ಬ್ರೇಕಿಂಗ್ ನ್ಯೂಸ್
28-12-20 04:51 pm Headline Karnataka News Network ದೇಶ - ವಿದೇಶ
ವುಹಾನ್, ಡಿ.28: ಕೊರೊನಾ ವೈರಸ್ ಸೋಂಕಿನ ಬಗ್ಗೆ ಮೊದಲ ಬಾರಿಗೆ ವರದಿ ಮಾಡಿದ್ದ ಸಿಟಿಜನ್ ಜರ್ನಲಿಸ್ಟ್ ಅನ್ನು ಚೀನಾದ ಕೋರ್ಟ್ ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
37 ವರ್ಷದ ಝಂಗ್ ಝಾನ್, ಕೋರ್ಟಿನಿಂದ ಶಿಕ್ಷೆಗೊಳಗಾದ ಮಹಿಳೆ. ಈಕೆ, ಚೀನಾದ ಶಾಂಘೈ ನಿವಾಸಿಯಾಗಿದ್ದು, ಕಳೆದ ಫೆಬ್ರವರಿ 1ರಂದು ವುಹಾನ್ ನಗರಕ್ಕೆ ಬಂದಿದ್ದಳು. ಅಲ್ಲಿನ ಸ್ಥಿತಿಯನ್ನು ನೋಡಿ ಅವಕ್ಕಾದ ಝಾನ್, ಸೋಂಕಿಗೊಳಗಾದ ಜನರು ಆಸ್ಪತ್ರೆಯಲ್ಲಿ ಕ್ಯೂ ನಿಂತಿರುವುದು, ಅಲ್ಲಿನ ಆಸ್ಪತ್ರೆಯ ಸ್ಥಿತಿಗತಿ ಮತ್ತು ನಗರದ ಬೀದಿಗಳು ಖಾಲಿ ಖಾಲಿಯಾಗಿರುವುದನ್ನು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಳು. ಅಲ್ಲೀ ವರೆಗೂ ಸೋಂಕಿನ ಬಗ್ಗೆ ಅಲ್ಲಿನ ಮಾಧ್ಯಮಗಳಾಗಲೀ, ಸರಕಾರವಾಗಲೀ ಹೊರ ಜಗತ್ತಿಗೆ ತಿಳಿಸಿರಲಿಲ್ಲ. ತಾನೇ ಸ್ವಂತ ಕಾಳಜಿಯಿಂದ ಮಾಡಿದ್ದ ವರದಿ ಈಗ ಆಕೆಯನ್ನು ಜೈಲಿಗೆ ಅಟ್ಟುವಂತೆ ಮಾಡಿದೆ.

ಇದಾಗುತ್ತಿದ್ದಂತೆ, ಝನ್ ಝಾಂಗ್ ನನ್ನು ಪೊಲೀಸರು ಬಂಧಿಸಿದ್ದರು. ಎಂಟು ತಿಂಗಳ ಬಂಧಿಸಿಟ್ಟು ಕೋರ್ಟಿನಲ್ಲಿ ವಾದ- ವಿವಾದ ನಡೆದು ಈಗ ತೀರ್ಪು ಹೊರಬಿದ್ದಿದೆ. ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕನ್ನು ನಾನು ಚಲಾಯಿಸಿದ್ದೇನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಕೋರ್ಟಿನಲ್ಲಿ ಝಾಂಗ್ ಹೇಳಿಕೆ ನೀಡಿದ್ದಾಳೆ. ಆದರೆ, ಕೋರ್ಟ್ ಈ ವರದಿಯ ಬಗ್ಗೆ ಬೇರೆಯೇ ಅಭಿಪ್ರಾಯ ಪಟ್ಟಿದೆ. ಇಂಥ ವರದಿಯಿಂದ ಜನರ ನಡುವೆ ಸಂಘರ್ಷ, ಘರ್ಷಣೆಗೆ ಕಾರಣವಾಗಿದ್ದೀಯ ಎಂದು ಹೇಳಿದೆ. ಇದಕ್ಕಾಗಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ವೈರಸ್, ಆಬಳಿಕ ಇಡೀ ಜಗತ್ತಿಗೆ ಹಬ್ಬಿದೆ. ಜಗತ್ತಿನಲ್ಲಿ 80 ಮಿಲಿಯ ಜನರಿಗೆ ಸೋಂಕು ಹರಡಿದರೆ, ಇದರಿಂದಾಗಿ 1.76 ಮಿಲಿಯ ಜನರು ಸಾವು ಕಂಡಿದ್ದಾರೆ. ಶಾಂಘೈ ನಗರದಲ್ಲಿ ಕೋರ್ಟ್ ವಿಚಾರಣೆ ನಡೆಯುತ್ತಿದ್ದಾಗ ಹೊರಭಾಗದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಸೋಂಕನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಚೀನಾದ ಮಾಧ್ಯಮಗಳು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಹೊಗಳಿದೆ.
A Chinese citizen journalist who covered Wuhan's virus outbreak is facing up to five years in jail, according to newly released documents.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm