ಬ್ರೇಕಿಂಗ್ ನ್ಯೂಸ್
15-02-21 11:30 am Headline Karnataka News Network ದೇಶ - ವಿದೇಶ
ಪಾಲಕ್ಕಾಡ್, ಫೆ.15: ಜಿಲ್ಲೆಯ ಕುಣಿಶ್ಶೇರಿ ಎಂಬಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
ಕುದಿರೆಪ್ಪಾರ ನಿವಾಸಿ ಜಸೀರ್ ಎಂಬವರ 3, 7 ಮತ್ತು 12 ವರ್ಷದ ಮಕ್ಕಳು ಮೃತಪಟ್ಟವರಾಗಿದ್ದು, ಶನಿವಾರ ಆಟವಾಡುವ ವೇಳೆ ಕಾಲು ಜಾರಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕುಣಿಶ್ಶೇರಿಯ ಕುದಿರೆಪ್ಪಾರ ಎಂಬಲ್ಲಿ ತೋಟದ ಮಧ್ಯೆ ಇರುವ ಕೊಳದಲ್ಲಿ ಘಟನೆ ಸಂಭವಿಸಿದೆ. ಮಾವಿನ ಹಣ್ಣು ತೊಳೆಯಲು 7 ವರ್ಷ ಪ್ರಾಯದ ರಿಂಶಾದ್ ಕೊಳಕ್ಕೆ ಇಳಿದಾಗ ಕಾಲು ಜಾರಿ ಬಿದ್ದಿದ್ದು, ಇದನ್ನು ನೋಡಿದ 3 ವರ್ಷ ಪ್ರಾಯದ ರಿಫಾಝ್ ಕೂಡಾ ಕೊಳಕ್ಕೆ ಇಳಿದಿದ್ದಾರೆ. ಇಬ್ಬರನ್ನೂ ರಕ್ಷಿಸಲು 12ರ ಹರೆಯದ ಜಿಂಶಾದ್ ಕೊಳಕ್ಕೆ ಹಾರಿದ್ದು, ಮೂವರೂ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇವರೊಂದಿಗೆ ಆಟವಾಡುತ್ತಿದ್ದ 8 ವರ್ಷದ ಶೃತಿ ಎಂಬ ಬಾಲಕಿ ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾಳೆ.

ಜಸೀರ್- ರಮ್ಲಾ ದಂಪತಿಗೆ ಇದ್ದ ಈ ಮೂವರು ಮಕ್ಕಳೂ ಮೃತಪಟ್ಟಿದ್ದು, ಮೃತರನ್ನು ಆಲತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಂತರ ಮೃತದೇಹಗಳನ್ನು ಆಲತ್ತೂರಿನ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಕೃಷಿ ಸಚಿವ ವಿ.ಎಸ್ ಸುನೀಲ್ ಕುಮಾರ್, ಆಲತ್ತೂರು ಶಾಸಕ ಕೆ.ಡಿ ಪ್ರಸನ್ನನ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
In a tragic incident, three children drowned in a pond barely 100m away from their house at Kuthirapara, Kunissery near Alathur on Sunday.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am