ಬ್ರೇಕಿಂಗ್ ನ್ಯೂಸ್
08-04-21 01:53 pm Headline Karnataka News Network ದೇಶ - ವಿದೇಶ
ದುಬೈ,ಎ.8 : ಕೆಲವು ದಿನಗಳ ಹಿಂದೆ ದುಬೈನಲ್ಲಿ ನಡೆದ ಘಟನೆಯೊಂದು ಭರ್ಜರಿ ಸುದ್ದಿಯಾಗಿತ್ತು. ಒಂದಷ್ಟು ರೂಪದರ್ಶಿಯರು ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಟ್ಟಿದ್ದರು. ಅದಾದ ಮೇಲೆ ಆ ರೂಪದರ್ಶಿಯರು ಹಾಗೂ ಫೋಟೋ, ವಿಡಿಯೋ ಶೂಟ್ ಮಾಡಿದ ಫೋಟೋಗ್ರಾಫರ್ನನ್ನು ಪೊಲೀಸರು ಬಂಧಿಸಿದ್ದರು.
ದುಬೈನ ಮರಿನಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ವೊಂದರ ಬಾಲ್ಕನಿಯಲ್ಲಿ ಸುಮಾರು 18 ಮಹಿಳೆಯರು ಸಂಪೂರ್ಣವಾಗಿ ಬೆತ್ತಲಾಗಿ ಫೋಸ್ ಕೊಟ್ಟ ಫೋಟೋ, ವಿಡಿಯೋಗಳು ಸಂಯುಕ್ತ ಅರಬ್ ರಾಷ್ಟ್ರಾದ್ಯಂತ ಕೋಲಾಹಲವನ್ನೇ ಉಂಟು ಮಾಡಿದ್ದವು. ಸಂಯುಕ್ತ ಅರಬ್ ರಾಷ್ಟ್ರ ಹೇಳಿಕೇಳಿ ಸಂಪ್ರದಾಯ, ಕಠಿಣ ಕಾನೂನು ಪಾಲಿಸುವ ರಾಷ್ಟ್ರ. ಹಾಗಾಗಿ ತುಸು ಜಾಸ್ತಿ ಎನ್ನಿಸುವಷ್ಟು ವಿವಾದ ಸೃಷ್ಟಿಯಾಗಿತ್ತು.
ಯುಎಇನಲ್ಲಿ ಸಾರ್ವಜನಿಕವಾಗಿ ಚುಂಬಿಸುವದನ್ನೇ ನಿಷೇಧಿಸಲಾಗಿದ್ದು, ಅಂಥವರನ್ನೂ ಜೈಲಿಗೆ ಕಳಿಸಲಾಗುತ್ತದೆ. ಅಂಥದ್ದರಲ್ಲಿ ಹೀಗೆಲ್ಲ ಬೆತ್ತಲೆ ಪೋಸ್ ಕೊಟ್ಟರೆ ಬಿಡುತ್ತಾರೆಯೇ? ಅದರಂತೆ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಇವರೆಲ್ಲರನ್ನೂ ಬಂಧಿಸಿದ್ದರು.

ಇನ್ನು ಈ ರೂಪದರ್ಶಿಯರೆಲ್ಲ ಯಾರೂ ಮೂಲತಃ ಯುಎಇಗೆ ಸೇರಿದವರಲ್ಲ. ರೂಪದರ್ಶಿಯರು ಉಕ್ರೇನ್ ದೇಶದವರಾಗಿದ್ದು, ಫೋಟೋಗ್ರಾಫರ್ ರಷ್ಯಾದವನಾಗಿದ್ದಾನೆ ಎಂದು ದುಬೈ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಹಾಗೇ ಉಕ್ರೇನಿಯನ್ ರೂಪದರ್ಶಿಗಳೊಂದಿಗೆ ಇದ್ದ ಕೆಲವು ಮಹಿಳೆಯರನ್ನೂ ಬಂಧಿಸಲಾಗಿದೆ. ಆದರೆ ಅವರು ಎಲ್ಲಿಯವರು ಎಂದು ಗೊತ್ತಾಗಿಲ್ಲ ಎಂದು ತಿಳಿಸಿದೆ.
ಬಾಲ್ಕನಿಯಲ್ಲಿ ಬೆತ್ತಲಾಗಿದ್ದ ಉಕ್ರೇನಿಯನ್ ಮಹಿಳೆಯರನ್ನು, ಫೋಟೋ ಶೂಟ್ ಮಾಡಿದವರನ್ನು ಎಲ್ಲರನ್ನೂ ಅವರ ದೇಶಕ್ಕೆ ಗಡೀಪಾರು ಮಾಡುವ ಸಿದ್ಧತೆ ನಡೆಯುತ್ತಿದೆ. ವಿಚಾರಣೆ, ಕಾನೂನು ಪ್ರಕ್ರಿಯೆಗಳು ಬಹುತೇಕ ಮುಗಿದಿದೆ ಎಂದು ದುಬೈ ಅಟಾರ್ನಿ ಜನರಲ್ ಇಸ್ಸಾಂ ಇಸ್ಸಾ ಅಲ್ ಹುಮಾಯಿದ್ದೀನ್ ತಿಳಿಸಿದ್ದಾರೆ.
ಅಸಭ್ಯ ವರ್ತನೆ, ಸಾರ್ವಜನಿಕ ಶಿಸ್ತು ಉಲ್ಲಂಘನೆಗೆ ಯುಎಇ ಕಾನೂನಿನಲ್ಲಿ ಆರು ತಿಂಗಳ ಜೈಲು ಶಿಕ್ಷೆ, 5000 ದಿಹ್ರಾಮ್ಗಳಷ್ಟು ದಂಡ ಹಾಕಬಹುದಾಗಿದೆ. ಅಶ್ಲೀಲ, ಬೆತ್ತಲೆ ಫೋಟೋಗಳನ್ನು ಹಂಚಿಕೊಳ್ಳುವುದು ಈ ಅಸಭ್ಯವರ್ತನೆಯಡಿಯೇ ಬರುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.
Dubai is set to deport about a dozen Ukrainian women and one Russian man detained after a nude photoshoot they staged on a high-rise balcony sparked outrage in the glitzy, conservative Gulf city state.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am