ಬ್ರೇಕಿಂಗ್ ನ್ಯೂಸ್
05-04-21 07:33 pm Headline Karnataka News Network ದೇಶ - ವಿದೇಶ
ಕಾಸರಗೋಡು, ಎ.5: ಕೇರಳದಲ್ಲಿ ಎಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಬೆಳಗ್ಗೆ 7ರಿಂದ ಸಂಜೆ 7ರ ವರೆಗೂ ಮತದಾನಕ್ಕೆ ಸಮಯ ನಿಗದಿ ನೀಡಲಾಗಿದೆ. ಸಂಜೆ ಒಂದು ಗಂಟೆ ಹೆಚ್ಚುವರಿ ಸಮಯ ನೀಡಲಾಗಿದ್ದು, ಕೋವಿಡ್ ಪೀಡಿತರು, ಸಂಪರ್ಕಿತರಿಗಾಗಿ ಸಂಜೆಯ ಸಮಯವನ್ನು ಮೀಸಲು ಇರಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿದ್ದು, 1591 ಬೂತ್ ಗಳನ್ನು ಮಾಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿಯೂ ಎಪ್ರಿಲ್ 5ರಂದೇ ಸಿದ್ಧತೆ ಪೂರ್ಣಗೊಂಡಿದ್ದು ಚುನಾವಣಾ ಕರ್ತವ್ಯದ ಸಿಬಂದಿ ಮತಗಟ್ಟೆಯಲ್ಲೇ ಎರಡು ದಿನ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ಹೊಂದಿರುವ ಮತಕ್ಷೇತ್ರಗಳಿಂದ ಇವಿಎಂ ಮೆಷಿನ್ ಸೇರಿದಂತೆ ಮತ ಯಂತ್ರಗಳು, ಕಂಪ್ಯೂಟರ್, ಇನ್ನಿತರ ಪರಿಕರಗಳನ್ನು ಸಿಬಂದಿ ಎಪ್ರಿಲ್ 5ರಂದು ಆಯಾ ಮತಗಟ್ಟೆಗೆ ತಲುಪಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 10,59,907 ಮತದಾರರಿದ್ದಾರೆ. ಅದರಲ್ಲಿ 5,18501 ಪುರುಷರು ಹಾಗೂ 5,41,460 ಮಹಿಳಾ ಮತದಾರರಿದ್ದಾರೆ. ಆರು ಮಂದಿ ಮಂಗಳಮುಖಿಯರಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 9700 ಮಂದಿ ಸಿಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಮಂಜೇಶ್ವರ ಕ್ಷೇತ್ರದಲ್ಲಿ 2,21,682 ಮತದಾರರಿದ್ದು ಇದರಲ್ಲಿ 1,10,682 ಮಂದಿ ಮಹಿಳೆಯರು. ಕಾಸರಗೋಡು ಕ್ಷೇತ್ರದಲ್ಲಿ 2,01812 ಮತದಾರರಿದ್ದು ಅದರಲ್ಲಿ 102233 ಮಹಿಳಾ ಮತದಾರರಾಗಿದ್ದಾರೆ. ಜಿಲ್ಲೆಯಲ್ಲಿ 64 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, 738 ಬೂತ್ ಗಳಲ್ಲಿ ಅಧಿಕಾರಿಗಳು ಲೈವ್ ಆಗಿ ವೀಕ್ಷಣೆ ಮತ್ತು ನಿಗಾ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಳಿದಂತೆ 851 ಬೂತ್ ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ 3400 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 712 ಮಂದಿ ಸಿಆರ್ ಪಿಎಫ್ ಪಡೆಯ ಸಿಬಂದಿಯನ್ನೂ ಆಯಕಟ್ಟಿನ ಕ್ಷೇತ್ರಗಳಲ್ಲಿ ನಿಗಾ ಇರಿಸಲಾಗಿದೆ.
After weeks-long campaign sessions, marathon rallies and mammoth road shows, Kerala is all set to go to polls on Tuesday with 2.74 crore voters exercising their franchise to decide the fate of 957 candidates including high-profile leaders and independents in 140 Assembly constituencies across the state.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm