ಬ್ರೇಕಿಂಗ್ ನ್ಯೂಸ್
18-06-21 01:17 pm Headline Karnataka News Network ದೇಶ - ವಿದೇಶ
ಚಂಡೀಗಢ, ಜೂ.18 : ಮಗು ಸಾವನ್ನಪ್ಪಿದ್ದ ಬಗ್ಗೆ ವೈದ್ಯರು ಖಚಿತ ಪಡಿಸಿದ್ದರಿಂದ ಕುಟುಂಬಸ್ಥರು ಮನೆಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಹೆತ್ತಮ್ಮನ ಗೋಳಾಟ ಮುಗಿಲು ಮುಟ್ಟಿತ್ತು. ಅರಚಾಟವೋ, ತಾಯಿಯ ಬಿಸಿಯಪ್ಪುಗೆಯೋ, ಸತ್ತು ಮಲಗಿದ್ದ ಮಗುವಿನ ದೇಹದಲ್ಲಿ ಫಕ್ಕನೆ ಚಲನೆ ಕಂಡುಬಂದು ಜೀವ ಪಡೆದ ಘಟನೆ ಹರಿಯಾಣದಲ್ಲಿ ನಡೆದಿದೆ.
ಏಳು ವರ್ಷದ ಮಗು ಕುನಾಲ್ ಶರ್ಮಾಗೆ ಕಳೆದ ತಿಂಗಳು ಟೈಫಾಯಿಡ್ ಜ್ವರ ಕಾಣಿಸಿಕೊಂಡಿದ್ದು ತೀವ್ರ ಅಸ್ವಸ್ಥನಾಗಿದ್ದ. ಬಳಿಕ ಮಗುವನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವಾರದ ಬಳಿಕ ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು. ಪಾಲಕರು ಕಣ್ಣೀರು ಹಾಕುತ್ತಲೇ ಮಗುವಿನ ಶವವನ್ನು ಊರಿಗೆ ತಂದಿದ್ದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಈ ನಡುವೆ ಪವಾಡವೇ ನಡೆದಿದ್ದು, ಶವವಾಗಿದ್ದ ಮಗು ಜೀವ ಪಡೆದಿದೆ.

ಮಗುವಿನ ತಾಯಿ ಅರಚಾಡುತ್ತಾ ಮಗುವಿನ ದೇಹವನ್ನೆಲ್ಲ ಸವರತೊಡಗಿದ್ದರು. ಈ ವೇಳೆ ಬಾಲಕನ ದೇಹದಲ್ಲಿ ಚಲನೆ ಕಂಡುಬಂದಿದ್ದು, ಕೂಡಲೇ ತಂದೆ ಹಿತೇಶ್, ಮಗುವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಉಸಿರು ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆಗ ಮಗನ ದೇಹದಲ್ಲಿ ಎದೆಯ ಬಡಿತವೂ ಶುರುವಾಗಿದೆ.
ಕೂಡಲೇ ಮಗುವನ್ನು ಎತ್ತಿಕೊಂಡು ಪಾಲಕರು ಸಮೀಪದ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. 20 ದಿನಗಳ ಚಿಕಿತ್ಸೆ ಬಳಿಕ, ಪವಾಡ ಎಂಬಂತೆ ಬಾಲಕ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಜೂ.15 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಮಗು ಸತ್ತು ಬದುಕಿದ ಪ್ರಸಂಗ ಉತ್ತರ ಭಾರತದಲ್ಲಿ ಪವಾಡದ ಕತೆಯಾಗಿ ಮಾರ್ದನಿಸಿದೆ.
In a shocker from Haryana's Bahadurgarh, 7-year-old Kunal, who was allegedly declared dead by doctors, miraculously survived after his relatives sensed some movement in his body minutes before his last rites.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
06-10-26 11:04 pm
HK News Desk
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm