಯ ಪತ್ರಗಳನ್ನು ಜಿಲ್ಲಾ ವರದಕ್ಷಿಣೆ ವಿರೋಧಿ ದಳದ ಅಧಿಕಾರಿಗೆ ಸಲ್ಲಿಸಬೇಕಾಗಿದೆ. ಕೇರಳ ರಾಜ್ಯ ಸರಕಾರ ಇತ್ತೀಚೆಗೆ ಕೇರಳ ವರದಕ್ಷಿಣೆ ನಿಷೇಧ ಕಾಯ್ದೆ – 2021 ಅನ್ನು ಜಾರಿಗೆ ತಂದಿದ್ದು ಇದರ ಪ್ರಕಾರ ಜಿಲ್ಲಾ ಮಟ್ಟದಲ್ಲಿ ವರದಕ್ಷಿಣೆ ವಿರೋಧಿ ದಳ ಅಧಿಕಾರಿಗಳು ಇರಲಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಅದಕ್ಕೆ ಮುಖ್ಯಸ್ಥರಾಗಿರುತ್ತಾರೆ.
ಕಳೆದ ಜೂನ್ ತಿಂಗಳಲ್ಲಿ ವರದಕ್ಷಿಣೆ ಕಿರುಕುಳಕ್ಕೀಡಾಗಿ ಮೂವರು ಯುವತಿಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿತ್ತು. ಬೆನ್ನು ಬೆನ್ನಿಗೆ ನಡೆದ ಈ ರೀತಿಯ ಪ್ರಕರಣಗಳು ರಾಜ್ಯದಲ್ಲಿ ಭಾರೀ ಸಂಚಲ
All male employees in Kerala government service should now submit a declaration if and when they get married stating that they have not taken dowry from the bride’s family. The declaration should be given within a month of the marriage, signed duly by the employee’s wife, father and father-in-law.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 02:35 pm
HK News Staffer
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 02:31 pm
HK News Staffer
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm