'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನಾವೆಲ್ಲ ಪಕ್ಷದ ಸೂಚನೆಗೆ ಬದ್ಧ, 2028ರಲ್ಲಿ ಗೆದ್ದರೆ ಮಾತ್ರ ಕ್ರಾಂತಿ! ದೆಹಲಿಯಲ್ಲಿ ಮೆತ್ತಗಾದ ಡಿಕೆಶಿ 

06-11-25 10:22 pm       HK News Desk   ದೇಶ - ವಿದೇಶ

ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಅಥವಾ ನಾಯಕತ್ವ ಬದಲಾವಣೆಯ ವದಂತಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ತಳ್ಳಿಹಾಕಿದ್ದು, 2028 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ, ನ.6 : ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಅಥವಾ ನಾಯಕತ್ವ ಬದಲಾವಣೆಯ ವದಂತಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ತಳ್ಳಿಹಾಕಿದ್ದು, 2028 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.

ತಮ್ಮನ್ನು ತಾವು ಪಕ್ಷದ "ಶಿಸ್ತಿನ ಸಿಪಾಯಿ" ಎಂದು ಹೇಳಿಕೊಂಡಿರುವ ಡಿಕೆ ಶಿವಕುಮಾರ್, ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ಯಾವುದೇ ಕ್ರಾಂತಿಯನ್ನು ನಿರಾಕರಿಸಿದ್ದಾರೆ. 

ನಾನು ಇಲ್ಲಿ ಯಾರನ್ನೂ ಭೇಟಿಯಾಗುತ್ತಿಲ್ಲ. ಸಚಿವ ಸಂಪುಟ ಪುನರ್ರಚನೆ ಬಗ್ಗೆ ನನ್ನೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಅದು ಸಿಎಂ ಅವರ ವಿಶೇಷ ಹಕ್ಕು. ಅವರು ಅದನ್ನು ಮಾಡಲಿ ಎಂದು ಡಿಕೆಶಿ ದೆಹಲಿಯಲ್ಲಿ ಹೇಳಿದ್ದಾರೆ. ನನಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಯೋಜನೆ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು. ಮತ ಗಳ್ಳತನ ವಿಚಾರವಾಗಿ ನಿನ್ನೆ ರಾತ್ರಿಯೂ ಸಭೆ ಮಾಡಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ನಾನು ಏನಾದರೂ ಹೇಳಿದ್ದೇನಾ? ಸಿಎಂ ಏನಾದರೂ ಹೇಳಿದ್ದಾರಾ? ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುತ್ತೇವೆ ಎಂದಿದ್ದಾರೆ. 

ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಇರಬೇಕೆಂದು ಹೇಳಿದರೆ, ಅವರು ಐದು ವರ್ಷ ಇರುತ್ತಾರೆ. ಹತ್ತು ವರ್ಷ ಇರಬೇಕೆಂದರೆ, ಅವರು ಹತ್ತು ವರ್ಷಗಳ ಕಾಲ ಇರುತ್ತಾರೆ. 15 ವರ್ಷ ಇರಬೇಕಿದ್ದರೆ, 15 ವರ್ಷಗಳ ಕಾಲ ಇರುತ್ತಾರೆ. ನಮಗೆ ಪಕ್ಷದಿಂದ ನೀಡಿದ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ ಎಂದು ಹೇಳಿದರು. ನವೆಂಬರ್ ಕ್ರಾಂತಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, "ನವೆಂಬರ್ ಅಥವಾ ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028 ರಲ್ಲಿ. ಅದು ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿಯಾಗುತ್ತದೆ ಎಂದರು.

Deputy Chief Minister DK Shivakumar refuted speculation about a leadership change in Karnataka, asserting that both he and Chief Minister Siddaramaiah are committed to the party’s decision. He said any “revolution” would only happen when Congress wins again in 2028.