ಬ್ರೇಕಿಂಗ್ ನ್ಯೂಸ್
14-02-21 12:10 pm Headline Karnataka News Network ದೇಶ - ವಿದೇಶ
ಕರ್ನೂಲ್, ಫೆ.14: ಇಲ್ಲಿನ ಕರ್ನೂರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಇಂದು ನಸುಕಿನಲ್ಲಿ ನಡೆದ ಭೀಕರ ಅಪಘಾತದಲ್ಲಿ 14 ಮಂದಿ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಚಿತ್ತೂರು ಜಿಲ್ಲೆಯ ಮದನಪಲ್ಲೆ ಗ್ರಾಮದಿಂದ ರಾಜಸ್ಥಾನದ ಅಜ್ಮೀರ್ ಗೆ ಯಾತ್ರೆ ಹೊರಟಿದ್ದ ಕುಟುಂಬದ ಮಿನಿ ವ್ಯಾನ್ ಟ್ರಕ್ ಒಂದಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕರ್ನೂಲ್ ಜಿಲ್ಲೆಯ ವೇಲ್ದುರ್ತಿ ತಾಲೂಕು ವ್ಯಾಪ್ತಿಯ ಮಾದಾರಪುರಂ ಗ್ರಾಮದಲ್ಲಿ ನಸುಕಿನ 3.30ರ ಸುಮಾರಿಗೆ ಘಟನೆ ನಡೆದಿದೆ.


ಎಂಟು ಮಹಿಳೆಯರು, ಐದು ಪುರುಷರು ಮತ್ತು ಒಂದು ಮಗು ಮೃತರಲ್ಲಿ ಸೇರಿದ್ದು ಅಪಘಾತದ ತೀವ್ರತೆಗೆ ದೇಹಗಳು ಅಪ್ಪಚ್ಚಿಯಾಗಿದ್ದವು. ಒಂದಕ್ಕೊಂದು ಅಂಟಿಕೊಂಡಿದ್ದ ವಾಹನವನ್ನು ಜೆಸಿಬಿ ತಂದು ಹಗ್ಗ ಕಟ್ಟಿ ಎಳೆದು ಬಿಡಿಸಲಾಯ್ತು. ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.



ಪೊಲೀಸರ ಪ್ರಕಾರ, ಮಿನಿ ವ್ಯಾನ್ ಚಾಲಕ ಅತಿ ವೇಗದಿಂದ ಇದ್ದ ಅಥವಾ ವೇಗದಲ್ಲಿರುವಾಗಲೇ ವ್ಯಾನ್ ಟೈರ್ ಸಿಡಿದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಅಪಘಾತದ ಕಾರಣ ಹೆದ್ದಾರಿಯಲ್ಲಿ ಪೂರ್ತಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಘಟನೆ ಬಗ್ಗೆ ಸಿಎಂ ಜಗನ್ಮೋಹನ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು ಗಾಯಾಳುಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡುವಂತೆ ಕರ್ನೂಲ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಕರ್ನೂಲ್ ಜಿಲ್ಲಾಧಿಕಾರಿ ಪ್ರಕಾರ, ಚಿತ್ತೂರು ಜಿಲ್ಲೆಯಿಂದ ಹೊರಟಿದ್ದ ಮಿನಿ ವ್ಯಾನ್ ನಲ್ಲಿ 18 ಮಂದಿ ಇದ್ದರು. 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Visuals: 14 killed, 4 injured in truck-mini van collision near Madapuram in Veldurthi Mandal of #Kurnool district. pic.twitter.com/WRrWhEwMMh
— TOI Vijaywada (@TOIVijaywada) February 14, 2021
22-08-26 03:01 pm
HK News Staffer
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm