ಬ್ರೇಕಿಂಗ್ ನ್ಯೂಸ್
13-03-21 06:07 pm Headline Karnataka News Network ದೇಶ - ವಿದೇಶ
ಕಾಸರಗೋಡು, ಮಾ.13: ಕೇರಳದಲ್ಲಿ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳ ಬಗ್ಗೆ ಕುತೂಹಲ ಎದ್ದಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಕಾರ್ಯಕರ್ತರಲ್ಲಿ ಭಾರೀ ಕುತೂಹಲ ಕಾದಿತ್ತು. ಸ್ಥಳೀಯ ಕೆಲವು ಪುಢಾರಿಗಳು ತಾವೇ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಲಾಬಿ ನಡೆಸುವುದನ್ನೂ ಮಾಡಿದ್ದರು. ಈ ನಡುವೆ, ಹೆಚ್ಚಿನ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಅಥವಾ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅವರನ್ನು ಕಣಕ್ಕಿಳಿಸಲು ಒತ್ತಾಯ ಮಾಡಿದ್ದರು.

ಈಗ ಬಂದಿರುವ ಮಾಹಿತಿ ಪ್ರಕಾರ, ಸುರೇಂದ್ರನ್ ಅವರನ್ನೇ ಮಂಜೇಶ್ವರ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿ ಚುನಾವಣಾ ಕಮಿಟಿಗೆ ರವಾನಿಸಲಾಗಿತ್ತು. ಕಾಸರಗೋಡಿನ ಮಂಜೇಶ್ವರ ಮತ್ತು ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ಕ್ಷೇತ್ರದಲ್ಲಿ ಸುರೇಂದ್ರನ್ ಅವರನ್ನು ಕಣಕ್ಕಿಳಿಸಲು ಒತ್ತಾಯ ಕೇಳಿಬಂದಿತ್ತು. ಪಟ್ಟಿ ಅಂತಿಮಗೊಳಿಸಿ ಸುರೇಂದ್ರನ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದರು.

ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯಲ್ಲಿ ಅಂತಿಮಗೊಳಿಸಲಾಗಿದ್ದು, ಭಾನುವಾರ ಅಧಿಕೃತವಾಗಿ ಮಾಧ್ಯಮಕ್ಕೆ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸುರೇಂದ್ರನ್ ಕಣಕ್ಕಿಳಿಯುತ್ತಾರೆಂಬ ಸುದ್ದಿ ಹೊರಬೀಳುತ್ತಲೇ ಕಾರ್ಯಕರ್ತರು ತಮ್ಮ ಸ್ಟೇಟಸ್ ನಲ್ಲಿ ಇದನ್ನು ಹಾಕ್ಕೊಂಡಿದ್ದಾರೆ. ಬಿಜೆಪಿ ವಾಟ್ಸಪ್ ಗ್ರೂಪ್ ಗಳಲ್ಲಿ ಸುರೇಂದ್ರನ್ ಫೋಟೋಗಳು ರಾರಾಜಿಸಲು ಆರಂಭಿಸಿದೆ. ಕಳೆದ 2016ರ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಒಡ್ಡಿದ್ದ ಸುರೇಂದ್ರನ್ ಮಂಜೇಶ್ವರ ಕ್ಷೇತ್ರದಲ್ಲಿ ಕೇವಲ 89 ಮತಗಳಿಂದ ಸೋಲು ಕಂಡಿದ್ದರು.
ಉಳಿದಂತೆ, ಸಿಪಿಎಂನಿಂದ ಕಾಞಂಗಾಡ್ ಮೂಲದ ಬಿ.ವಿ. ರಮೇಶ್ ಮತ್ತು ಲೀಗ್ ನಲ್ಲಿ ಎ.ಕೆ. ಅಶ್ರಫ್ ಅವರನ್ನು ಕಣಕ್ಕಿಳಿಸುವುದನ್ನು ಅಂತಿಮಗೊಳಿಸಲಾಗಿದೆ. ಸುರೇಂದ್ರನ್ ಮಂಜೇಶ್ವರದಲ್ಲಿ ಸ್ಪರ್ಧಿಸಿದರೆ, ಶ್ರೀಕಾಂತ್ ಕಾಸರಗೋಡು ಕ್ಷೇತ್ರದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಕೇರಳ ; ಬಿಜೆಪಿ ಲಿಸ್ಟ್ ಫೈನಲ್, ಸುರೇಂದ್ರನ್ ದೆಹಲಿಗೆ, ಕೊನ್ನಿಯಲ್ಲೇ ಕಣಕ್ಕೆ ರಾಜ್ಯಾಧ್ಯಕ್ಷ ?
The BJP, which is leaving no stone unturned to garner votes in Kerala, has deployed more than three dozen party leaders from Dakshina Kannada, Udupi and Kodagu districts in Karnataka to look after the management of its election campaign.
06-03-26 07:03 pm
HK News Staffer
ಅನ್ನಭಾಗ್ಯದಲ್ಲಿ ದೊಡ್ಡ ಬದಲಾವಣೆ ; ಹೆಚ್ಚುವರಿ ಅಕ್...
06-03-26 03:50 pm
ಡಿಜಿಟಲ್ ವ್ಯಸನಕ್ಕೆ ಬ್ರೇಕ್ ; 16 ವರ್ಷದೊಳಗಿನ ಮಕ್ಕ...
06-03-26 12:08 pm
ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ; ಮುಂದುವರೆ...
06-03-26 10:21 am
Bhatkal Petrol News: ಬೆಲೆ ಏರಿಕೆ ಭೀತಿ ; ಭಟ್ಕಳ...
05-03-26 11:42 pm
06-03-26 11:04 pm
HK News Desk
ಲವ್ ಜಿಹಾದ್ ಕಡಿವಾಣಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಮಸೂ...
06-03-26 10:58 pm
ಹರ್ಮುಜ್ ಜಲಸಂಧಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾತ್...
06-03-26 11:40 am
ಮಾರ್ಕ್-48 ಜಗತ್ತಿನ ಅತಿ ಶಕ್ತಿಶಾಲಿ ಜಲಾಂತರ್ಗಾಮಿ ಸ...
06-03-26 09:50 am
ಇರಾನಲ್ಲಿ 1230 ಜನರ ಸಾವು ; ಜೆರುಸಲೇಮ್ ಮೇಲೆ ಬಾಂಬ್...
05-03-26 08:51 pm
06-03-26 07:01 pm
HK News Staffer
ಮಂಗಳೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿ ಲೇಡಿಗೆ ಸೈಬರ್...
06-03-26 04:08 pm
ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋ...
06-03-26 12:17 pm
ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ;...
05-03-26 07:38 pm
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm