ಬ್ರೇಕಿಂಗ್ ನ್ಯೂಸ್
01-02-21 10:29 am Headline Karnataka News Network ದೇಶ - ವಿದೇಶ
ನವದೆಹಲಿ, ಫೆಬ್ರವರಿ.01: ಕೇಂದ್ರ ಸರ್ಕಾರದ ಇತಿಹಾಸದಲ್ಲೇ ಐತಿಹಾಸಿಕ ಆಯವ್ಯಯವನ್ನು ಮಂಡಿಸುವುದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಂಡ ಸನ್ನದ್ಧವಾಗಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಕೇಂದ್ರ ಬಜೆಟ್ 2021-22ರ ಮೇಲೆ ಇಡೀ ದೇಶದ ದೃಷ್ಟಿ ನೆಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಂಡಿಸುತ್ತಿರುವ ಕೇಂದ್ರದ 9ನೇ ಆಯವ್ಯಯ ಇದಾಗಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ದೇಶದ ಆರ್ಥಿಕತೆಯು ಪಾತಾಳಕ್ಕೆ ಕುಸಿದಿದೆ. ಹಳಿ ತಪ್ಪಿರುವ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸುವ ನಿರೀಕ್ಷೆಗಳಿವೆ. ದೇಶದಲ್ಲಿ ಸಿದ್ಧಗೊಂಡಿರುವ ಕೊವಿಡ್-19 ಲಸಿಕೆಯು ಭಾರತದ ಪಾಲಿಗೆ ಒಂದು ಪ್ಲಸ್ ಪಾಯಿಂಟ್ ಆಗಿದೆ.
ಕೊರೊನಾವೈರಸ್ ಲಸಿಕೆಯಿಂದ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಉತ್ತುಂಗದ ಸ್ಥಾನ ಸಿಕ್ಕಿದೆ. ಇದೇ ಅವಕಾಶವನ್ನು ದೇಶದ ಆರ್ಥಿಕತೆ ಬಲಪಡಿಸುವುದಕ್ಕಾಗಿ ಸದುಪಯೋಗಪಡಿಸಿಕೊಳ್ಳುವುದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಭಾರತ ಲಾಕ್ ಡೌನ್ ನಿಂದಾಗಿ 2021ನೇ ಸಾಲಿನಲ್ಲಿ ಒಟ್ಟು ದೇಶೀಯ ಉತ್ಪನ್ನ ಪ್ರಮಾಣದಲ್ಲಿ ಶೇ.7 ರಿಂದ 8ರಷ್ಟು ಇಳಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸಂಸತ್ ನಲ್ಲಿ ಹಣಕಾಸು ಸಚಿವೆ ಮಂಡಿಸುತ್ತಿರುವ ಬಜೆಟ್ ನಲ್ಲಿ ಕೊರೊನಾವೈರಸ್ ಲಸಿಕೆಯ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪಾಲು ಎಷ್ಟಿರುತ್ತದೆ ಎಂಬುದರ ಬಗ್ಗೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಆರೋಗ್ಯ ವಲಯಕ್ಕೆ ಎಷ್ಟು ಹಣವನ್ನು ಘೋಷಿಸಬಹುದು ಎನ್ನುವುದು ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ದೇಶದ ಆರ್ಥಿಕತೆ ಬಲಪಡಿಸುವುದರ ಜೊತಗೆ ಶಿಕ್ಷಣ, ತೆರಿಗೆ, ಉದ್ಯೋಗ ಸೃಷ್ಟಿ, ಸಣ್ಣ ಕೈಗಾರಿಕೆ, ಬೃಹತ್ ಕೈಗಾರಿಕೆ, ಕ್ರೀಡೆ, ಮನರಂಜನೆ ಸೇರಿದಂತೆ ಹಲವು ವಲಯಗಳಿಗೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಯಾವ ರೀತಿ ಮೀಸಲಾತಿ ನೀಡಲಾಗಿರುತ್ತದೆ ಎಂಬುದರ ಮೇಲೆ ಲಕ್ಷ್ಯ ನೆಡಲಾಗಿದೆ.
Prime Minister Narendra Modi-led govt will present its most closely watched Budget 2021 today. The Budget 2021 has been tasked to get India back on track as the world’s fastest-growing major economy by boosting spending on job-creation and rural development while fighting back the coronavirus.
08-05-25 07:50 pm
Bangalore Correspondent
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
08-05-25 04:57 pm
HK News Desk
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
08-05-25 04:52 pm
Mangalore Correspondent
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm