ಬ್ರೇಕಿಂಗ್ ನ್ಯೂಸ್
31-05-21 07:34 pm Headline Karnataka News Network ದೇಶ - ವಿದೇಶ
ಲಕ್ನೋ, ಮೇ 31: ತನ್ನನ್ನು ಕ್ರೈಂ ಬ್ರಾಂಚ್ ಇನ್ ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡು ಹಿಂದು ಯುವತಿಯನ್ನು ಯಾಮಾರಿಸಿ ಮದುವೆಯಾಗಿದ್ದಲ್ಲದೆ, ಬ್ಲಾಕ್ಮೇಲ್ ಮಾಡಿ ಮುಸ್ಲಿಂ ಆಗಿ ಮತಾಂತರಿಸಿದ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಅಜಾಂಘಡ ಜಿಲ್ಲೆಯ ಆಬಿದ್ ಹವಾರಿ ಎನ್ನುವಾತ ಈ ರೀತಿ ಯುವತಿಯನ್ನು ಯಾಮಾರಿಸಿದ ಆರೋಪಿಯಾಗಿದ್ದು ಪೊಲೀಸರು ಆತನನ್ನು ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಿದ್ದಾರೆ.
ಯುವತಿ ನೀಡಿರುವ ಹೇಳಿಕೆ ಪ್ರಕಾರ, ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ. ಅಲ್ಲದೆ, ವಿಡಿಯೋ ಮುಂದಿಟ್ಟು ಇಸ್ಲಾಂ ಆಗಿ ಮತಾಂತರ ಆಗಲು ಒತ್ತಡ ಹೇರಿದ್ದಾನೆ. ಕೊನೆಗೆ ಬಲವಂತದಿಂದ ಮತಾಂತರ ಮಾಡಿದ್ದಾನೆ.

2015ರಲ್ಲಿ ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಆಬಿದ್ ಯುವತಿಗೆ ಪರಿಚಯ ಆಗಿದ್ದ. ತನ್ನನ್ನು ಇನ್ ಸ್ಪೆಕ್ಟರ್ ಆದಿತ್ಯ ಎಂದು ಪರಿಚಯ ಮಾಡಿಕೊಂಡಿದ್ದ ಬಳಿಕ ಪ್ರೀತಿಸಿ ಮದುವೆಯಾಗಿದ್ದಾನೆ. ಅಲ್ಲದೆ, ಆನಂತರ ಫ್ಲಾಟ್ ಖರೀದಿಸಿ ಅದರಲ್ಲೇ ಕಚೇರಿ ಮಾಡಿಕೊಂಡಿದ್ದ. ಇನ್ ಸ್ಪೆಕ್ಟರ್ ಆಗಿರುವುದಕ್ಕೆ ಪೊಲೀಸ್ ಯೂನಿಫಾರ್ಮಲ್ಲಿದ್ದ ಫೋಟೋ ತೋರಿಸುತ್ತಿದ್ದ ಆಬಿದ್ ಹೊರಗಡೆ ಹೋಗುತ್ತಿದ್ದಾಗ ಸಾದಾ ಬಟ್ಟೆಯನ್ನೇ ಧರಿಸುತ್ತಿದ್ದ. ಯುವತಿ ಕೇಳಿದಾಗ, ಕ್ರೈಂ ಬ್ರಾಂಚ್ ನವರು ಸಿವಿಲ್ ಡ್ರೆಸ್ ನಲ್ಲಿಯೇ ಇರೋದು. ಯುನಿಫಾರ್ಮ್ ಹಾಕೋದಿಲ್ಲ ಎಂದು ನಂಬಿಸುತ್ತಿದ್ದ.
2016ರಲ್ಲಿ ಮದುವೆಯಾದ ಬಳಿಕ ಆದಿತ್ಯ ಸಿಂಗ್ ಅಸಲಿ ಮುಖ ಬಯಲಾಗಿದ್ದು, ತನ್ನ ನಿಜಮುಖವನ್ನು ತೋರಿಸಿದ್ದಾನೆ. ಯುವತಿ ಜೊತೆಗಿದ್ದ ಖಾಸಗಿ ದೃಶ್ಯಗಳನ್ನು ಮೊಬೈಲಿನಲ್ಲಿ ಚಿತ್ರೀಕರಿಸಿ ಅದನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದ. ಆನಂತರ ವಿಡಿಯೋ ಮುಂದಿಟ್ಟು ಬಲವಂತದಿಂದ ಮುಸ್ಲಿಂ ಆಗಿ ಮತಾಂತರ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಯುವತಿ ಆತನ ನೈಜ ವಿಚಾರ ತಿಳಿದುಕೊಳ್ಳಲು ಅಜಂ ಘಡಕ್ಕೆ ತೆರಳಿದ್ದಾಳೆ.

ಅಲ್ಲಿ ಆತನ ಸ್ವಂತ ಮನೆಯನ್ನು ಪತ್ತೆ ಮಾಡಿದ್ದಲ್ಲದೆ, ಅಲ್ಲಿ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದಲ್ಲದೆ ಏಳು ಮಕ್ಕಳನ್ನು ಹೊಂದಿರುವ ವಿಚಾರ ತಿಳಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ಆಬಿದ್ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಈ ನಡುವೆ, ಕಳೆದ ಫೆಬ್ರವರಿಯಲ್ಲೂ ಆತ ಮತ್ತೊಬ್ಬ ಯುವತಿಯನ್ನು ಮದುವೆಯಾಗಿರುವ ವಿಚಾರವೂ ಬಯಲಾಗಿದೆ.
ಪೊಲೀಸರ ಪ್ರಕಾರ, ಆಬಿದ್ ತಾನು ಪೊಲೀಸ್ ಎಂದು ಹೇಳಿಕೊಂಡು ಬಹಳಷ್ಟು ಮಂದಿಗೆ ವಂಚನೆ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಲವ್ ಜಿಹಾದ್ ತಪ್ಪಿಸಲು ಉತ್ತರ ಪ್ರದೇಶ ಸರಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ಕಾಯ್ದೆಯಡಿ ಆಬಿದ್ ವಿರುದ್ಧ ಪ್ರಕರಣ ದಾಖಲಾಗಿದೆ.
Uttar Pradesh Police arrested a married Muslim man identified as Abid Hawari from Azamgarh under the anti-conversion law. Abid, who pretended to be an officer named Aditya Singh in the crime branch of UP Police, is accused of deceiving Hindu women while concealing his religious identity and lying about his occupation.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm