ಬ್ರೇಕಿಂಗ್ ನ್ಯೂಸ್
21-05-21 03:43 pm Headline Karnataka News Network ದೇಶ - ವಿದೇಶ
ಕಲಬುರ್ಗಿ, ಮೇ 21 : ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಲು ಕಾಂಗ್ರೆಸ್ಸಿಗರ ನೀಚ ರಾಜಕೀಯವೇ ಕಾರಣ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪುನರುಚ್ಚರಿಸಿದ್ದಾರೆ.
ಇಲ್ಲಿನ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಅವರು ಮಾತನಾಡಿದರು. ದೇಶದ ಲಸಿಕೆ ಬಗ್ಗೆ ಆರಂಭದಲ್ಲಿ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡಿದರು. ಲಸಿಕೆ ಪರಿಣಾಮಕಾರಿ ಅಲ್ಲ, ಇದರಿಂದ ಪುರುಷತ್ವ ಕಡಿಮೆ ಆಗುತ್ತದೆ ಎಂದೆಲ್ಲ ಸುಳ್ಳು ಸುದ್ದಿ ಹರಡಿದರು. ಇದರಿಂದಾಗಿ ಲಸಿಕೆ ಪಡೆಯಲು ಹಲವರು ಹಿಂಜರಿದಿದ್ದರಿಂದ ಈಗ ಸೋಂಕು ಹೆಚ್ಚುವಂತಾಗಿದೆ. ಸೋಂಕಿನ ಕಾರಣ ಸಾವಿನ ಪ್ರಮಾಣವೂ ಹೆಚ್ಚಾಗಿದೆ ಎಂದು ದೂರಿದರು.


ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರೂ ಹೇಳಿದ್ದಾರೆ. ಅವರ ಹೇಳಿಕೆ ಸತ್ಯವಾಗಿದೆ. ವ್ಯಾಕ್ಸಿನ್ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡಿದೆ ಎಂದು ನಳಿನ್ ಆರೋಪಿಸಿದರು.

ಫೆಬ್ರುವರಿಯಲ್ಲಿ ಸ್ವತಃ ಪ್ರಧಾನಿ ಮೋದಿ ಅವರೇ ಲಸಿಕೆ ಪಡೆದುಕೊಂಡು ಜನರಿಗೆ ಲಸಿಕೆ ಪಡೆಯಲು ಪ್ರೇರಣೆ ನೀಡಿದರು. ಆದರೂ ಜನ ಮೇ ವರೆಗೂ ಲಸಿಕೆಗಾಗಿ ಮುಂದೆ ಬರಲಿಲ್ಲ. ಈಗ ಅದೇ ಕಾಂಗ್ರೆಸ್ಸಿಗರು ಲಸಿಕೆ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಕೂಡ ಈ ರೀತಿಯ ಆರೋಪಗಳಿಂದ ಹೊರತಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತದೋ ಸಿದ್ದರಾಮಯ್ಯ ಸಹ ಅದನ್ನೇ ಮಾಡುತ್ತಾರೆ. ಅಧಿಕಾರಕ್ಕಾಗಿ ಕಾಂಗ್ರೆಸಿಗರು ಮಾಡುತ್ತಿರುವ ಈ ರೀತಿಯ ವರ್ತನೆಯನ್ನು ಜನ ಸಹಿಸುವುದಿಲ್ಲ. ಅದಕ್ಕಾಗಿಯೇ ಜನ ಅವರನ್ನು ವರುಣಾ ಕ್ಷೇತ್ರದಿಂದ ಓಡಿಸಿದ್ದಾರೆ. ಇದೇ ರೀತಿ ಮಾಡಿದರೆ ಬಾದಾಮಿಯಿಂದಲೂ ಓಡಿಸುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಮೂದಲಿಸಿದರು.
The dirty politics of Congress is the reason for the widespread of Coronavirus in India mocks Naleen Kumar Kateel during a BJP led program in Kalaburgi
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm