ಬ್ರೇಕಿಂಗ್ ನ್ಯೂಸ್
04-01-21 06:10 pm Headline Karnataka News Network ದೇಶ - ವಿದೇಶ
Photo credits : Representative Image
ಭೋಪಾಲ್, ಜ.4: ಮಧ್ಯಪ್ರದೇಶದ ಮೂರ್ನಾಲ್ಕು ಜಿಲ್ಲೆಗಳಲ್ಲಿ ನೂರಾರು ಕಾಗೆಗಳು ದಿಢೀರ್ ಆಗಿ ಸತ್ತು ಬೀಳುತ್ತಿದ್ದು, ಕಳೆದ ಒಂದು ವಾರದಿಂದ ಕಂಡುಬರುತ್ತಿರುವ ಹೊಸ ವಿದ್ಯಮಾನ ಚಿಂತೆಗೆ ಕಾರಣವಾಗಿದೆ.
ಮಂಡ್ಸೌರ್, ಖಾರ್ಗೋನ್, ಇಂದೋರ್ ಮತ್ತು ಭೋಪಾಲ್ ಜಿಲ್ಲೆಯಲ್ಲಿ ಕಾಗೆಗಳ ಸಾವು ಕಂಡುಬಂದಿದೆ. ಇಂದೋರ್ ಜಿಲ್ಲೆಯಲ್ಲಿ 145ಕ್ಕೂ ಹೆಚ್ಚು ಕಾಗೆಗಳು ಸತ್ತಿರುವುದು ಪತ್ತೆಯಾಗಿದೆ. ರಾಜಸ್ಥಾನದ ಗಡಿ ಹಂಚಿಕೊಂಡಿರುವ ಮಂಡ್ಸೌರ್ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಕಾಗೆಗಳು ಸಾವು ಕಂಡಿದ್ದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಗೆ ಸತ್ತಿರುವುದು ಹೇಗೆ, ಏನು ಕಾರಣ ಇರಬಹುದು ಎಂಬ ಬಗ್ಗೆ ಸಂಶೋಧನೆಗಳು ನಡೆದಿವೆ.

ಇಂದೋರ್ ಜಿಲ್ಲೆಯಲ್ಲಿ ಸಿಕ್ಕ ಕಾಗೆಗಳನ್ನು ಪರೀಕ್ಷೆಗೊಳಪಡಿಸಿದ್ದು ಎಚ್ 5 ಎನ್ 8 ರೀತಿಯ ಹಕ್ಕಿಜ್ವರದಿಂದ ಕಾಗೆ ಸತ್ತಿರುವ ಬಗ್ಗೆ ತಿಳಿದುಬಂದಿದೆ ಎಂದು ಭೋಪಾಲ್ ಪಶು ವೈದ್ಯಕೀಯ ವಿಭಾಗದ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ನಾವು ಹಲವು ಜಿಲ್ಲೆಗಳಿಂದ ಸತ್ತಿರುವ ಕಾಗೆಗಳನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಬಾವಿಗಳಲ್ಲಿ ಸತ್ತು ಬಿದ್ದಿರುವುದನ್ನು ಪತ್ತೆ ಮಾಡಲಾಗಿದೆ. ಹೆಚ್ಚಿನ ಕಡೆ ಮರದಡಿಯಲ್ಲಿ ಕಾಗೆಗಳು ಸತ್ತು ಬಿದ್ದಿರುವುದು ಸಿಕ್ಕಿದೆ. ಇದನ್ನು ಪರೀಕ್ಷೆ ನಡೆಸಲಾಗುತ್ತಿದ್ದು ಇನ್ನು ಕೂಡ ಹಕ್ಕಿಜ್ವರವೇ ಕಾರಣ ಎಂಬ ಬಗ್ಗೆ ತೀರ್ಮಾನಕ್ಕೆ ಬಂದಿಲ್ಲ. ಆದ್ರೂ ಇದು ಗಂಭೀರ ವಿಚಾರವಾಗಿದ್ದು ನಾವು ಎಲರ್ಟ್ ಆಗಿದ್ದೇವೆ ಎಂದು ಪಶು ಸಂಗೋಪನಾ ಇಲಾಖೆಯ ಡಾ.ಲಲಿತ್ ಪಾಟಿಧರ್ ಹೇಳಿದ್ದಾರೆ.

ಇದೇ ವೇಳೆ, ಕಾಗೆ ಸತ್ತು ಬಿದ್ದಿರುವ ಪ್ರದೇಶದಲ್ಲಿ ಎಲರ್ಟ್ ಮಾಡಲಾಗಿದ್ದು, ಜನರಲ್ಲಿ ಹಕ್ಕಿಜ್ವರದ ಲಕ್ಷಣ ಇದೆಯೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಶೋಧ ನಡೆಸುತ್ತಿದೆ.
Panic has gripped several parts of Madhya Pradesh after hundreds of crows have died in three districts in the past one week.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm