ಬ್ರೇಕಿಂಗ್ ನ್ಯೂಸ್
16-05-21 09:14 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 16: ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಯುವಕನ ಪ್ರೇಮ ಪಾಶಕ್ಕೆ ಸಿಲುಕಿದ ಯುವತಿ, ಆತ ಸೇರಿದಂತೆ 25 ಮಂದಿಯಿಂದ ಸರಣಿ ಅತ್ಯಾಚಾರಕ್ಕೀಡಾದ ಘಟನೆ ರಾಜಧಾನಿ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ದೆಹಲಿಯಲ್ಲಿ ಡಾಮೆಸ್ಟಿಕ್ ಕೇರಿಯರ್ ನಲ್ಲಿ ಉದ್ಯೋಗದಲ್ಲಿದ್ದ ಯುವತಿಗೆ ಕಳೆದ ಜನವರಿಯಲ್ಲಿ 23 ವರ್ಷದ ಸಾಗರ್ ಎನ್ನುವ ಯುವಕ ಫೇಸ್ಬುಕ್ ನಲ್ಲಿ ಪರಿಚಯ ಆಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಫೋನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಈ ವೇಳೆ ಸಾಗರ್ ಯುವತಿಯನ್ನು ಮದುವೆಯಾಗುವ ಪ್ರಸ್ತಾಪ ಇಟ್ಟಿದ್ದು , ತನ್ನ ಹೆತ್ತವರಿಗೆ ಪರಿಚಯ ಮಾಡುವುದಾಗಿ ಹೇಳಿ ಮನೆಗೆ ಬರಲು ಹೇಳಿದ್ದಾನೆ.
ಹೀಗಾಗಿ ಕಳೆದ ಮೇ 3ರಂದು ಯುವತಿ ಆತ ಹೇಳಿದ್ದ ವಿಳಾಸದ ಹೋದಾಲ್ ನಲ್ಲಿರುವ ರಾಮಗರ್ ಎಂಬಲ್ಲಿಗೆ ತೆರಳಿದ್ದಳು. ರಾಮಗರ್ ಗ್ರಾಮದಲ್ಲಿ ಸಾಗರ್ ಭೇಟಿಯಾಗಿದ್ದು, ಅಲ್ಲಿನ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆತನ ಸೋದರರು ಮತ್ತು ಇತರ ಕೆಲವರು ಸೇರಿ ಗುಂಪಾಗಿ ಮದ್ಯ ಸೇವನೆ ಮಾಡುತ್ತಿದ್ದರು. ಬಳಿಕ ಸಾಗರ್ ಯುವತಿ ವಿರುದ್ಧ ತಿರುಗಿ ಬಿದ್ದಿದ್ದು ಅವರೆದುರಲ್ಲೇ ಅತ್ಯಾಚಾರ ನಡೆಸಿದ್ದಾನೆ. ಇತರ ಕೆಲವರು ಕೂಡ ಸರಣಿಯಾಗಿ ಅತ್ಯಾಚಾರ ನಡೆಸಿದ್ದಾರೆ.
ಮರುದಿನದ ವರೆಗೂ ಆಕೆಯನ್ನು ಅಲ್ಲಿ ಕೂಡಿ ಹಾಕಿದ್ದು, ಬಳಿಕ ಆಕಾಶ್ ಎನ್ನುವ ಗುಜರಿ ವ್ಯಾಪಾರಿ ಬಳಿ ಕರೆದೊಯ್ದಿದ್ದಾನೆ. ಅಲ್ಲಿಯೂ ಐದಾರು ಮಂದಿ ಸೇರಿ ಯುವತಿಯನ್ನು ಭೋಗಿಸಿದ್ದಾರೆ. ಸರಣಿ ಅತ್ಯಾಚಾರದಿಂದ ಯುವತಿಯ ಆರೋಗ್ಯ ಹದಗೆಟ್ಟಿದ್ದು, ಬಳಿಕ ಐವರು ಸೇರಿ ಆಕೆಯನ್ನು ರಸ್ತೆ ಬದಿ ಎಸೆದು ಹೋಗಿದ್ದರು.
ತೀವ್ರ ಬಳಲಿದ್ದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿದ ಬಳಿಕ ಹಸನ್ಪುರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾಳೆ. ದೂರು ನೀಡುವಾಗ ಇಷ್ಟು ತಡವಾಗಿದ್ದು ಯಾಕೆಂದು ಪೊಲೀಸರು ಕೇಳಿದ್ದಕ್ಕೆ, ನಡೆದ ಕತೆಯನ್ನು ವಿವರಿಸಿದ್ದಾಳೆ. ಆರೋಗ್ಯ ಹದಗೆಟ್ಟಿದ್ದರಿಂದ ದೂರು ಕೊಡಲು ಸಾಧ್ಯವಾಗಲಿಲ್ಲ ಎಂದಿದ್ದಾಳೆ. ದೂರು ಸ್ವೀಕರಿಸಿದ ಹಸನ್ ಪುರ ಠಾಣೆಯ ಪೊಲೀಸರು ಆರೋಪಿ ಸಾಗರ್ ನನ್ನು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ.
A woman from Delhi was allegedly lured into a forest by her Facebook friend and was gang-raped by 25 men through the night and morning on May 3. The woman approached the cops 9 days after the incident took place when she eventually gathered the strength to narrate her ordeal.
15-08-25 03:20 pm
Bangalore Correspondent
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
Home Minister Parameshwar: ದ್ವೇಷ ಭಾಷಣ ಮಾಡುವವರ...
14-08-25 03:51 pm
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
15-08-25 01:32 pm
HK News Desk
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm