ಬ್ರೇಕಿಂಗ್ ನ್ಯೂಸ್
04-07-21 02:10 pm Headline Karnataka News Network ದೇಶ - ವಿದೇಶ
Photo credits : Shutter Stock, The Nation
ಮನಿಲಾ, ಜುಲೈ 4: ಯೋಧರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ಯುದ್ಧ ವಿಮಾನವೊಂದು ಪತನಗೊಂಡಿದ್ದು 17 ಮಂದಿ ಸಾವನ್ನಪ್ಪಿದ್ದಾರೆ. 92 ಮಂದಿ ಇದ್ದ ವಿಮಾನವು ಭಾನುವಾರ ಬೆಳಗ್ಗೆ ಮನಿಲಾದಿಂದ 1,000 ಕಿ.ಮೀ ದೂರದಲ್ಲಿರುವ ಸುಲು ಪ್ರಾಂತ್ಯದಲ್ಲಿ ನೆಲಕ್ಕುರುಳಿದೆ.
ಯುದ್ಧ ವಿಮಾನ ಸಿ 130 ಪತನವನ್ನು ಸಶಸ್ತ್ರ ಪಡೆ ಮುಖ್ಯಸ್ಥ ಸಿರಿಲಿಟೊ ಸೊಬೆಜಾನಾ ಅವರು ಖಚಿತಪಡಿಸಿದ್ದಾರೆ. ಸಿ 130 ಯುದ್ಧ ವಿಮಾನದ ಅವಶೇಷಗಳಿಂದ 40 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ವಿಮಾನ ಇಳಿಯುವಾಗ ರನ್ ವೇ ತಪ್ಪಿ ಹೋಗಿದ್ದು ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. “ಮಿಂದನಾವೋ ದ್ವೀಪದಿಂದ ಸೈನಿಕ ತುಕಡಿಗಳನ್ನ ಹೊತ್ತು ಹೋದ ಈ ವಿಮಾನ ರನ್ ವೇ ಅನ್ನು ತಪ್ಪಿದೆ. ಈ ಘಟನೆ ಬಹಳ ವಿಷಾದಕರ. ರಕ್ಷಣಾ ಕಾರ್ಯಕರ್ತರು ಸ್ಥಳದಲ್ಲಿದ್ದು ಕಾರ್ಯಾಚರಣೆ ನ ಡೆಸಿದ್ದಾರೆ. ಸದ್ಯ 40 ಮಂದಿಯನ್ನ ರಕ್ಷಿಇಸಿ ಸಮೀಪದ 11ನೇ ಇನ್ಫ್ಯಾಂಟ್ರಿ ಡಿವಿಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಇನ್ನೂ ಹೆಚ್ಚು ಜನರನ್ನ ರಕ್ಷಿಸಲು ಸಾಧ್ಯವಾಗುವಂತೆ ಪ್ರಾರ್ಥಿಸುತ್ತಿದ್ದೇವೆ” ಎಂದು ಸೇನಾಧಿಕಾರಿ ಜನರಲ್ ಸಿರಿಲಿಟೊ ಸೇಬೆಜನ ಹೇಳಿದರೆಂದು ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಮಾನದಲ್ಲಿದ್ದವರಲ್ಲಿ ಅನೇಕರು ಇತ್ತೀಚೆಗಷ್ಟೇ ಮಿಲಿಟರಿ ತರಬೇತಿ ಪಡೆದು ಬಂದವರಾಗಿದ್ದರು. ಭಯೋತ್ಪಾದಕ ಚಟುವಟಿಕೆ ಹೆಚ್ಚು ಇರುವ ದಕ್ಷಿಣ ಭಾಗದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವ ಜಂಟಿ ಕಾರ್ಯ ಪಡೆಗೆ ಇವರನ್ನ ನಿಯೋಜಿಸಲಾಗಿತ್ತೆನ್ನಲಾಗಿದೆ.
ಫಿಲಿಪ್ಪೈನ್ಸ್ನ ದಕ್ಷಿಣ ಭಾಗದಲ್ಲಿ ಬಹಳಷ್ಟು ಉಗ್ರ ಸಂಘಟನೆಗಳು ಸಕ್ರಿಯವಾಗಿವೆ. ಇವುಗಳಲ್ಲಿ ಕುಖ್ಯಾತವಾದ ಅಬು ಸಯ್ಯಾಫ್ ಎಂಬ ಸಂಘಟನೆಯೂ ಒಂದು. ಭಯೋತ್ಪಾದನೆ ಹೆಚ್ಚಿರುವ ಕಾರಣ ಇಲ್ಲಿ ಫಿಲಿಪ್ಪೈನ್ಸ್ ಸೇನಾ ಉಪಸ್ಥಿತಿ ಹೆಚ್ಚಿದೆ.
ಇನ್ನು, ಕಳೆದ ತಿಂಗಳಷ್ಟೇ ಫಿಲಿಪ್ಪೈನ್ಸ್ ಹೆಲಿಕಾಪ್ಟರ್ ಅಪಘಾತ ಘಟನೆಯನ್ನ ಕಂಡಿತ್ತು. ರಾತ್ರಿ ಹೊತ್ತು ತರಬೇತಿ ನೀಡುತ್ತಿದ್ದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ ಎಲ್ಲಾ ಆರು ಮಂದಿ ಅಸುನೀಗಿದ್ದರು. ಇದು ಮನೀಲಾದ ಉತ್ತರ ಭಾಗದಲ್ಲಿರುವ ಕಣಿವೆಯೊಂದರಲ್ಲಿ ಸಂಭವಿಸಿದ ದುರಂತ. ಮೂವರು ಪೈಲಟ್ಗಳು ಹಾಗೂ ಮೂವರು ಸೈನಿಕರು ಆ ಹೆಲಿಕಾಪ್ಟರ್ನಲ್ಲಿದ್ದರು.
At least 17 people were killed and 40 injured when a Philippine military aircraft carrying troops crashed after missing the runway in the country's south, officials said.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 09:24 am
HK News Desk
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
08-10-25 09:17 am
Udupi Correspondent
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm