ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ನಗದು ನಿಷೇಧ ; ಡಿಜಿಟಲ್ ಪಾವತಿಗೆ ಮಾತ್ರ ಅವಕಾಶ, ವಾಹನ ದಟ್ಟಣೆ ತಪ್ಪಿಸಲು ಕ್ರಮ 

17-01-26 01:47 pm       HK News Desk   ದೇಶ - ವಿದೇಶ

ದೇಶಾದ್ಯಂತ ಹೆದ್ದಾರಿ ಪ್ರಯಾಣವನ್ನು ಡಿಜಿಟಲ್ ರೂಪಕ್ಕಿಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ನಿಷೇಧಿಸಲು ಮುಂದಾಗಿದೆ.

ನವದೆಹಲಿ, ಜ.17: ದೇಶಾದ್ಯಂತ ಹೆದ್ದಾರಿ ಪ್ರಯಾಣವನ್ನು ಡಿಜಿಟಲ್ ರೂಪಕ್ಕಿಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ನಿಷೇಧಿಸಲು ಮುಂದಾಗಿದೆ.

ವಾಹನ ದಟ್ಟಣೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರಯಾಣಿಕರು ಹೆದ್ದಾರಿಯಲ್ಲಿ ಟೋಲ್‌ಗಳನ್ನು ಪಾವತಿಸಲು FASTag ಅಥವಾ UPI ಬಳಸಬೇಕಾಗುತ್ತದೆ. ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲವಾದರೂ, ಸುಗಮ ವಾಹನ ಸಂಚಾರಕ್ಕಾಗಿ ಇಲಾಖೆ ಸಿದ್ಧತೆ ನಡೆಸುತ್ತಿದೆ. ಪ್ರಯಾಣಿಕರು ಪೂರ್ತಿಯಾಗಿ ಡಿಜಿಟಲ್ ಬದಲಾವಣೆಗೆ ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. 

ಟೋಲ್‌ ಪ್ಲಾಜಾಗಳಲ್ಲಿ ನಗದು ಪಾವತಿಗೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಿ ಸುಗಮ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು, ಡಿಜಿಟಲ್ ಪಾವತಿಯಿಂದ ಪಾರದರ್ಶಕ ವಹಿವಾಟು ತರುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ. ಯಾವುದೇ ಭೌತಿಕ ಅಡೆತಡೆಗಳಿಲ್ಲದೆ ಹೆದ್ದಾರಿ ವೇಗದಲ್ಲಿ ಕಾರುಗಳು ಟೋಲ್ ಗೇಟ್ ನಲ್ಲೂ ಓಡಿಸಲು ಅನುವಾಗುವಂತೆ ತಂತ್ರಜ್ಞಾನ ಚಾಲ್ತಿಗೆ ತರಲು ಪರಿಶೀಲನೆ ನಡೆದಿದೆ. ‘ನೋ-ಸ್ಟಾಪ್’ ವ್ಯವಸ್ಥೆಯನ್ನು ಈಗಾಗಲೇ ದೇಶದಾದ್ಯಂತ 25 ಟೋಲ್ ಪ್ಲಾಜಾಗಳಲ್ಲಿ ಪರೀಕ್ಷಿಸಲಾಗುತ್ತಿದೆ. 

ಇದಕ್ಕಾಗಿ ಪ್ರಯಾಣಿಕರು ತಮ್ಮ FASTag ಖಾತೆಗಳನ್ನು ತಕ್ಷಣವೇ ಪರಿಶೀಲಿಸಿ ರೆಡಿ ಮಾಡಿಕೊಳ್ಳಬೇಕು. ನಿಮ್ಮ ಟ್ಯಾಗ್ ಸಕ್ರಿಯವಾಗಿದೆಯೇ ಮತ್ತು ಸಾಕಷ್ಟು ಬ್ಯಾಲೆನ್ಸ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನೀವು FASTag ಬಳಸದಿದ್ದರೆ, ಪ್ಲಾಜಾದಲ್ಲಿ ನಿಮ್ಮನ್ನು ವಾಪಸ್ ಕಳುಹಿಸುವುದನ್ನು ತಪ್ಪಿಸಲು ನಿಮ್ಮ ಸ್ಮಾರ್ಟ್‌ಫೋನ್ UPI ಪಾವತಿಗಳಿಗೆ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕಿದೆ.

To ease traffic congestion and promote seamless travel, the Ministry of Road Transport and Highways plans to ban cash payments at national highway toll plazas from April 1. Commuters will be required to pay tolls only through digital modes such as FASTag or UPI, paving the way for faster, transparent, and ‘no-stop’ toll operations across the country.