Pakistans Khyber Pakhtunkhwa: ಪಾಕಿಸ್ತಾನದ ಖೈಬರ್ ಪಕ್ತುಂಖ್ವಾದಲ್ಲಿ ಬಾಂಬ್ ಸ್ಫೋಟ ; ಮಸೀದಿಯಲ್ಲಿ ಅಡಗಿಸಿಟ್ಟಿದ್ದ ಕಚ್ಚಾ ಬಾಂಬ್ ಸಿಡಿದು ಮಕ್ಕಳು, ಮಹಿಳೆಯರು, ಉಗ್ರರು ಸೇರಿ 24 ಸಾವು

22-09-25 06:58 pm       HK News Desk   ದೇಶ - ವಿದೇಶ

ಪಾಕಿಸ್ತಾನದ ಖೈಬರ್ ಪಕ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ಮಧ್ಯರಾತ್ರಿ ಭಾರೀ ಸ್ಫೋಟ ಸಂಭವಿಸಿದ್ದು, ಉಗ್ರರು, ಸ್ಥಳೀಯ ನಾಗರಿಕರು ಸೇರಿ 24ಕ್ಕೂ ಹೆಚ್ಚು ಸಾವಿಗೀಡಾಗಿದ್ದಾರೆ.

ನವದೆಹಲಿ, ಸೆ.22: ಪಾಕಿಸ್ತಾನದ ಖೈಬರ್ ಪಕ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ಮಧ್ಯರಾತ್ರಿ ಭಾರೀ ಸ್ಫೋಟ ಸಂಭವಿಸಿದ್ದು, ಉಗ್ರರು, ಸ್ಥಳೀಯ ನಾಗರಿಕರು ಸೇರಿ 24ಕ್ಕೂ ಹೆಚ್ಚು ಸಾವಿಗೀಡಾಗಿದ್ದಾರೆ. ತೆಹ್ರೀಕ್ ಇ- ತಾಲಿಬಾನ್ ಉಗ್ರರು ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಬಾಂಬ್ ತಯಾರಿಸುವ ಕಚ್ಛಾ ಸಾಮಗ್ರಿಗಳನ್ನು ಜನವಸತಿ ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿತ್ತು. ಅವುಗಳಿಗೆ ಬೆಂಕಿ ಹತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದ್ದು ಮಕ್ಕಳು, ಮಹಿಳೆಯರು ಸೇರಿ ಹತ್ತು ಜನ ಸ್ಥಳೀಯ ನಾಗರಿಕರು ಹಾಗೂ 14 ಜನ ಉಗ್ರರು ಸಾವನ್ನಪ್ಪಿದ್ದಾರೆ. ತೆಹ್ರೀಕ್ ಇ- ತಾಲಿಬಾನ್ ಉಗ್ರ ಸಂಘಟನೆಯ ಕಮಾಂಡರ್ ಗಳಾದ ಅಮಾನ್ ಗುಲ್ ಮತ್ತು ಮಸೂದ್ ಖಾನ್ ಕೂಡ ಮೃತರಲ್ಲಿ ಸೇರಿದ್ದಾರೆ ಎಂದು ಸ್ಥಳೀಯ ಪೊಲೀಸರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

24 Killed in Pakistani Taliban Explosives Blast in Khyber Pakhtunkhwa

Militants using civilians as human shields': Did Pakistan bomb a Khyber  Pakhtunkhwa village and kill 30 people? What we know - The Times of India

24 killed as blast rocks Pakistani Taliban's compound in Khyber Pakhtunkhwa  province | Today News

Pakistan Air Force bombs village in Khyber Pakhtunkhwa, 24 killed, several  injured | World News – India TV

At least 24 killed in explosion in Pakistan's Khyber Pakhtunkhwa; cause  disputed

Blast at militant compound in northwest Pakistan kills 24, police say |  Arab News

ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳುವುದು, ಮಸೀದಿಗಳಲ್ಲಿ ಬಾಂಬ್ ತಯಾರಿಸುವ ಕಚ್ಚಾ ವಸ್ತುಗಳನ್ನು ಶೇಖರಿಸಿಡುವ ಆರೋಪ ಅಮಾನ್ ಗುಲ್ ಮತ್ತು ಮಸೂದ್ ಖಾನ್ ಮೇಲಿತ್ತು. ಇದೇ ವೇಳೆ, ಈ ಕೃತ್ಯವನ್ನು ಪಾಕಿಸ್ತಾನದ ಸೇನಾ ಪಡೆಯೇ ನಡೆಸಿದೆ ಎನ್ನುವ ಮಾಹಿತಿಯನ್ನೂ ಸ್ಥಳೀಯರು ಹೇಳುತ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಸೇನಾಪಡೆಯನ್ನು ಗುರಿಯಾಗಿಸಿ ತೆಹ್ರೀಕ್ ಇ- ತಾಲಿಬಾನ್ ಸಂಘಟನೆ ಬಾಂಬ್ ದಾಳಿ ನಡೆಸಿತ್ತು. ಅದರಲ್ಲಿ 12 ಮಂದಿ ಸೈನಿಕರು ಮಡಿದಿದ್ದು ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ದಕ್ಷಿಣ ವಜೀರಿಸ್ತಾನದಲ್ಲಿ ನಡೆದಿದ್ದ ಬಾಂಬ್ ದಾಳಿಯ ಹೊಣೆಯನ್ನು ಸೋಶಿಯಲ್ ಮೀಡಿಯಾದಲ್ಲಿ ತೆಹ್ರಿಕ್ ಸಂಘಟನೆ ಹೊತ್ತುಕೊಂಡಿತ್ತು.

ಖೈಬರ್ ಪಕ್ತುಂಖ್ವಾ ಪ್ರಾಂತ್ಯವು ಪಾಕಿಸ್ತಾನ- ಅಫ್ಘಾನಿಸ್ತಾನದ ಗಡಿಯಲ್ಲಿದ್ದು, ಅಫ್ಘಾನಲ್ಲಿ ತಾಲಿಬಾನ್ ಸರ್ಕಾರ ಚಾಲ್ತಿಗೆ ಬಂದ ಬಳಿಕ ಈ ಭಾಗದಲ್ಲಿ ಉಗ್ರವಾದಿ ಕೃತ್ಯಗಳು ಹೆಚ್ಚತೊಡಗಿದೆ. ಇದರ ಹಿಂದೆ ಅಫ್ಘಾನ್ ಕೈವಾಡ ಇದೆಯೆಂದು ಪಾಕ್ ಹೇಳಿದರೆ, ತಾಲಿಬಾನ್ ಸರಕಾರ ನಿರಾಕರಿಸುತ್ತ ಬಂದಿದೆ. ಇದೇ ವೇಳೆ, ಪಾಕಿಸ್ತಾನ ಜೈಲಿನಲ್ಲಿರುವ ಬಹಿಷ್ಕೃತ ನಾಯಕ ಇಮ್ರಾನ್ ಖಾನ್, ಪಾಕ್ ಸರಕಾರವನ್ನು ಟೀಕಿಸಿದ್ದು ಅಮಾಯಕ ಜನರ ಮೇಲೆ ಫೈಟರ್ ಜೆಟ್ ದಾಳಿ ನಡೆಸಿದ್ದರಿಂದ ಈ ದುರಂತ ಆಗಿದೆಯೆಂದು ಹೇಳಿದ್ದಾರೆ.

At least 24 people, including women, children, and militants, were killed in a massive explosion late Sunday night in Pakistan’s Khyber Pakhtunkhwa province. The blast reportedly occurred when crude bomb-making materials hidden inside a mosque by Tehreek-e-Taliban Pakistan (TTP) militants detonated.