ಬ್ರೇಕಿಂಗ್ ನ್ಯೂಸ್
18-05-21 03:17 pm Headline Karnataka News Network ದೇಶ - ವಿದೇಶ
Photo credits : The Indian Express
ಚಂಡೀಗಢ, ಮೇ 18: ಲೀವಿಂಗ್ ರಿಲೇಶನ್ ಸಂಬಂಧಗಳು ನೈತಿಕವಾಗಿ ಮತ್ತು ಸಾಮಾಜಿಕ ನೆಲೆಯಲ್ಲಿ ಒಪ್ಪತಕ್ಕದ್ದಲ್ಲ ಮತ್ತು ಸ್ವೀಕಾರಾರ್ಹವೂ ಅಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹುಡುಗ- ಹುಡುಗಿ ಮನೆ ಬಿಟ್ಟು ಓಡಿ ಹೋಗಿದ್ದಲ್ಲದೆ, ಮದುವೆಯಾಗುವ ಮುನ್ನ ಜೊತೆಗೆ ಬಾಳುವುದಕ್ಕೆ ಅನುಮತಿ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ರೀತಿಯ ತೀರ್ಪು ನೀಡಿದೆ. ದೇಶದಲ್ಲಿ ಲೀವಿಂಗ್ ರಿಲೇಶನ್ ಸಂಬಂಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಹೈಕೋರ್ಟ್ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಹತ್ವ ಪಡೆದುಕೊಂಡಿದೆ.

ಪಂಜಾಬ್ ಪ್ರಾಂತ್ಯದ ಗುಲ್ಝಾ ಕುಮಾರಿ (19) ಮತ್ತು ಗುರ್ವಿಂದರ್ ಸಿಂಗ್ (22) ಎಂಬ ಇಬ್ಬರು ಮನೆ ಬಿಟ್ಟು ಓಡಿ ಬಂದಿದ್ದು ನಾವು ಸದ್ಯದಲ್ಲೇ ಮದುವೆಯಾಗುತ್ತೇವೆ. ಅಲ್ಲೀವರೆಗೆ ಜೊತೆಯಾಗಿರಲು ಅನುಮತಿ ನೀಡಬೇಕು ಎಂದು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅರ್ಜಿದಾರರು ಲೀವಿಂಗ್ ರಿಲೇಶನ್ ಶಿಪ್ ಹೊಂದಲು ಬಯಸಿದ್ದಾರೆ. ಆದರೆ, ಈ ರೀತಿಯ ಸಂಬಂಧಗಳು ಸಮಾಜದಲ್ಲಿ ಸ್ವೀಕಾರಾರ್ಹವಲ್ಲ. ಒಪ್ಪುವಂಥದ್ದೂ ಅಲ್ಲ. ಹೀಗಾಗಿ ಈ ರೀತಿಯ ಸಂಬಂಧಗಳ ಬಗ್ಗೆ ಯಾವುದೇ ರೀತಿಯ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಲ್ಲದೆ, ಯುವಜೋಡಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಮಾಹಿತಿ ಪ್ರಕಾರ, ಹುಡುಗಿಯ ಮದುವೆಗೆ ಆಕೆಯ ಹೆತ್ತವರು ಒಪ್ಪಿಗೆ ನೀಡಿಲ್ಲ. ಹೆತ್ತವರ ವಿರೋಧದ ಮಧ್ಯೆ ಲೂಧಿಯಾನದಿಂದ ಹುಡುಗಿಯನ್ನು ತಾರನ್ ಜಿಲ್ಲೆಗೆ ಹುಡುಗ ಕರೆದೊಯ್ದು ಜೊತೆಗೆ ವಾಸ ಮಾಡಲಾರಂಭಿಸಿದ್ದ. ಆಕೆಯ ವಯಸ್ಸು ಭರ್ತಿಯಾಗಿರುವ ಬಗ್ಗೆ ದಾಖಲೆ ಪತ್ರಗಳು ಲಭ್ಯವಿಲ್ಲದ ಕಾರಣ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹುಡುಗಿ ಮನೆಯವರ ಭಯದಿಂದ ಪೊಲೀಸರ ರಕ್ಷಣೆ ಬೇಕೆಂದು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
The Punjab and Haryana high court has made it clear that the “live-in-relationship is morally or socially not acceptable.” Justice H S Madaan passed these orders while dismissing the petition filed by a runaway couple from Punjab’s Tarn Taran district seeking protection of their life and liberty. The couple, in this case, was in a “live-in” relationship.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am