ಬ್ರೇಕಿಂಗ್ ನ್ಯೂಸ್
18-05-21 05:12 pm Headline Karnataka News Network ದೇಶ - ವಿದೇಶ
Photo credits : sakshi
ಹೈದರಾಬಾದ್, ಮೇ 18: ಹೈದರಾಬಾದ್ ಮೂಲದ ಸಾಫ್ಟ್ ವೇರ್ ಪದವೀಧರೆಯೊಬ್ಬಳು ಅಮೆರಿಕಾದ ಪ್ರತಿಷ್ಠಿತ ಕಂಪನಿ ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ವಾರ್ಷಿಕ ಎರಡು ಕೋಟಿ ಸಂಬಳದ ಆಫರ್ ಪಡೆದಿದ್ದಾಳೆ.
ದೀಪ್ತಿ ನಕುರ್ತಿ ಎನ್ನುವ ಹೆಸರಿನ ಐಐಟಿ ಪದವೀಧರೆ ಕಂಪನಿ ಸೇರುವಾಗಲೇ ಅತಿ ದುಬಾರಿ ಆಫರ್ ಪಡೆದಿರುವಾಕೆ. ಮೈಕ್ರೋಸಾಫ್ಟ್ ಕಂಪನಿಯಲ್ಲಿ ಗ್ರೇಡ್ – 2 ಇಂಜಿನಿಯರ್ ಆಗಿ ಆಯ್ಕೆಯಾಗಿರುವ ದೀಪ್ತಿ ಸಾಫ್ಟ್ ವೇರ್ ಡೆವಲಪರ್ ಆಗಿ ಹುದ್ದೆ ಪಡೆದಿದ್ದಾರೆ.
ಅಮೆರಿಕಾದ ಫ್ಲಾರಿಡಾ ಯುನಿವರ್ಸಿಟಿಯಲ್ಲಿ ಎಂಎಸ್ (ಕಂಪ್ಯೂಟರ್) ಪೂರೈಸಿರುವ ದೀಪ್ತಿಗೆ ಇದಕ್ಕೂ ಮೊದಲೇ ಹಲವು ಬಹುರಾಷ್ಟ್ರೀಯ ಕಂಪೆನಿಗಳಿಂದ ಆಫರ್ ಬಂದಿತ್ತು. ಆದರೆ, ಮೈಕ್ರೋಸಾಫ್ಟ್ ಆಫರನ್ನು ಸ್ವೀಕರಿಸಿದ್ದು ಸಾಫ್ಟ್ ವೇರ್ ಡೆವಲಪರ್ ಆಗಿ ಕೇರಿಯರ್ ಆರಂಭಿಸಿದ್ದಾರೆ. ಮೇ 17ಕ್ಕೆ ಮೈಕ್ರೋಸಾಫ್ಟ್ ಕಂಪನಿಯ ಹುದ್ದೆಗೆ ಸೇರಿಕೊಂಡಿದ್ದಾರೆ.
ಫ್ಲಾರಿಡಾ ವಿವಿಯಿಂದ 300 ಮಂದಿ ವಿದ್ಯಾರ್ಥಿಗಳು ಬೇರೆ ಬೇರೆ ಹುದ್ದೆಗಳಿಗೆ ಆಯ್ಕೆಯಾಗಿದ್ದು ಅತಿ ಹೆಚ್ಚು ಸಂಬಳದ ಆಫರ್ ಪಡೆದಿದ್ದು ದೀಪ್ತಿ ಮಾತ್ರ. ಇದಕ್ಕೂ ಮುನ್ನ ಹೈದರಾಬಾದ್ ನಲ್ಲಿ ಒಸ್ಮಾನಿಯಾ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪೂರೈಸಿದ್ದ ದೀಪ್ತಿ ಆಬಳಿಕ ಅಮೆರಿಕ ಮೂಲದ ಜೆಪಿ ಮೋರ್ಗನ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಕಂಪನಿಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದು, ಆನಂತರ ಉನ್ನತ ವ್ಯಾಸಂಗಕ್ಕೆ ಬಯಸಿದ್ದ ದೀಪ್ತಿಗೆ ಮತ್ತೊಂದು ಆಫರ್ ಬಂದಿತ್ತು. ಫ್ಲಾರಿಡಾ ಯುನಿವರ್ಸಿಟಿಯಿಂದ ಉಚಿತ ಸ್ಕಾಲರ್ ಶಿಪ್ ಪಡೆದಿದ್ದು ಪ್ಲಸ್ ಆಗಿತ್ತು. ಎಂಎಸ್ ಪ್ರೋಗ್ರಾಮ್ ವಿಚಾರದಲ್ಲಿ ದೀಪ್ತಿ ಫ್ಲಾರಿಡಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು ಇದೀಗ ಅಲ್ಲಿಂದಲೇ ದೊಡ್ಡ ಹುದ್ದೆಗೆ ಆಯ್ಕೆಯಾಗಿದ್ದಾಳೆ.
Hyderabad girl Narkuti Deepti bagged a job offer from Microsoft with a whopping salary of Rs 2 crore per annum. Deepti got a job as Software Development Engineer in the IT giant. Deepti, after completing her Bachelors in Engineering from Osmania College of Engineering moved to the United States to pursue Masters of Science (MS).
07-10-25 11:20 pm
Bangalore Correspondent
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
ದಸರಾ ರಜಾ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ; 10 ದಿ...
07-10-25 05:23 pm
07-10-25 11:16 pm
HK News Desk
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
07-10-25 10:13 pm
Mangalore Correspondent
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm