ಬ್ರೇಕಿಂಗ್ ನ್ಯೂಸ್
04-07-21 03:58 pm Headline Karnataka News Network ದೇಶ - ವಿದೇಶ
ಪುಣೆ, ಜುಲೈ 4: ಮುಂಬೈ - ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂರೂವರೆ ವರ್ಷದ ಮಗು ಸೇರಿ ದಂಪತಿ ದಾರುಣ ಸಾವಿಗೀಡಾದ ಘಟನೆ ನಡೆದಿದೆ.
ರಾಯಗಢ ಜಿಲ್ಲೆಯ ಬೋರ್ಗಾಟ್ ಎಂಬಲ್ಲಿ ಅಪಘಾತ ನಡೆದಿದ್ದು ಕಂಟೇನರ್ ಲಾರಿ, ಟ್ರಕ್ ಮತ್ತು ಕಾರು ಸರಣಿಯಾಗಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಜೋಕಿಂ ಚೆಟ್ಟಿಯಾರ್(36), ಪತ್ನಿ ಲೂಸಿಯಾ(35), ಮತ್ತು ಇವರ ಮಗ ಮೂರುವರೆ ವರ್ಷದ ಜೈಸನ್ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಜೋಕಿಂ ಕುಟುಂಬದೊಂದಿಗೆ ಪುಣೆಯಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿ ಶನಿವಾರ ಸಂಜೆ ತಮ್ಮ ಮನೆ ವಸಾಯಿ ಬಳಿಯ ನೈಗಾಂವ್ ಗೆ ಐಟ್ವೆಂಟಿ ಕಾರಿನಲ್ಲಿ ತೆರಳುತ್ತಿದ್ದರು. ಸಂಜೆ ಐದು ಗಂಟೆ ಸುಮಾರಿಗೆ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಬೋರ್ಗಾಟ್ ಏರಿಯಾದಲ್ಲಿ ಕ್ರಾಸ್ ಮಾಡಿಕೊಂಡು ಮತ್ತೊಂದು ಕಡೆಗೆ ತೆರಳಲು ನಿಂತಿದ್ದರು. ಕಾರನ್ನು ಕ್ರಾಸ್ ಮಾಡಲೆಂದು ಮುಂದಕ್ಕೆ ಚಲಿಸುತ್ತಿದ್ದಾಗ ಇನ್ನೊಂದು ಕಡೆಯಿಂದ ಬಂದ ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿದ್ದ ಮತ್ತೊಂದು ಟ್ರಕ್ಕಿಗೆ ಡಿಕ್ಕಿಯಾಗಿದೆ. ಟ್ರಕ್ಕಿಗೆ ಬಡಿದ ರಭಸಕ್ಕೆ ಟ್ರಕ್ ಮುಂದಕ್ಕೆ ಬಂದಿದ್ದು ಜೋಕಿಂ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ.


ಡಿಕ್ಕಿಯಾದ ರಭಸಕ್ಕೆ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದ್ದು ಕೆಲವೇ ಕ್ಷಣದಲ್ಲಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಜ್ವಾಲೆಯ ಮಧ್ಯೆ ಕಾರಿನಲ್ಲಿದ್ದ ಮೂವರಿಗೆ ಹೊರಗೆ ಬರಲಾಗದೆ ಜೀವಂತ ದಹನವಾಗಿದ್ದಾರೆ.
ಕಂಟೇನರ್ ಲಾರಿಯ ಚಾಲಕ ರಮೇಶ್ ನಿಕಮ್ ಕೂಡ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಚಾಲಕ ರಮೇಶ್ ನಿಕ್ಕಂ ವಿರುದ್ಧ ನಿರ್ಲಕ್ಷ್ಯದ ಚಾಲನೆಯ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಪಘಾತದಿಂದಾಗಿ ಪುಣೆ - ಮುಂಬೈ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಪೊಲೀಸರು ಬಳಿಕ ಮೂರೂ ವಾಹನಗಳನ್ನು ಕ್ರೇನ್ ಮೂಲಕ ಹೆದ್ದಾರಿಯಿಂದ ತೆರವುಗೊಳಿಸಿದ್ದಾರೆ.
This is shocking and very Sad. #mumbaipuneexpressway https://t.co/OP4swPVzwV
— 𝚂𝚊𝚖𝚖𝚛𝚒𝚍𝚑 𝚅𝚊𝚛𝚖𝚊 (@sammridh) July 3, 2021
A road trip proved fatal for three members of a family after their car got hit by a container truck that lost control on the Mumbai-Pune Expressway in Maharashtra. The accident, the visuals of which were captured by the rear camera of another truck that was in front of their Hyundai i10, involved the car getting caught between the two big vehicles and being run over on Thursday
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
06-10-26 11:04 pm
HK News Desk
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm