ಬ್ರೇಕಿಂಗ್ ನ್ಯೂಸ್
23-09-25 08:29 pm HK News Desk ದೇಶ - ವಿದೇಶ
ನವದೆಹಲಿ, ಸೆ.23: ನವದೆಹಲಿಯ ಚೀನೀ ರಾಯಭಾರ ಕಚೇರಿ ಮೂಲಕ ಬೀಜಿಂಗ್ ಭಾರತದ ರಾಜಕಾರಣಿಗಳನ್ನು ಖರೀದಿಸಲು ಮತ್ತು ದೇಶದಲ್ಲಿ ಆಡಳಿತ ಬದಲಾವಣೆಗಾಗಿ ಸಕ್ರಿಯವಾಗಿ ಪ್ರಯತ್ನದಲ್ಲಿ ತೊಡಗಿದೆ ಎಂದು ಸ್ಫೋಟಕ ಮಾಹಿತಿಯನ್ನು ಟಿಬೆಟ್ ಸರ್ಕಾರದ ಮಾಜಿ ಅಧ್ಯಕ್ಷ ಡಾ. ಲೋಬ್ಸಾಂಗ್ ಸಂಗಯ್ ಬಹಿರಂಗಪಡಿಸಿದ್ದಾರೆ.
"ಗಣ್ಯರ ಸಹಕಾರ ಪಡೆದು ಸರ್ಕಾರ ಬದಲಾಯಿಸುವುದು ಪ್ರಾಚೀನ ಚೀನೀ ತಂತ್ರವಾಗಿದೆ ಎಂದು ಅವರು ಎನ್‌ಡಿಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ರಾಜಕೀಯ ನಾಯಕರು, ಬುದ್ಧಿಜೀವಿಗಳು, ಉದ್ಯಮಿಗಳು, ಪತ್ರಕರ್ತರು ಮತ್ತು ಯೂಟ್ಯೂಬರ್‌ಗಳನ್ನು ಸಹ ಖರೀದಿಸುತ್ತಾರೆ. ಅವರು ಟಿಬೆಟ್, ಕ್ಸಿನ್‌ಜಿಯಾಂಗ್ ಮತ್ತು ಮಂಗೋಲಿಯಾದಲ್ಲಿ ಹೇಗೆ ನುಸುಳಿದರೋ ಭಾರತದಲ್ಲಿಯೂ ಅದೇ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಡಾ.ಲೋಬ್ಸಾಂಗ್ ಸಂಗಯ್ ಆತಂಕ ವ್ಯಕ್ತಪಡಿಸಿದ್ದಾರೆ.
ಬೀಜಿಂಗ್‌ನ ರಾಜಕೀಯ ತಂತ್ರಗಳಿಗೆ ಭಾರತವೂ ಹೊರತಾಗಿಲ್ಲ. ದೆಹಲಿಯಲ್ಲಿ ನಡೆಯುವ ಚೀನೀ ರಾಯಭಾರ ಕಚೇರಿಯ ರಾಷ್ಟ್ರೀಯ ದಿನಾಚರಣೆಗೆ ಯಾರು ಹಾಜರಾಗುತ್ತಾರೆ ಎಂಬುದನ್ನು ಪರಿಶೀಲಿಸಿ. ಭಾರತದ ರಾಜಕಾರಣಿಗಳು, ವ್ಯಾಪಾರ ಮುಖಂಡರು ಮತ್ತು ಇತರರ ಛಾಯಾಚಿತ್ರಗಳನ್ನು ನೀವು ಕಾಣಬಹುದು. ಅವರೆಲ್ಲರನ್ನೂ ಖರೀದಿಸಿದ್ದಾರೆಂದಲ್ಲ, ಆದರೆ ಚೀನಿಯರು ಆ ಪ್ರಯತ್ನ ಮಾಡುತ್ತಲೇ ಇರುತ್ತಾರೆ" ಎಂದು ಡಾ. ಸಂಗಯ್ ಹೇಳಿದ್ದಾರೆ.
ಭಾರತದ ನೆರೆಹೊರೆ ದೇಶಗಳಲ್ಲಿ ಗೊಂದಲ ಉಂಟಾಗಿರುವ ಉದಾಹರಣೆ ಉಲ್ಲೇಖಿಸಿದ್ದಾರೆ. ಅಲ್ಲೆಲ್ಲಾ ಬೀಜಿಂಗ್ ತನಗೆ ಬೇಕಾದ ಆಡಳಿತಗಳನ್ನು ಬೆಂಬಲಿಸುತ್ತದೆ. ನೇಪಾಳದಲ್ಲಿ ಒಂದು ಪಕ್ಷ ಚೀನಾ ಪರವಾಗಿದ್ದರೆ, ಇನ್ನೊಂದು ಪಕ್ಷ ಭಾರತದ ಪರವಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ನಲ್ಲಿ, ಚೀನಾ ಆಡಳಿತವೇ ಅಲ್ಲಿನ ನಾಯಕರನ್ನು ಬೆಳೆಸಿದೆ. ಪಾಕಿಸ್ತಾನದಲ್ಲಿ, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಚೀನಾವನ್ನು ಬೆಂಬಲಿಸುತ್ತವೆ. ಇದು ಆ ದೇಶದಲ್ಲಿ ನಾಯಕರನ್ನು ತಮ್ಮತ್ತ ಸೆಳೆಯುವ ತಂತ್ರವಾಗಿದೆ ಎಂದವರು ವಿವರಿಸಿದ್ದಾರೆ.
ಮಾಲ್ಡೀವ್ಸ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳವನ್ನು ಚೀನಾ ಏಕೆ ಬೆಂಬಲಿಸುತ್ತಿದೆ? ಭಾರತದ ಮೇಲೆ ದಾಳಿ ಮಾಡುವ ಭಯೋತ್ಪಾದಕರ ವಿರುದ್ಧದ ವಿಶ್ವಸಂಸ್ಥೆಯ ನಿರ್ಣಯಗಳನ್ನು ಅವರು ಏಕೆ ತಡೆಯುತ್ತಿದ್ದಾರೆ? ಏಕೆಂದರೆ ಅವರು ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ ಎಂದು ಸಂಗಯ್ ಹೇಳಿದರು. ನೀವು ಚೀನಾದೊಂದಿಗೆ ವ್ಯವಹರಿಸಬಹುದು. ಅದರಿಂದ ಲಾಭ ಪಡೆಯಬಹುದು ಎಂದು ಭಾವಿಸಿದರೆ, ಅದು ತಪ್ಪು. ಬೀಜಿಂಗ್‌ನ ಆಟ ಗಣ್ಯರನ್ನು ಹಿಡಿತದಲ್ಲಿಡುವುದೇ ಆಗಿದೆ ಮತ್ತು ಭಾರತ ತಡವಾಗುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಡಾ. ಸಂಗಯ್ ಹೇಳಿದ್ದಾರೆ.
Former Tibetan government-in-exile president Dr. Lobsang Sangay has made explosive allegations that Beijing, through its embassy in New Delhi, is actively attempting to “buy” Indian politicians and influence regime change in the country.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am