ಬ್ರೇಕಿಂಗ್ ನ್ಯೂಸ್
01-03-21 01:39 pm Headline Karnataka News Network ದೇಶ - ವಿದೇಶ
ಅಯೋಧ್ಯೆ, ಮಾ.1: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷತ್ ವತಿಯಿಂದ ದೇಶಾದ್ಯಂತ ಕೈಗೊಂಡಿದ್ದ ದೇಣಿಗೆ ಸಂಗ್ರಹ ಅಭಿಯಾನ ಕೊನೆಗೊಂಡಿದ್ದು ಬರೋಬ್ಬರಿ 2500 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹ ಆಗಿರುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.
ಮಂದಿರ ನಿರ್ಮಾಣಕ್ಕೆ 1500 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಅದಕ್ಕಾಗಿ ಕಳೆದ ಜನವರಿಯ ಮಕರ ಸಂಕ್ರಮಣದ ಬಳಿಕ 44 ದಿನಗಳನ್ನು ಗುರುತಿಸಿ ದೇಣಿಗೆ ಸಂಗ್ರಹಕ್ಕೆ ಇಳಿಯಲಾಗಿತ್ತು. ಮಾಘ ಪೂರ್ಣಿಮೆಯ ಫೆ.27ರಂದು ಅಭಿಯಾನ ಮುಕ್ತಾಯವಾಗಿದ್ದು, ಸುಮಾರು ಒಂದು ಸಾವಿರ ಕೋಟಿ ಹೆಚ್ಚುವರಿಯಾಗಿ ಸಂಗ್ರಹಗೊಂಡಿದೆ ಎನ್ನಲಾಗುತ್ತಿದೆ. ಫೆ.27ರ ಶನಿವಾರ ಸಂಜೆ 2100 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹ ಆಗಿರುವ ಬಗ್ಗೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ಸದಸ್ಯ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದ್ದರು.
44 ದಿನಗಳ ಅಭಿಯಾನದಲ್ಲಿ 45 ಕೋಟಿ ಜನರನ್ನು ಮತ್ತು 11 ಕೋಟಿ ಕುಟುಂಬಗಳನ್ನು ಸಂಪರ್ಕಿಸಲು ಉದ್ದೇಶ ಹೊಂದಲಾಗಿತ್ತು. ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ನೀಡಿರುವ ಮಾಹಿತಿ ಪ್ರಕಾರ, ಈ ಅಭಿಯಾನ ಜಗತ್ತಿನಲ್ಲೇ ಅತಿ ದೊಡ್ಡ ದೇಣಿಗೆ ಸಂಗ್ರಹ ಅಭಿಯಾನವಾಗಿತ್ತು. ಅಂತಿಮ ಮೊತ್ತ 2500 ಕೋಟಿ ಆಗಬಹುದು. ಇನ್ನೂ ಕೆಲವು ರಾಜ್ಯಗಳಲ್ಲಿ ಆಗಿರುವ ದೇಣಿಗೆ ಸಂಗ್ರಹದ ಸಂಪೂರ್ಣ ಮಾಹಿತಿ ಬಂದಿಲ್ಲ. ಎಲ್ಲ ಧರ್ಮದ ಮತ್ತು ಸ್ತರದ ಜನರು ಅಭಿಯಾನದಲ್ಲಿ ಪಾಲ್ಗೊಂಡು ದೇಣಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವದರ್ಜೆಯ ನಗರವಾಗಿ ಅಯೋಧ್ಯೆ
ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಯೋಧ್ಯೆಯನ್ನು ವಿಶ್ವದರ್ಜೆಯ ನಗರವಾಗಿ ರೂಪಿಸುವ ಉದ್ದೇಶವನ್ನು ತೀರ್ಥಕ್ಷೇತ್ರ ಕಮಿಟಿ ಹೊಂದಿದೆ. ಇದಕ್ಕಾಗಿ ಕೆನಡಾ ಮೂಲಕ ಎಲ್ಇಎ ಅಸೋಸಿಯೇಟ್ಸ್ ಸೌತ್ ಏಷ್ಯಾ ಪ್ರೈವೇಟ್ ಲಿಮಿಟೆಡ್, ಭಾರತದ ಲಾರ್ಸನ್ ಅಂಡ್ ಟಬ್ರೋ ಲಿಮಿಟೆಡ್ ಮತ್ತು ಕುಕ್ರೇಜಾ ಆರ್ಕಿಟೆಕ್ಟ್ ಕಂಪನಿಗಳು ಈಗಾಗ್ಲೇ ಅಯೋಧ್ಯೆಯ ಅಭಿವೃದ್ಧಿಗೆ ಪ್ರತ್ಯೇಕ ನೀಲನಕ್ಷೆಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದೆ. ಮಂದಿರ ನಿರ್ಮಾಣದ ಹೊಣೆಯನ್ನು ಉತ್ತರ ಪ್ರದೇಶ ಸರಕಾರ ಹೊತ್ತುಕೊಂಡಿದ್ದು, ಅದನ್ನು ಟ್ರಸ್ಟ್ ಮೂಲಕ ಜಾರಿಗೊಳಿಸುತ್ತಿದೆ.
ಆನ್ ಲೈನ್ ದೇಣಿಗೆಗೆ ಅವಕಾಶ
ದೇಣಿಗೆ ಸಂಗ್ರಹದ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದ್ದು, ಆನ್ ಲೈನ್ ಮೂಲಕ ಕೆಲವು ದಿನಗಳ ವರೆಗೆ ದೇಣಿಗೆ ನೀಡಲು ಅವಕಾಶವಿದೆ. ಈವರೆಗೆ ಟ್ರಸ್ಟ್ ಖಾತೆಯಲ್ಲಿ 1900 ಕೋಟಿ ರೂಪಾಯಿ ಜಮೆಯಾಗಿದೆ. ಅನೇಕ ಚೆಕ್ ಗಳು ಬ್ಯಾಂಕಿನಲ್ಲಿ ಕ್ಲಿಯರೆನ್ಸ್ ಆಗದೆ ಬಾಕಿಯಾಗಿದೆ. ಎಲ್ಲ ಅಂತಿಮಗೊಂಡ ಬಳಿಕ ದೇಣಿಗೆಯಲ್ಲಿ ಸಂಗ್ರಹಗೊಂಡ ಮೊತ್ತವನ್ನು ಅಧಿಕೃತವಾಗಿ ತಿಳಿಸಲಾಗುವುದು ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ಗಿರಿ ತಿಳಿಸಿದ್ದಾರೆ.
Touted as the world’s largest fund collection drive, over Rs 1900 crores have so far been deposited in bank accounts of Lord Ram Lala during the 44-day Samarpan Nidhi Abhiyan which began on the auspicious occasion of Makar Sankranti on January 15 and ended on Magh Purnima on Saturday, February 27.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 03:24 pm
Mangalore Correspondent
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm